Revenue Facts

ಹುಣ್ಣಿಗೆರೆಯಲ್ಲಿ ಸಿದ್ಧವಾಗಿರುವ ವಿಲ್ಲಾಗಳ ಮಾರಾಟ ಯಾವಾಗ..?

ಬೆಂಗಳೂರು, ಆ. 15 : ಹುಣ್ಣಿಗೆರೆ ವಿಲ್ಲಾಗಳಿಗೆ ಬೇಡಿಕೆ ಹೆಚ್ಚಿದ್ದರೂ, ಮಾರಾಟದ ಬಗ್ಗೆ ಇನ್ನೂ ತುಟಿ ಬಿಚ್ಚದ ಬಿಡಿಎ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ತುಮಕೂರು ರಸ್ತೆಯಲ್ಲಿರುವ ದಾಸನಪುರ ಹೋಬಳಿಯ ಹುಣ್ಣಿಗೆರೆಯಲ್ಲಿ ವಿಲ್ಲಾಗಳನ್ನು ನಿರ್ಮಾಣ ಮಾಡಿದೆ. ವಿಲ್ಲಾಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಜುಲೈ ಕೊನೆಯ ವಾರದಲ್ಲಿ ಮಾರಾಟ ತೆರೆದುಕೊಳ್ಳಲಿದೆ. ಅದಾಗಲೇ ಈ ವಿಲ್ಲಾಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ವಿಲ್ಲಾಗಳನ್ನು ವೀಕ್ಷಣೆ ಮಾಡಲು ಹಲವರು ಭೇಟಿ ಕೊಡುತ್ತಿದ್ದಾರೆ.

ಜುಲೈ ಅಂತ್ಯದೊಳಗೆ ಹುಣ್ಣಿಗೆರೆ ವಿಲ್ಲಾಗಳನ್ನು ಮಾರಾಟಕ್ಕೆ ತೆರೆಯುವುದಾಗಿ ಹೇಳಲಾಗಿತ್ತು. ಆದರೆ, ಈಗ ಜುಲೈ ತಿಂಗಳು ಮುಗಿದು ಈಗ ಆಗಸ್ಟ್‌ ತಿಂಗಳು ಅರ್ಧ ಮುಗಿದರೂ ಕೂಡ ಬಿಡಿಎ ಹುಣ್ಣಿಗೆರೆ ವಿಲ್ಲಾಗಳ ಬಗ್ಗೆ ಯಾವ ಮಾಹಿತಿಯನ್ನೂ ಹೇಳಿಲ್ಲ. ಯಾವಾಗ ಮಾರಾಟ ಮಾಡಬಹುದು ಎಂಬ ಸುಳಿವೂ ಕೂಡ ನೀಡಿಲ್ಲ. ಹುಣ್ಣಿಗೆರೆಯಲ್ಲಿ ನಿರ್ಮಾಣವಾಗಿರುವ ವಿಲ್ಲಾಗಳನ್ನು ನೋಡಿ ಇಷ್ಟ ಪಟ್ಟಿರುವ ಗ್ರಾಹಕರು, ಮನೆ ಖರೀದಿಗಾಗಿ ಕಾಯುತ್ತಿದ್ದಾರೆ. ಆದರೂ ಬಿಡಿಎ ಸುಮ್ಮನಿರುವುದು ಯಾಕೆ ಎಂಬುದು ಯಾರಿಗೂ ಅರ್ಥವಾಗಿಲ್ಲ.

271.46 ಕೋಟಿ ರೂ. ವೆಚ್ಚದಲ್ಲಿ ಈ ವಿಲ್ಲಾಗಳನ್ನು ಬಿಡಿಎ ನಿರ್ಮಾಣ ಮಾಡಿದೆ. ವಿಲ್ಲಾ ಯೋಜನೆ ಇದೇ ವರ್ಷ ಅಂದರೆ 2023ರ ಜುಲೈ ತಿಂಗಳಿನಲ್ಲಿ ಮಾರಾಟ ಮಾಡಲಾಗುವುದು ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಡಿಎ ನಿರ್ಮಾಣ ಮಾಡಿದ್ದು, ಈ ಮೂಲಕ ವಿಲ್ಲಾ ಹೊಂದಬೇಕು ಎಂಬುವವರ ಕನಸು ನನಸಾಗುವುದು ಹೆಚ್ಚು ದೂರವಿಲ್ಲ. ಬಿಡಿಎ ಮೊದಲ ವಿಲ್ಲಾ ಯೋಜನೆ ಇನ್ನೆರಡು ತಿಂಗಳಿನಲ್ಲಿ ಯಶಸ್ವಿಯಾಗಿ ಸಂಪೂರ್ಣವಾಗಲಿದೆ ಎಂದು ಮೇ ತಿಂಗಳಿನಲ್ಲಿ ಹೇಳಲಾಗಿತ್ತು.

ಹುಣ್ಣಿಗೆರೆಯಲ್ಲಿ ಬಿಡಿಎ 31 ಎಕರೆ ಜಾಗದಲ್ಲಿ ವಿಲ್ಲಾ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಜಾಗದಲ್ಲಿ ಒಟ್ಟು 170 ವಿಲ್ಲಾಗಳು ನಾಲ್ಕು ಬಿಎಚ್ಕೆಯಲ್ಲಿದೆ. 35*50 ಅಡಿ ಅಳತೆಯಲ್ಲಿ ಇವನ್ನು ನಿರ್ಮಾಣ ಮಾಡಿದೆ. ಇನ್ನು 31 ವಿಲ್ಲಾಗಳನ್ನು ಮೂರು ಬಿಎಚ್ಕೆ ಯಲ್ಲಿದ್ದು, ಇದೂ ಕೂಡ 35*50 ಅಡಿ ಅಳತೆ ಇದೆ. ಮೂರು ಬಿಎಚ್ಕೆಯ 121 ವಿಲ್ಲಾಗಳನ್ನು 30*40 ಅಡಿ ಅಳತೆಯಲ್ಲಿ ನಿರ್ಮಾಣ ಮಾಡಲಾಗುತ್ತದೆ. ಇವೆಲ್ಲಾ ಅದಾಗಲೇ ಶೇ.95 ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

ಈ ವಿಲ್ಲಾಗಳಲ್ಲಿನ ಪ್ರತಿಯೊಂದು ಘಟಕದಲ್ಲಿಯೂ ಕೂಡ ಪಾರ್ಕಿಂಗ್ ಸ್ಥಳಗಳಲ್ಲಿ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಇನ್ನು ಈ ಜಾಗದಲ್ಲಿ 27 ಉದ್ಯಾನವನಗಳಿದ್ದು, ಎರಡು ರೆಸ್ಟೋರೆಂಟ್ಗಳು ಹಾಗೂ ರೆಸ್ಟೋರೆಂಟ್ ಆವರಣಗಳಲ್ಲಿ ಮನರಂಜನಾ ಕೇಂದ್ರಗಳಿವೆ. 170 4 ಬಿಹೆಚ್’ಕೆ ವಿಲ್ಲಾಗಳಿದ್ದು, 152 3ಬಿಹೆಚ್’ಕೆ ವಿಲ್ಲಾಗಳಿವೆ. ಹಾಗೂ 320 1 ಬಿಹೆಚ್’ಕೆ ಫ್ಲಾಟ್ಗಳು ಇವೆ. ವಿಲ್ಲಾಗಳನ್ನು ನೋಡಿರುವವರು ಖರೀದಿ ಮಾಡಲು ಕಾತುರರಾಗಿದ್ದಾರೆ.

Exit mobile version