Revenue Facts

ರಾಷ್ಟ್ರೀಯ ಪಿಂಚಣಿ ಯೋಜನೆ (NPS)ಯಲ್ಲಿ ಭಾರಿ ಬದಲಾವಣೆ! ಕೊನೆಯ ವೇತನದ 40-45% ಕನಿಷ್ಠ ಪಿಂಚಣಿ ಪಡೆಯಲು ಅನುವು?

ನವದೆಹಲಿ ಜೂನ್ 22 : ಕಾಂಗ್ರೆಸ್ ಆಡಳಿತದ ರಾಜ್ಯಗಳು ಹಳೆಯ ಪಿಂಚಣಿ ಯೋಜನೆಯನ್ನ ಮತ್ತೆ ಪರಿಚಯಿಸಿದ ನಂತರ, ಇತ್ತೀಚಿಗಷ್ಟೆ ಕಾಂಗ್ರೆಸ್ ಆಡಳಿತದ ರಾಜ್ಯಗಳ ಪಟ್ಟಿಗೆ ಸೇರಿದ ಕರ್ನಾಟಕದಲ್ಲೂ ಈ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಯ ಬಗ್ಗೆ ಭಾರಿ ಟೀಕೆಗಳು ಎದುರಾಗಿವೆ ಹಾಗೂ ಅದನ್ನು ತೆಗೆದು ಹಾಕಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕೆಂದು ಸರ್ಕಾರಿ ನೌಕರರು ಹೋರಾಟ ನಡೆಸುತ್ತಿದ್ದಾರೆ.

ಇದನ್ನರಿತ ಕೇಂದ್ರ ಸರ್ಕಾರ ಪ್ರಸ್ತುತ ರಾಷ್ಟ್ರೀಯ ಪಿಂಚಣಿ ಯೋಜನೆ (NPS)ಯಲ್ಲಿ ಕೆಲವು ಬದಲಾವಣೆಗಳನ್ನ ಮಾಡಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಇನ್ನಿದು ಕೇಂದ್ರ ಸರ್ಕಾರಿ ನೌಕರರಿಗೆ ತಮ್ಮ ಕೊನೆಯ ವೇತನದ 40-45% ಕನಿಷ್ಠ ಪಿಂಚಣಿ ಪಡೆಯಲು ಅನುವು ಮಾಡಿಕೊಡುತ್ತದೆ.

ಹಳೆಯ ಪಿಂಚಣಿ ಯೋಜನೆಗೆ ಬದಲಾದ ಕೆಲವು ರಾಜ್ಯಗಳನ್ನ ಸಮಾಧಾನಪಡಿಸಲು ಮೋದಿ ಸರ್ಕಾರವು ಪ್ರಸ್ತುತ ಮಾರುಕಟ್ಟೆ-ಲಿಂಕ್ಡ್ ಹೊಸ ಪಿಂಚಣಿ ಯೋಜನೆಯನ್ನ (NPS) ಬದಲಾಯಿಸುವ ಸಾಧ್ಯತೆಯಿದೆ,ಇದರಿಂದ ಯಾವ ರೀತಿ ಸರ್ಕಾರಿ ನೌಕರರಿಗೆ ಅನುಕೂಲ ವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಪಿಂಚಣಿ ವ್ಯವಸ್ಥೆಯನ್ನು ಪರಿಶೀಲಿಸಲು ಸರ್ಕಾರ ಏಪ್ರಿಲ್’ನಲ್ಲಿ ಸಮಿತಿಯನ್ನ ರಚಿಸಿತ್ತು.ಅಂದ್ಹಾಗೆ, ಹಲವಾರು ಕಾಂಗ್ರೆಸ್ ಆಡಳಿತದ ರಾಜ್ಯಗಳು ಹಳೆಯ ಪಿಂಚಣಿ ಯೋಜನೆಯನ್ನ ಮತ್ತೆ ಪರಿಚಯಿಸಿದ ನಂತರ, 2004ರಲ್ಲಿ ಪರಿಚಯಿಸಲಾದ ಯೋಜನೆಯನ್ನ 2023 ರಲ್ಲಿ ಮೋದಿ ಸರ್ಕಾರ ಮರುಪರಿಶೀಲಿಸುತ್ತಿದೆ.

Exit mobile version