Revenue Facts

11,163 ಕೋಟಿ ರೂ ಬೃಹತ್ ಮೊತ್ತದ ಬಜೆಟ್ ಮಂಡಿಸಿದ ಬಿಬಿಎಂಪಿ

11,163 ಕೋಟಿ ರೂ ಬೃಹತ್ ಮೊತ್ತದ ಬಜೆಟ್ ಮಂಡಿಸಿದ ಬಿಬಿಎಂಪಿ

ಬೆಂಗಳೂರು : ಹಣಕಾಸು ವಿಶೇಷ ಆಯುಕ್ತ ಜಯರಾಮ್ ರಾಯಪುರ್ ಹಲವು ಹೊಸ ಯೋಜನೆ ಪ್ರಕಟಿಸಿದ ಬೃಹತ್​ ಗಾತ್ರದ ಬಜೆಟ್​ ಮಂಡಿಸಿದ್ದಾರೆ,ಬೆಂಗಳೂರಿಗೆ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಒಟ್ಟು 11,163 ಕೋಟಿ ಬಜೆಟ್​ ಮಂಡನೆಯಾಗಿದೆ.ಇದೇ ಮೊದಲ ಬಾರಿ ದಾಖಲೆ ಗಾತ್ರದ ಬಜೆಟ್ ಮಂಡನೆ ಮಂಡಿಸಲಾಗಿದೆ.

ಬಿಬಿಎಂಪಿ ಬಜೆಟ್ ಪ್ರಮುಖ ಮುಖ್ಯಾಂಶಗಳು
15 ಹಳೆ ಪಾರ್ಕ್​​ ನವೀಕರಣ, ರೇಬಿಸ್ ಲಸಿಕೆ ಹಾಕಲು 20 ಕೋಟಿ.

ಮಹಿಳಾ ಶೌಚಾಲಯಕ್ಕೆ 250 ಕೋಟಿ, ಪ್ರತಿ ವಾರ್ಡ್​ಗೆ ತಲಾ 2 ಕೋಟಿ.

110 ಹಳ್ಳಿ ರಸ್ತೆಗಳ ದುರಸ್ಥಿಗೆ 300 ಕೋಟಿ.

100 ಎಕರೆಯಲ್ಲಿ 3 ಬೃಹತ್ ತ್ಯಾಜ್ಯ ಸಂಗ್ರಹಣೆ ಸಾಗಣೆ ಕೇಂದ್ರ ಸ್ಥಾಪನೆ.

ಸರ್ಕಾರದ 14 ಇಲಾಖೆಗಳನ್ನು ಒಳಗೊಂಡಂತೆ ICC ಕಂಟ್ರೋಲ್ ರೂಂ.

ಮತ್ತಿಕೆರೆ,‌ ಜಾಲಹಳ್ಳಿ, ಸದಾಶಿವನಗರ ಪೊಲೀಸ್ ಠಾಣೆ, ಯಲಹಂಕ ರೈತ ಸಂತೆ.

ಮೇಖ್ರಿ ಸರ್ಕಲ್ ಸೇರಿ ಒಟ್ಟು 5 ಫ್ಲೈಓವರ್​ ನಿರ್ಮಾಣಕ್ಕೆ 230 ಕೋಟಿ ಮೀಸಲು.

ಓದುವ ಬೆಳಕು-ಹೊಸ ಯೋಜನೆ ಘೋಷಣೆ.

ಮೇಯರ್​ ವಿವೇಚನೆ ಅನುದಾನ 100 ಕೋಟಿಗೆ ಹೆಚ್ಚಳ.

ಬಡ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್​ ನೀಡಲು 20 ಕೋಟಿ.

67 ಕೆರೆ ಅಭಿವೃದ್ಧಿ, 11 ಹೊಸ ಪಾರ್ಕ್​ಗಳ ನಿರ್ಮಾಣ.

195 ಕಿಮೀ ರಾಜಕಾಲುವೆ ತಡೆಗೋಡೆ ನಿರ್ಮಾಣ.

2000 ಒಂಟಿ ಮನೆ ನಿರ್ಮಾಣಕ್ಕೆ 100 ಕೋಟಿ.

ಪಾಲಿಕೆ ನೌಕರರ ಮಕ್ಕಳ ವಿದೇಶಿ ವ್ಯಾಸಂಗಕ್ಕೆ 5 ಕೋಟಿ ಮೀಸಲು.

8091 ಹೊಲಿಗೆ ಯಂತ್ರ ವಿತರಣೆ, ರುದ್ರಭೂಮಿ ಕಾರ್ಮಿಕರ ಗೌರವ ಧನ ಹೆಚ್ಚಳ.

ಬೀದಿ ಬದಿ ವ್ಯಾಪಾರಿಗಳಿಗೆ ಪಟ್ಟಣ ಮಾರಾಟ ಸಮಿತಿ ರಚನೆ.

150 ಕಿಮೀ ವೈಟ್​ ಟ್ಯಾಪಿಂಗ್​​ಗೆ 1310 ಕೋಟಿ ಹಣ ನಿಗದಿ.

350 ಕಿಮೀ ರಿಂಗ್​​​​​​​​​ ರಸ್ತೆಗೆ 450 ಕೋಟಿ ಟೆಂಡರ್​ ಶ್ಯೂರ್​​.

40 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ.

ವಾರ್ಡ್​ಗೊಂದು ಬಿಬಿಎಂಪಿ ಪಬ್ಲಿಕ್​ ಸ್ಕೂಲ್​​ ಮೇಲ್ದರ್ಜೆ

ಅಬ್ದುಲ್​​ ಕಲಾಂ ಹೆಸರಿನಲ್ಲಿ ಕನಸಿನ ಶಾಲೆ ನಿರ್ಮಾಣ.

Exit mobile version