ನೋಂದಣಿ ಕೆಲಸಕ್ಕಾಗಿ ಉಪನೋಂದಣಾಧಿಕಾರಿ ಕಚೇರಿಗೆ ಎಲ್ಲರೂ ಬರುತ್ತಾರೆ. ಆದರೆ, ನೋಂದಣಿ ಕೆಲಸಕ್ಕಾಗಿ ವಿಕಲಚೇತನರು ಬಂದಾಗ ಸ್ವಲ್ಪಮಟ್ಟಿಗೆ ಅಂತಃಕರಣದಿಂದ ಕಾರ್ಯನಿರ್ವಹಿಸಬೇಕಾಗುತ್ತದೆ.
ಎಲ್ಲರಂತೆಯೇ ಅಂಗವೈಕಲ್ಯಗಳಿಂದ ಕೂಡಿರುವ ಕಿವುಡ, ಕುರುಡ ಹಾಗೂ ಮೂಖರಾಗಿರುವ ವಿಕಲಚೇತನರಿಗೂ ಸ್ವಯಾರ್ಜಿತ ಮತ್ತು ಪಿತ್ರಾರ್ಜಿತ ಆಸ್ತಿ ಅಂತಸ್ತುಗಳಿರುತ್ತವ. ಕೆಲವು ಸಂದಂರ್ಭಗಲ್ಲಿ ಅಂದರೆ ಇವರು ತಮ್ಮ ಜೀವನ ನಿರ್ವಾಹಣೆಗಾಗಿ, ತಮ್ಮ ಮಕ್ಕಳ ಮದುವೆಗಾಗಿ, ವಿದ್ಯಾಭ್ಯಾಸಕ್ಕಾಗಿ ಅಲ್ಲದೇ ಇನ್ಯಾವುದೇ ಕಾರಣಗಳಿಗಾಗಿ ತಮ್ಮ ಸ್ವತ್ತನ್ನು ಮಾರಾಟ ಮಾಡಬೇಕಾಗಿರುತ್ತದೆ. ಅದೇ ರೀತಿಯಾಗಿ ಕೆಲವು ಸ್ವಾವಲಂಬಿ ವಿಕಲಚೇತನರು ಕೆಲಸ ಕಾರ್ಯಗಳನ್ನು ಮಾಡಿ ಹಣ ಸಂಪಾದನೆ ಮಾಡಿ ತಮ್ಮಗಾಗಿ ಮತ್ತು ತಮ್ಮ ಸಂಸಾರಕ್ಕಾಗಿ ಸ್ವತ್ತುಗಳನ್ನು ಖರೀದಿ ಮಾಡುವುದು ಕೂಡ ಸರ್ವೇ ಸಾಮಾನ್ಯವಾಗಿದೆ.
ಭಾರತೀಯ ಸಂವಿಧಾನ ಮತ್ತು ಕಾನೂನುಗಳು ಸಾಮಾನ್ಯ ಜನರಂತಯೇ ಕಿವುಡರು, ಕುರುಡರು ಮತ್ತು ಮೂಗರಿಗೆ ಆಸ್ತಿ ನೊಂದಾಣಿಗೆ ಸಂಬಂಧಿಸಿದಂತೆ ಹಲವಾರು ಅನುಕೂಲತೆಗಳನ್ನು ಕಲ್ಪಿಸಿಕೊಟ್ಟಿದೆ. ಈ ವಿಕಲಚೇತನರು ಉಪ ನೋಂದಣಾಧಿಕಾರಿಗಳ ಎದುರು ಹೊದಾಗ ಪತ್ರದಲ್ಲಿನ ಪಾರ್ಟಿಗಳ ಜೊತೆ ಸಾಕ್ಷಿಗಳ ಸಮಕ್ಷಮ ಕಿವುಡರಾಗಿರಲಿ, ಕುರುಡರಾಗಿರಲಿ ಅಥಾವಾ ಮೂಗರಾಗಿರಲಿ ಅವರಿಗೆ ಉಪ ನೊಂದಣಾಧಿಕಾರಿಗಳು ಆ ದಸ್ತಾವೇಜಿನ ಅಂಶಗಳನ್ನು ಮನದಟ್ಟು ಮಾಡಬೇಕು.
ಉಪ ನೋಂಧಾಣಾಧಿಕಾರಿಗಳು ಇವರಿಗೆ ಮನದಟ್ಟು ಮಾಡುವ ಸಂದರ್ಭದಲ್ಲಿ ವ್ಯಾಖ್ಯಾನಕಾರರ/Interpreter ಸಹಾಯವನ್ನು ಮತ್ತು ಆಯಾ ವ್ಯಕ್ತಿಗಳ ಜೊತೆ ಬಂದಿರುವ ವ್ಯಕ್ತಿಗಳ ಸಹಾಯವನ್ನು ಪಡೆದು ಒಟ್ಟಾರೆ ಆ ವ್ಯವಹಾರವು ಅವರಿಗೆ ಮನದಟ್ಟಾಗುವಂತೆ ಮಾಡಬೇಕು ಮತ್ತು ನ್ಯಾಯೋಚಿತವಾಗಿ ಹಣ ಏನಾದರೂ ಬರುವುದಿದ್ದರೆ ಅವರಿಗೆ ತಲುಪುವಂತೆ ಮಾಡಬೇಕು.
ಇಂತಹ ವಿಶೇಷ ಸಂದಂರ್ಭಗಳಲ್ಲಿ ಉಪ ನೋಂದಣಾಧಿಕಾರಿಗಳು ಅವರ ವಿವೇಚನ ಶಕ್ತಿಯನ್ನು ಬಳಸಿ ಆ ವ್ಯವಹಾರದ ಬಗ್ಗೆ ದಸ್ತಾವೇಜಿನ ಹಿಂಬಂದಿಯಲ್ಲಿ ದಾಖಲಿಸಬೇಕು ಹಾಗೂ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನಿರ್ವಹಿಸುವ ಮಿನಿಟ್ ಬುಕ್‌ನಲ್ಲಿ ನಮೂದಿಸಬೇಕು.
ಮಾದರಿ ಉಪನೋಂದಣಾಧಿಕಾರಿ ಕಚೇರಿಗಳ ನಿರ್ಮಾಣ:
ಈ ಮಧ್ಯೆ ನೋಂದಣಾಧಿಕಾರಿ ಕಚೇರಿಗಳಿಗೆ ಬರುವ ವಿಕಲಚೇತನರು, ಮಹಿಳೆಯರು, ಮಕ್ಕಳು, ವೃದ್ಧರ ಸೌಲಭ್ಯಕ್ಕಾಗಿ ಮಾದರಿ ಉಪನೋಂದಣಾಧಿಕಾರಿ ಕಚೇರಿಗಳನ್ನು ನಿರ್ಮಿಸುವ ಸಂಬಂಧ ಕೆಲವು ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.
ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತೆ ಬಿ.ಆರ್. ಮಮತಾ ಅವರ ನೇತೃತ್ವದಲ್ಲಿ ಇತ್ತೀಚೆಗೆ ಸಭೆಯೊಂದನ್ನು ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ.
ಮೊದಲ ಹಂತದ ಕಚೇರಿಗಳು:
ಮಾದರಿ ಉಪನೋಂದಣಿ ಕಚೇರಿಗಳನ್ನು ನಿರ್ಮಾಣ ಮಾಡಲು ಈ ಕೆಳಕಂಡ ಕಚೇರಿಗಳನ್ನು ಆಯ್ಕೆಮಾಡಿಕೊಳ್ಳಲಾಗಿದೆ.
ಉಪನೋಂದಣಿ ಕಚೇರಿ, ಪೀಣ್ಯ
ಉಪನೋಂದಣಿ ಕಚೇರಿ, ಬೊಮ್ಮನಹಳ್ಳಿ,
ಉಪನೋಂದಣಿ ಕಚೇರಿ, ಬ್ಯಾಟರಾಯನಪುರ
ಉಪನೋಂದಣಿ ಕಚೇರಿ, ಯಲಹಂಕ
ಉಪನೋಂದಣಿ ಕಚೇರಿ, ಗಾಂಧಿನಗರ
ಉಪನೋಂದಣಿ ಕಚೇರಿ, ಮಂಡ್ಯ
ಉಪನೋಂದಣಿ ಕಚೇರಿ, ಮಂಗಳೂರು
ಉಪನೋಂದಣಿ ಕಚೇರಿ, ಚಿಂಚೋಳಿ
ಉಪನೋಂದಣಿ ಕಚೇರಿ, ತುಮಕೂರು
ಉಪನೋಂದಣಿ ಕಚೇರಿ, ಗೌರಿಬಿದನೂರು
ಮಾದರಿ ಉಪನೋಂದಣಿ ಕಚೇರಿಗಳಲ್ಲಿ ಈ ಸೌಲಭ್ಯಗಳನ್ನು ಒದಗಿಸಬೇಕು:
* ಮಾದರಿ ಉಪನೋಂದಣಿ ಕಚೇರಿಗಳಲ್ಲಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಪ್ರತ್ಯೇಕವಾಗಿ ನಿರ್ಮಿಸಬೇಕು
* ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿ ಮತ್ತು ಉಪನೋಂದಣಿ ಕಚೇರಿಗಳಿಗೆ ಸ್ವಂತ ಕಟ್ಟಡ ಹೊಂದುವ ಕುರಿತು ತಮ್ಮ ವ್ಯಾಪ್ತಿಯಲ್ಲಿನ ಕರ್ನಾಟಕ ಹೌಸಿಂಗ್ ಬೋರ್ಡ್ ಕಚೇರಿಯಿಂದ ಸಿ.ಎ. ನಿವೇಶನ ಮಂಜೂರಾತಿ ಪಡೆದು ಪ್ರಸ್ತಾವನೆ ಸಲ್ಲಿಸುವ ಕುರಿತು ಮತ್ತೊಮ್ಮೆ ಸಂಬಂಧಪಟ್ಟ ಜಿಲ್ಲಾ ನೋಂದಣಾಧಿಕಾರಿಗಳಿಗೆ ನೆನಪೋಲೆ ರವಾನಿಸುವಂತೆ ಸಭೆಯಲ್ಲಿ ಸೂಚಿಸಲಾಯಿತು.
* ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಪನೋಂದಣಿ ಕಚೇರಿಗಳ ಕಟ್ಟಡದ ಮಾಲೀಕರು ಒಪ್ಪಿದಲ್ಲಿ ಮಾದರಿ ಉಪನೋಂದಣಿ ಕಚೇರಿಯನ್ನಾಗಿ ಮಾಡಲು ಈಗಿರುವ ಕಟ್ಟಡದಲ್ಲಿ ಕೆಲವು ಮಾರ್ಪಾಡುಗಳನ್ನು ಅವರ ಖರ್ಚಿನಲ್ಲಿ ಮಾಡಿಸಲು ಕಟ್ಟಡದ ಮಾಲೀಕರನ್ನು ಕೋರುವಂತೆ ಉಪನೋಂದಣಾಧಿಕಾರಿಗಳಿಗೆ ಸೂಚಿಸಬಹುದಾಗಿದೆ ಹಾಗೂ ಬಾಕಿ ಇರುವ ಬಾಡಿಗೆ ಮೊತ್ತವನ್ನು ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು ಎಂದು ಸೂಚಿಸಿದರು.
* ಕುಡಿಯುವ ನೀರಿನ ವ್ಯವಸ್ಥೆ, ಕಾಯುವ ಕೊಠಡಿ, ಸಹಾಯವಾಗಿ ಕೇಂದ್ರ, ಮಾಹಿತಿ ಸೂಚನಾ ಫಲಕಗಳ ವ್ಯವಸ್ಥೆ ಮಾಡುವುದು
* ಕಚೇರಿ ಸಿಬ್ಬಂದಿಗೆ ಮತ್ತು ಸಾರ್ವಜನಿಕರಿಗೆ ಪ್ರತ್ಯೇಕ (ಪುರುಷ ಮತ್ತು ಮಹಿಳೆಯರಿಗೆ) ಶೌಚಾಲಯ ವ್ಯವಸ್ಥೆ, ಕಚೇರಿಯಲ್ಲಿ ಸಾರ್ವಜನಿಕರಿಗೆ ಕೆಫೆಟೇರಿಯಾ ವ್ಯವಸ್ಥೆ ಕಲ್ಪಿಸುವುದು.
* ಚಿಕ್ಕಮಕ್ಕಳ ತಾಯಂದಿರಿದ್ದಲ್ಲಿ ತಾಯಿ ಮಗುವಿಗೆ ಹಾಲುಣಿಸುವ ಪ್ರತ್ಯೇಕ ವ್ಯವಸ್ಥೆ ಮತ್ತು ಸಣ್ಣ ಮಕ್ಕಳಿಗೆ ಪ್ಲೆ ಏರಿಯಾ ಕಲ್ಪಿಸುವುದು
* ಮಾದರಿ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ರ್ಯಾಂಪ್ ವ್ಯವಸ್ಥೆ ಮತ್ತು ವಿಕಲಚೇತನರಿಗೆ ವೀಲ್ ಚೇರ್ ಕಲ್ಪಿಸುವಂತೆ ಸೂಚಿಸಲಾಯಿತು.
* ಮಾದರಿ ಉಪನೋಂದಣಾಧಿಕಾರಿ ಕಚೇರಿ ನಿರ್ಮಿಸುವ ಕುರಿತು ನೋಡಲ್ ಅಧಿಕಾರಿಯನ್ನಾಗಿ ಚಿಕ್ಕಬಳ್ಳಾಪುರ ಜಿಲ್ಲಾ ನೋಂದಣಾಧಿಕಾರಿ ಶ್ರೀದೇವಿ ಅವರನ್ನು ಆಯ್ಕೆ ಮಾಡಲಾಗಿದೆ.
* ಮಾದರಿ ಉಪನೋಂದಣಿ ಕಚೇರಿಯನ್ನು ನಿರ್ಮಿಸಲು ಆಯ್ಕೆ ಆಗಿರುವ ಉಪನೋಂದಣಾಧಿಕಾರಿ ಕಚೇರಿಗಳ ಕಾಮಗಾರಿಯನ್ನು ಡಿಸೆಂಬರ್ 2022 ಒಳಗಾಗಿ ಪೂರ್ಣಗೊಳಿಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.