Revenue Facts

ಮನೆಯ ಮುಖ್ಯದ್ವಾರ ವಾಸ್ತು ಪ್ರಕಾರ ಇಲ್ಲದಿದ್ದರೆ ಸಮಸ್ಯೆನಾ..?

ಮನೆಯ ಮುಖ್ಯದ್ವಾರ ವಾಸ್ತು ಪ್ರಕಾರ ಇಲ್ಲದಿದ್ದರೆ ಸಮಸ್ಯೆನಾ..?

Vaastu

ಬೆಂಗಳೂರು, ಜ. 05 : Vaastu:  ಮನೆ ಎಂದ ಮೇಲೆ ವಾಸ್ತು ಸರಿಯಾಗಿ ಇರಬೇಕು. ಆಗ ಮಾತ್ರವೇ ಮನೆಯಲ್ಲಿ ಸುಖ, ಶಾಂತಿ ಹಾಗೂ ನೆಮ್ಮದಿ ನೆಲೆಸಲು ಸಾಧ್ಯ. ಮನೆಯನ್ನು ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಾಣ ಮಾಡಲಿಲ್ಲ ಎಂದರೆ ಸಾಕಷ್ಟು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ. ಮನೆಯ ಏಳಿಗೆಗೆ ಅದಾಗಲೇ ನಿರ್ಮಾಣವಾಗಿರುವ ಮನೆಯ ಏಳಿಗೆಗೆ ವಾಸ್ತು ಶಾಸ್ತ್ರದಲ್ಲಿ ಒಂದಷ್ಟು ಪರಿಹಾರಗಳು ಇರುತ್ತವೆ. ಅದನ್ನು ಅನುಸರಿಸುವುದರಿಂದ ಮನೆಯಲ್ಲಿನ ಅಲ್ಪ-ಸ್ವಲ್ಪ ಸಮಸ್ಯೆಗಳು ಬಗೆ ಹರಿಯುತ್ತವೆ. ಅದನ್ನು ಹೊರತು ಪಡಿಸಿದರೆ, ವಾಸ್ತು ಪ್ರಕಾರ ಮನೆಯನ್ನು ನಿರ್ಮಿಸಿಲ್ಲ ಎಂದರೆ, ತೊಂದರೆಗಳು ಹೆಚ್ಚಾಗುತ್ತವೆಯೇ ಹೊರತು, ಕಡಿಮೆಯಂತೂ ಆಗುವುದಿಲ್ಲ.

ಮನೆಯ ವಾಸ್ತು ಶಾಸ್ತ್ರ ಪ್ರಾರಂಭವಾಗುವುದೇ ಮುಖ್ಯದ್ವಾರದಿಂದ. ಹಾಗಾಗಿ ಮುಖ್ಯ ದ್ವಾರದ ದಿಕ್ಕು ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಮನೆ ನಿರ್ಮಾಣ ಮಾಡುವಾಗ ಮುಖ್ಯದ್ವಾರಕ್ಕೆ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ಮುಖ್ಯದ್ವಾರ ಯಾವ ದಿಕ್ಕಿನಲ್ಲಿ ಬಂದರೆ ಮನೆಯವರಿಗೆ ಒಳ್ಳೆಯದಾಗುತ್ತದೆ. ಸಾಮಾನ್ಯವಾಗಿ ಎಲ್ಲರಿಗೂ ಸೂಕ್ತವೆನಿಸುವ ದಿಕ್ಕು ಯಾವುದು ಎಂಬ ಬಗ್ಗೆ ಗಮನಿಸಿ ಮನೆಯ ದ್ವಾರವನ್ನು ನಿರ್ಮಾಣ ಮಾಡಬೇಕು. ಬಾಡಿಗೆ ಮನೆಗಳಿಗೆ ಹೋಗುವ ಮುನ್ನ ಮೊದಲು ಮುಖ್ಯದ್ವಾರ ಯಾವ ದಿಕ್ಕಿನಲ್ಲಿದೆ. ಅದು ನಿಮ್ಮ ರಾಶಿಗೆ ಆಗಿ ಬರುತ್ತದೆಯಾ ಎಂಬ ಬಗ್ಗೆ ಮೊದಲು ತಿಳಿದುಕೊಳ್ಳಿ.

 

ಅಕಸ್ಮಾತ್‌ ನಿಮ್ಮ ಮನೆಯ ಮುಖ್ಯದ್ವಾರವೂ ನಿಮ್ಮ ರಾಶೀಗೆ ವಿರುದ್ಧವಾದ ದಿಕ್ಕಿನಲ್ಲಿದ್ದರು, ಅದು ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತವೆ. ಮನೆಯ ಮುಖ್ಯದ್ವಾರದಿಂದ ಹಿಡಿದು ಯಾವ ಕೊಠಡಿ ಎಲ್ಲಿ ಬರಬೇಕು ಎಂಬ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಮನೆಯ ಮುಂಬಾಗಿಲು ಯಾವಾಗಲು ಮನೆಗೆ ಒಳಿತನ್ನು ಮಾಡುವಂತಿರಬೇಖು. ಮುಖ್ಯದ್ವಾರದ ಮೂಲಕವೇ ಮನೆಗೆ ಋಣಾತ್ಮಕ ಹಾಗೂ ಧನಾತ್ಮಕ ಶಕ್ತಿಗಳು ಪ್ರವೇಶಿಸುವುದು. ಜೊತೆಗೆ ಮನೆಯಲ್ಲಿ ವಾಸವಿರುವವರು ಕೂಡ ನಿತ್ಯ ಮುಖ್ಯದ್ವಾರವನ್ನು ಬಳಸುವುದರಿಂದ ದಿಕ್ಕು ಸರಿಯಾಗಿ ಇರುವುದು ಸೂಕ್ತ.

 

ಇನ್ನು ಮನೆಯ ಮುಖ್ಯದ್ವಾರ ಹೆಚ್ಚು ವಿಸ್ತಾರವಾಗಿರಬೇಕು. ನೆಲದಿಂದ ಕೊಂಚ ಎತ್ತರಚವಾಗಿ ಮುಖ್ಯದ್ವಾರ ಇರುವಂತೆ ಎಚ್ಚರವಹಿಸಿ. ಮನೆಯ ಮುಂಬಾಗಿಲು ಮೂಲೆಗಿಂತ ಕೆಲ ಅಡಿಗಷ್ಟು ದೂರದಲ್ಲಿರಲಿ. ಬಾಗಿಲು ಬಿರುಕು ಬಿಟ್ಟರೆ ಕೂಡಲೇ ಬದಲಾಯಿಸಿ ಇಲ್ಲವಾದರೆ, ಸಮಸ್ಯೆಗಳು ಹೆಚ್ಚಾಗುತ್ತವೆ. ಇನ್ನು ಮನೆಯ ಮುಂಬಾಗಿಲು ವಿರುದ್ಧ ದಿಕ್ಕಿನಲ್ಲಿದ್ದರೆ, ಸಮಸ್ಯೆಗಳು ಹೆಚ್ಚಾಗುತ್ತವೆ. ಇದಕ್ಕೆ ಹೆಚ್ಚು ಪರಿಹಾರಗಳಿಲ್ಲ. ಇಂತಹ ಸಂದರ್ಭಗಳಲ್ಲಿ ಮನೆಯನ್ನು ಬದಲಾಯಿಸುವುದು ಸೂಕ್ತವಾದ ನಿರ್ಧಾರ. ಮನೆಯ ಮುಖ್ಯದ್ವಾರದಲ್ಲೇ ಸಮಸ್ಯೆ ಇದ್ದಾಗ, ಮನೆ ಒಳಗೆ ಏನೇ ಸರಿ ಇದ್ದರೂ ಸಮಸ್ಯೆಗಳಾಗುತ್ತವೆ.

ಮನೆಯೊಳಗೆ ಕೊಠಡಿಗಳು, ಮನೆಯ ವ್ಯವಸ್ಥೆ ಎಲ್ಲವೂ ಸುಸಜ್ಜಿತವಾಗಿದ್ದರೂ ಕೂಡ ಮನೆಯ ಮುಖ್ಯದ್ವಾರ ವಿರುದ್ಧ ದಿಕ್ಕಿನಲ್ಲಿ ಇದ್ದರೆ, ಮನೆಯನ್ನು ಬದಲಾಯಿಸುವುದು ಸೂಕ್ತ. ನಿಮಗೆ ಮನೆಯ ಮುಖ್ಯದ್ವಾರದಲ್ಲಿ ಸಮಸ್ಯೆ ಇದ್ದರೆ, ವಾಸ್ತು ಶಾಸ್ತ್ರಜ್ಞರನ್ನು ಸಂಪರ್ಕಿಸಿ, ಮನೆಗೆ ಯಂತ್ರಗಳನ್ನು ಮಾಡಿಸಬಹುದು. ಆದರೆ ಇದು ಸಮಸ್ಯೆಗಳಿಗೆ ಮುಕ್ತಿ ಕೊಡುವುದಿಲ್ಲ. ಸಮಸ್ಯೆಯ ಪ್ರಮಾಣವನ್ನು ತಗ್ಗಿಸುತ್ತದೆ ಅಷ್ಟೇ. ಹೆಚ್ಚು ದಿನಗಳ ಕಾಲ ಅಂತಹ ಮನೆಗಳಲ್ಲಿ ಇರುವುದರ ಬದಲು ಆದಷ್ಟು ಬೇಗನೇ ಮನೆಯನ್ನು ಬದಲಾಯಿಸಿದರೆ, ನಿಮಗೆ, ನಿಮ್ಮ ಕುಟುಂಬಕ್ಕೆ ಒಳ್ಳೆಯದು.

Exit mobile version