Revenue Facts

ಮನೆಗಳ ಹರಾಜಿಗೂ ಸಿದ್ಧವಾಗಲಿದೆ ಆಪ್‌ : ವಂಚನೆ ತಪ್ಪಿಸಲು ಕ್ರಮ

ಮನೆಗಳ ಹರಾಜಿಗೂ ಸಿದ್ಧವಾಗಲಿದೆ ಆಪ್‌ : ವಂಚನೆ ತಪ್ಪಿಸಲು ಕ್ರಮ

ಬೆಂಗಳೂರು, ಮೇ. 03 : ಬ್ಯಾಂಕ್‌ ಗಳಲ್ಲಿ ಗ್ರಾಹಕರು ಗೃಹಸಾಲ ಪಡೆದು ಇಲ್ಲವೇ ಮನೆ ಮೇಲೆ ಸಾಲ ಮಾಡಿ ತೀರಿಸದೇ ಇದ್ದಾಗ ಬ್ಯಾಂಕ್‌ ಗಳು ಸಾಕಷ್ಟು ಅವಕಾಶಗಳನ್ನು ಕೊಡುತ್ತವೆ. ಸಮಯ ಮೀರಿದ ಬಳಿಕ ಆ ಮನೆಯನ್ನು ಹರಾಜಿಗೆ ಹಾಕಲು ಮುಂದಾಗುತ್ತಾರೆ. ಮನೆಯನ್ನು ಹರಾಜು ಹಾಕಿದಾಗ ಯಾರು ಬೇಕಿದ್ದರೂ ಖರೀದಿ ಮಾಡಬಹುದು. ಬ್ಯಾಂಕ್‌ ಹರಾಜಿಗೆ ಹಾಕಿದಾಗ ಕಡಿಮೆ ಬೆಲೆಗೆ ಮನೆಗಳು ಸಿಗುತ್ತವೆ. ಹೀಗಾಗಿ ಹಲವರು ಹರಾಜಿನಲ್ಲಿ ಮನೆಯನ್ನು ಖರೀದಿ ಮಾಡಲು ಮುಂದಾಗುತ್ತಾರೆ.

ಹೀಗೆ ಹರಾಜಿನಲ್ಲಿ ಮನೆ ಖರೀದಿ ಮಾಡುವಾಗ ಯಾವುದೇ ರೀತಿಯ ವಂಚನೆಗಳು ನಡೆಯಬಾರದು. ಪಾರದರ್ಶಕತೆ ಹೆಚ್ಚಲಿ ಖರೀದಿದಾರರು ಹಾಗೂ ಮಾರಾಟಗಾರರಿಗೆ ರಿಯಲ್‌ ಎಸ್ಟೇಟ್‌ ವ್ಯವಹಾರದಲ್ಲಿ ದಕ್ಷತೆ ಇರಲಿ ಎಂದು ಈಗ ಹರಾಜು ಪ್ರಕ್ರಿಯೆಗೆ ಅಪ್ಲಿಕೇಶನ್‌ ಅನ್ನು ಸಿದ್ಧಪಡಿಸಲು ಭಾರತದ ಬ್ಯಾಂಕ್‌ ಕ್ಷೇತ್ರ ಮುಂದಾಗಿದೆ. ಈ ಆಪ್‌ ಅನ್ನು ಬಿಡುಗಡೆ ಮಾಡಿದರೆ, ಇನ್ಮುಂದೆ ಪ್ರತಿಯೊಬ್ಬರೂ ಹರಾಜಿಗೆ ಹಾಕುವ ಮನೆಗಳನ್ನು ಆನ್‌ ಲೈನ್‌ ಮೂಲಕವೇ ನೋಡಬಹುದು.

ಇ-ಹರಾಜು ಆಪ್‌ ನಲ್ಲಿ ಮನೆಯ ಲೊಕೇಶನ್‌ ಸೇರಿದಂತೆ ಪ್ರತಿಯೊಂದು ದಾಖಲೆಯೂ ಲಭ್ಯವಿರುತ್ತದೆ. ಆಪ್‌ ಮೂಲಕವೇ ಮನೆಯನ್ನು ನೋಡಿ ಹರಾಜಿನಲ್ಲಿ ಖರೀದಿ ಮಾಡಬಹುದು. ಬ್ಯಾಂಕ್‌ ಗಳು ಈಗಾಗಲೇ ಆಪ್‌ ಅನ್ನು ಪ್ರಾರಂಭಿಸಲು ಸಜ್ಜಾಗಿವೆ. ಈ ಆಪ್‌ ನಲ್ಲಿ 5 ಲಕ್ಷ ಮನೆಗಳನ್ನು ಇ-ಹರಾಜು ನಡೆಯಲಿದೆ. ಇದರಲ್ಲಿ ಆಸ್ತಿ ಇರುವ ಸ್ಥಳ, ಆರಂಭಿಕ ಹರಾಜು ಮೊತ್ತದ ವಿವರ, ಹಾಗೂ ಆಸ್ತಿ ಬಗೆಗಿನ ಸಂಪೂರ್ಣ ಮಾಹಿತಿಗಳನ್ನು ಕೂಡ ಲಭ್ಯವಿರಲಿದೆ.

 

ಮುಂದಿನ 5 ವರ್ಷಗಳಲ್ಲಿ 1 ಲಕ್ಷ ಹರಾಜು ಸೇರಿದಂತೆ 6 ಲಕ್ಷ ವಹಿವಾಟು ನಡೆಯುವ ನಿರೀಕ್ಷೆಯನ್ನು ಹೊಂದಿದೆ. ಇನ್ನು ಇ-ಹರಾಜು ಆಪ್ ನಲ್ಲಿ ಮನೆ ಖರೀದಿಸುವುದು ಬಹಳ ಸರಳವಾಗಿ ನಡೆಯುತ್ತದೆ. ಹಾಗೇನಾದರೂ ಇ-ಹರಾಜು ಆಪ್ ಬಂದರೆ, ಜನರಿಗೆ ಮನೆ ಹರಾಜಿನಲ್ಲಿ ಮನೆಯನ್ನು ಖರೀದಿ ಮಾಡುವುದು ಬಹಳ ಸುಲಭವಾಗುತ್ತದೆ.

Exit mobile version