ಬೆಂಗಳೂರು, ಜ. 17;ಇಂದು ಮಧ್ಯಾಹ್ನ ನಗರದ ಮಾಗಡಿ ರಸ್ತೆಯ ಟೋಲ್ ಗೇಟ್ ಬಳಿ ಹಾರಿಬಲ್ ಹಿಟ್ ಅಂಡ್ ರನ್ ಕೇಸ್ ಒಂದು ದಾಖಲಾಗಿದ್ದು ಇದು ದೆಹಲಿಯ ಹಿಟ್ ಅಂಡ್ ರನ್ ಕೇಸನ್ನೇ ನೆನಪಿಸುವಂತಿದೆ. ಟೋಲ್ ಗೇಟ್ ಬಳಿ ಕೆಎ 05 ಕೆಯು 0823 ಹೊಂಡಾ ಆ್ಯಕ್ಸಿಸ್ ದ್ವೀಚಕ್ರ ಸವಾರನೊಬ್ಬ ರಾಂಗ್ ರೂಟ್ ನಲ್ಲಿ ರಸ್ತೆಗೆ ಎಂಟ್ರಿಯಾಗಿ ರಸ್ತೆಯಲ್ಲಿ ಚಲಿಸುತ್ತಿದ್ದ ಟಾಟಾ ಸುಮೋ ಹೊಂದಕ್ಕೆ ದಿಡಿರನೇ ಡಿಕ್ಕಿ ಹೊಡೆದಿದ್ದು ಇದನ್ನು ಟಾಟಾ ಸುಮೋ ಡ್ರೈವರ್ ಪ್ರಶ್ನಿಸುತ್ತಿದ್ದಂತೆ ಬೈಕ್ ಹತ್ತಿ ಎಸ್ಕೇಪ್ ಆಗಲು ಮುಂದಾಗಿದ್ದಾನೆ.
ಬೈಕ್ ಸವಾರನನ್ನು ಹಿಡಿಯಲು ಮುಂದಾದ ಟಾಟಾ ಸುಮೋ ಚಾಲಕನು ದ್ವೀಚಕ್ರವಾಹನದ ಹಿಂಬದಿಯ ಕಬ್ಬಿಣದ ರಾಡ್ ಒಂದನ್ನು ಹಿಡಿದುಕೊಂಡು ನೇತುಬಿದ್ದಿದ್ದು ದ್ವೀಚಕ್ರವಾಹನ ಸವಾರನು ತನ್ನ ವಾಹನವನ್ನು ನಿಲ್ಲಿಸದೇ ಮಾಗಡಿ ರಸ್ತೆ ಟೋಲ್ ಗೇಟ್ ಬಳಿಯಿಂದ ಹೊಸಳ್ಳಿ ಮೆಟ್ರೋ ನಿಲ್ದಾಣದ ವರೆಗೆ ದರ ದರನೆ ಎಳೆದೊಯ್ದಿದ್ದಾನೆ. ಇದನ್ನು ಕಂಡ ಸಾರ್ವಜನಿಕರು ತಮ್ಮ ಮೊಬೈಲ್ ನಿಂದ ಈ ಬೀಕರ ದೃಶ್ಯವನ್ನು ರೆಕಾರ್ಡ್ ಮಾಡಿ ತಮ್ಮ ವಾಹನಗಳ ಸಹಾಯದಿಂದ ಟಾಟಾ ಸುಮೋ ಚಾಲಕನನ್ನು ಎಳೆದೋಯ್ಯುತ್ತಿದ್ದ ದ್ವೀಚಕ್ರವಾಹನ ಸವಾರನನ್ನು ತಡೆದು ಹಿಗ್ಗಾ ಮುಗ್ಗ ಥಳಿಸಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ವಿಜಯ ನಗರ ಪೊಲೀಸರು ಬೈಕಿನ ಹಿಂದೆ ನೇತುಬಿದ್ದು ಒಂದುವರೆ ಕಿಮೀ ಎಳೆದೊಯ್ತಲ್ಪಟ್ಟ ಟಾಟಾಸುಮೋ ಚಾಲಕ ಆಸ್ಪತ್ರೆಗೆ ದಾಖಲಿಸಿ್ದ್ದಾರೆ.
