Revenue Facts

ಬಿಡಿಎ ವಿರುದ್ಧ ಹೈ ಕೋರ್ಟ್‌ ಅಸಮಾಧಾನ : ಭೂ ಮಾಲೀಕರಿಗೆ ಟಿಡಿಆರ್‌ ನೀಡುವಂತೆ ಸೂಚನೆ

High court of Karnataka

5th and 6th public exam notification quashed by court

ಬೆಂಗಳೂರು, ಮಾ. 16 : ಬಿಡಿಎಗೆ ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದ್ದು, ಇದು ಈಸ್ಟ್ ಇಂಡಿಯಾ ಕಂಪನಿ ಮನಸ್ಥಿತಿ ತೋರಿಸುತ್ತದೆ ಎಂದು ಹೇಳಿದೆ. ಬಿಡಿಎ ಮಾರೇನಹಳ್ಳಿಯ ಭೂ ಮಾಲೀಕರಿಗೆ ವರ್ಗಾವಣೆ ಅಭಿವೃದ್ಧಿ ಹಕ್ಕು ಪ್ರಮಾಣ ಪತ್ರವನ್ನು ನೀಡದ ಕಾರಣ ಕೆಲವರು ಕೋರ್ಟ್‌ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದೆ ಹೈಕೋರ್ಟ್‌ ಬಿಡಿಎಯ ಕ್ರಮಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದೆ.

ಅಭಿವೃದ್ಧಿ ಕಾರ್ಯಗಳ ಸಂಬಂಧ ಬಿಡಿಎ ಜಮೀನು ನೀಡಿತ್ತು. ಆದರೆ, ಭೂ ಮಾಲೀಕರಿಗೆ ಟಿಡಿಆರ್‌ ಅನ್ನು ನೀಡಲು ಹಿಂಜರಿದಿತ್ತು. ಈ ಬಗ್ಗೆ ಜಯಮ್ಮ ಮತ್ತು ಇತರರು ಸೇರಿ ಹೈ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿಗಳ ವಿಚಾರಣೆಯನ್ನು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ನಡೆಸಿತ್ತು. ಈ ಹಿಂದೆ ಬಿಡಿಎ ಟಿಡಿಆರ್ ನೀಡುವುದಕ್ಕೆ ಸಾಧ್ಯವಿಲ್ಲ ಎಂದು ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿತು. ಅಲ್ಲದೆ, ಭೂ ಮಾಲೀಕರಿಗೆ ಟಿಡಿಆರ್ ಪ್ರಮಾಣಪತ್ರಗಳನ್ನು ವಿತರಿಸುವಂತೆ ಸೂಚನೆ ನೀಡಿ ಆದೇಶಿಸಿದೆ.

ಅಲ್ಲದೇ, ಮುಂದಿನ ಮೂರು ತಿಂಗಳಲ್ಲಿ ಈ ಸೂಚನೆಯನ್ನು ಪಾಲಿಸಿದ ವರದಿಯನ್ನು ಹೈಕೋರ್ಟ್‌ನ ರಿಜಿಸ್ಟ್ರಾರ್ ಜನರಲ್‌ಗೆ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದೆ. ಹಾಗೊಂದು ವೇಳೆ ಬಿಡಿಎ ಅಧಿಕಾರಿಗಳು ನ್ಯಾಯಾಲಯ ನಿಗದಿ ಪಡಿಸಿರುವ ದಿನಾಂಕಕ್ಕೆ ಟಿಡಿಆರ್ ಪ್ರಮಾಣ ಪತ್ರವನ್ನು ನೀಡಬೇಕು. ಟಿಡಿಆರ್‌ ಅನ್ನು ವಿತರಣೆ ಮಾಡದಿದ್ದಲ್ಲಿ ಭೂ ಮಾಲೀಕರಿಗೆ ದಂಡ ಪಾವತಿಸಬೇಕು. ಅದೂ ಕೂಡ ಬಿಡಿಎ ಆಯುಕ್ತರು ವಿಳಂಬವಾದ ದಿನಗಳಿಗೆ ಪ್ರತಿ ದಿನ 1 ಸಾವಿರ ರೂ.ಗಳಂತೆ ದಂಡವನ್ನು ಪಾವತಿಸಕು ಎಮದು ಹೇಳಿದೆ. ಈ ದಂಡವನ್ನು ತಪ್ಪು ಮಾಡಿದ ಅಧಿಕಾರಿಗಳಿಂದಲೇ ವಸೂಲು ಮಾಡಬೇಕು ಎಂದು ಕೋರ್ಟ್‌ ನಿರ್ದೇಶಿಸಿದೆ.

ಬೆಂಗಳೂರು ದಕ್ಷಿಣ ತಾಲೂಕಿನ ಮಾರೇನಹಳ್ಳಿಯಲ್ಲಿ ರಸ್ತೆ ಅಗಲೀಕರಣಕ್ಕಾಗಿ ಬಿಡಿಎ ಅರ್ಜಿದಾರರ ಭೂಮಿಯನ್ನೇ ಸ್ವಾಧೀನ ಪಡಿಸಿಕೊಂಡಿತ್ತು. ಆ ಜಾಗದ ಬದಲಿಗೆ ಅರ್ಜಿದಾರರಿಗೆ ಟಿಡಿಆರ್ ಸರ್ಟಿಫಿಕೇಟ್ ನೀಡುವುದಾಗಿ ಭರವಸೆ ನೀಡಿತ್ತು. ಹಾಗಾಘಿ ಅರ್ಜದಾರರು ಜಾಗವನ್ನು ಬಿಟ್ಟು ಪ್ರಮಾಣ ಪತ್ರಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಬಿಡಿಎ ಅರ್ಜಿದಾರರ ಜಾಗದ ದಾಖಲೆಗಳೇ ಸರಿ ಇಲ್ಲ ಎಂದು ನಿರಾಕರಣೆ ಮಾಡಿತ್ತು. ಜಾಗದ ಹಕ್ಕುಪತ್ರ ಸರಿ ಇದ್ದರೂ ಬಿಡಿಎ ಟಿಡಿಆರ್ ಅನ್ನು ನಿರಾಕರಿಸುತ್ತಿದೆ ಎಂದು ಕೋರ್ಟ್ ಮೊರೆ ಹೋಗಿದ್ದರು

Exit mobile version