Revenue Facts

ನಿಮಗಿನ್ನು ಅನ್ನ ಭಾಗ್ಯದ ದುಡ್ಡು ಬ್ಯಾಂಕ್ ಖಾತೆಗೆ ಬಂದಿಲ್ವಾ.? ಈ‌ ಮಾಹಿತಿ ಓದಿ..!

ನಿಮಗಿನ್ನು ಅನ್ನ ಭಾಗ್ಯದ ದುಡ್ಡು  ಬ್ಯಾಂಕ್ ಖಾತೆಗೆ ಬಂದಿಲ್ವಾ.? ಈ‌ ಮಾಹಿತಿ ಓದಿ..!

ಎರಡನೇ ಯಜಮಾನ ಖಾತೆಗೆ ಹಣ ಟ್ರಾನ್ಸ್‌ಫಾರ್ ಆಗಲಿದೆ.ಕಾಂಗ್ರೆಸ್ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆ ಅನ್ನಭಾಗ್ಯ ಯೋಜನೆಯ ಯಜಮಾನಿ ಫಲಾನುಭವಿ ಖಾತೆಗೆ ಇದುವರೆಗೂ ಹಣ ಬರದೇ ಇದ್ದಲ್ಲಿ ಇನ್ಮುಂದೆ ಎರಡನೇ ಯಜಮಾನ ಆಥವಾ ಯಜಮಾನಿ ಖಾತೆಗೆ ಹಣವನ್ನು ಡಿಬಿಟಿ ಟ್ರಾನ್ಸಫರ್ ಮೂಲಕ ವರ್ಗಾವಣೆ ರಾಜ್ಯ ಸರ್ಕಾರ ನಿರ್ಧರಿಸಿದೆ.

ಡಿಸೆಂಬರ್ ತಿಂಗಳಿಂದ ಹಣ ವರ್ಗಾವಣೆ ನಿರೀಕ್ಷೆ

ಹೀಗಾಗಿ ಅನ್ನಭಾಗ್ಯದ ಹಣವನ್ನು ತಮ್ಮ ಖಾತೆಯಲ್ಲಿ ಪಡೆಯದೇ ಇದ್ದವರಿಗೆ ಈ ಡಿಸೆಂಬರ್‌ ತಿಂಗಳಿಂದ ಒಂದು ಕೆಜಿ ಅಕ್ಕಿಗೆ ತಲಾ 30 ರೂಪಾಯಿಯಂತೆ ಒಬ್ಬರಿಗೆ 170 ರೂಪಾಯಿಯನ್ನು ರಾಜ್ಯ ಸರ್ಕಾರ ಜಮೆ ಮಾಡಲಿದೆ.ಹಾಗಾಗಿ ರಾಜ್ಯದ ಜನರ ಖಾತೆಗೆ ಇದುವರೆಗೆ ಪಡಿತರವನ್ನು ಸಮರ್ಪಕವಾಗಿ ಪಡೆದರೂ ಸಹ ಅನ್ನಭಾಗ್ಯ ಯೋಜನೆಯಡಿ ಬಾಕಿ 5 ಕೆಜಿ ಅಕ್ಕಿ ಸಿಗದೇ ಇದ್ದ ಕುಟುಂಬಕ್ಕೆ ಈ ಡಿಸೆಂಬರ್‌ ತಿಂಗಳಿಂದ ಹಣ ಜಮೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ತಾಂತ್ರಿಕ ಅಂಶಗಳ ಅಡಚಣೆಯಿಂದ ಹಣ ಬಂದಿಲ್ಲವೆಂದು ಸ್ಪಷ್ಟೀಕರಿಸಿದ ಸರ್ಕಾರ 

ಮನೆ ಯಜಮಾನಿ ಖಾತೆಯಲ್ಲಿನ ತಾಂತ್ರಿಕ ಸಮಸ್ಯೆಯಿಂದ ಹಣ ಹಾಕಲು ಆಗಿರುವುದಿಲ್ಲ. ಹೀಗಾಗಿ ಅವರ ತರುವಾಯ ಸೀನಿಯರ್‌ ಇರುವವರ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ಈಚೆಗೆ ತೀರ್ಮಾನವನ್ನು ತೆಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಡಿಸೆಂಬರ್‌ನಿಂದ ಬಾಕಿ ಇರುವವರಿಗೂ ಸಹ ಅವರವರ ಎರಡನೇ ಯಜಮಾನಿ ಖಾತೆಗೆ ಹಣ ನೇರವಾಗಿ ಜಮೆ ಆಗಲಿದ್ಯಂತೆ.

ಚೈತನ್ಯ ,ರೆವೆನ್ಯೂ ಫ್ಯಾಕ್ಟ್ ನ್ಯೂಸ್

Exit mobile version