Revenue Facts

ನಿಮ್ಮ ಮನೆಯ ಗೋಡೆಗಳಿಗೆ ಹಸಿರು ಬಣ್ಣ ಎಷ್ಟು ಚೆಂದ

ಬೆಂಗಳೂರು, ಜೂ. 12 : ಸಾಮಾನ್ಯವಾಗಿ ಮನೆಯ ಗೋಡೆಗಳಿಗೆ ಬಿಳಿ, ತಿಳಿ ಹಳದಿ, ಬಣ್ಣಗಳನ್ನು ಬಳಸಲಾಗುತ್ತದೆ. ಸ್ವಂತ ಮನೆ ಉಳ್ಳವರು, ತಿಳಿ ನೀಲಿ, ಅಡುಗೆ ಮನೆಗೆ ಗ್ರೇ, ಹೀಗೆ ಒಂದೊಂದು ವಾಲ್ ಗೂ ಒಂದೊಂದು ಬಣ್ಣವನ್ನು ಬಳಸಿ, ಮನೆಯ ಅಂದವನ್ನು ಹೆಚ್ಚಿಸಲಾಗುತ್ತದೆ. ಆದರೆ, ಮನೆಯನ್ನು ಹಸಿರು ಬಣ್ಣದಿಂದ ಕಂಗೊಳಿಸುವಂತೆ ಮಾಡಿದರೆ, ಇನ್ನು ಚೆಂದವಾಗಿ ಕಾನಿಸುತ್ತದೆ. ಹಸಿರಿನಲ್ಲೂ ಹಲವು ಬಗೆಯ ಶೇಡ್ಸ್ ಗಳಿದ್ದು, ಮನೆಯ ಅಂದಕ್ಕೆ ಸೂಕ್ತವಾದ ಬಣ್ಣವನ್ನು ಪಳಸಬಹುದಾಗಿದೆ.

ಮಿಂಟ್ ಗ್ರೀನ್ ಗೋಡೆ ಬಣ್ಣ :ಲಿವಿಂಗ್‌ ರೂಮ್‌ನ ಹಿತವಾದ ನೋಟಕ್ಕಾಗಿ ನಾಜೂಕಾದ ಮಿಂಟ್‌ ಗ್ರೀನ್ ಬಣ್ಣವನ್ನು ಆಯ್ದುಕೊಳ್ಳಿ. ಅದಕ್ಕೆ ತದ್ವಿರುದ್ಧ ಬಣ್ಣಗಳ ಕಣ್ಣು ಕೋರೈಸುವಂತಹ ಕಲಾಕೃತಿಗಳನ್ನು ಗೋಡೆಯ ಮೇಲೆ ಬಳಸಿರಿ. ಈ ಬಣ್ಣ ಲಿವಿಂಗ್‌ ರೂಮ್‌ ನಲ್ಲಿ ಹೆಚ್ಚು ಕಾಲ ಕಳೆಯುವ ಸದಸ್ಯರಿಗೆ ಉಲ್ಲಾಸವನ್ನು ನೀಡುತ್ತದೆ. ಲಿವಿಂಗ್‌ ರೂಮ್‌ ವಿಚಾರದಲ್ಲೂ ತಿಳಿ ಪಾಚಿ ಬಣ್ಣ ಅತ್ಯುತ್ತಮ ಆಯ್ಕೆಯೇ ಹೌದು. ಅದನ್ನೇ ಡೈನಿಂಗ್‌ ಕೋಣೆಗೂ ವಿಸ್ತರಿಸಬಹುದು. ಕಂದು ಅಥವಾ ಬಂಗಾರದ ಬಣ್ಣ ಅದರ ಅಂದವನ್ನು ನೂರ್ಮಡಿಗೊಳಿಸುತ್ತದೆ.

ಪಾಚಿ ಹಸಿರು : ತೆರೆದ ಕೋಣೆಗಳಿಗಾಗಿ ಹಸಿರು ಬಣ್ಣದ ವಾರ್ಮರ್‌ ಶೇಡ್‌ಗಳು ಹೆಚ್ಚು ಚೆನ್ನಾಗಿ ಹೊಂದಿಕೊಳ್ಳುತ್ತವೆ. ಓಪನ್‌ ಕಿಚನ್‌ ಅಥವಾ ಡೈನಿಂಗ್‌ ಹಾಲ್‌ ಗೆ ತಿಳಿ ಹಸಿರು ಬಣ್ಣವನ್ನು ಬಳಸಿರಿ. ಮೊರಾಕ್ಕನ್‌ ಕ್ಲೇ ಟೈಲ್ಸ್‌ ಆಯ್ಕೆ ಮಾಡಿಕೊಂಡರೆ ಅದು ಪಾಚಿ ಹಸಿರು ಬಣ್ಣಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ ಮತ್ತು ಒಂದು ವಿಶ್ರಾಂತ ಭಾವವನ್ನು ಮೂಡಿಸುತ್ತದೆ. ಅದಕ್ಕೆ ಹೊಂದಿಕೆ ಆಗುವಂತಹ ಸ್ಟೂಲ್‌ಗಳನ್ನು ಜೋಡಿಸಿ.

ಸೇಜ್‌ ಗ್ರೀನ್: ಮಲಗುವ ಕೋಣೆಗಳ ಗೋಡೆಗಳಿಗೆ ಸೇಜ್‌ ಗ್ರೀನ್ ಥೀಮ್ ಆಯ್ಕೆ ಮಾಡಿಕೊಳ್ಳಿ. ಇದು ಹಸಿರು ಬಣ್ಣದ ಬೂದು-ಹಸಿರು ಛಾಯೆ. ಈ ತಿಳಿ ಛಾಯೆಗಳು ಶಾಂತಿಯುತ ವಾತಾವರಣವನ್ನು ಸೃಷ್ಟಿಸಲು ಪರಿಪೂರ್ಣವಾಗಿವೆ. ಬಿಳಿ ಹಾಸಿಗೆ ಮತ್ತು ತಟಸ್ಥ ಬಣ್ಣದ ಸಂಯೋಜನೆಯು ಹಸಿರು ಬಣ್ಣದ ಗೋಡೆಯ ವಿನ್ಯಾಸದೊಂದಿಗೆ ಸರಿಯಾದ ಎದ್ದುಕಾಣುತ್ತದೆ.

ಪಚ್ಚೆ ಹಸಿರು: ಆಧುನಿಕ ಅಡುಗೆ ಕೋಣೆಗಳು ಪಚ್ಚೆ ಅಥವಾ ಮರಕತ ಹಸಿರು ಬಣ್ಣದಲ್ಲಿ ಮನಮುಟ್ಟುವಂತಿರುತ್ತವೆ. ಇದರ ಜೊತೆಗೆ ಬೇಕಾದರೆ ಲೋಹ ವರ್ಣವನ್ನು ಸಂಯೋಜನೆ ಮಾಡಿದರೆ ಇನ್ನಷ್ಟು ಎದ್ದು ಕಾಣುತ್ತದೆ. ಅಂದವನ್ನು ಹೆಚ್ಚಿಸಲು ಸ್ಟೇನ್‌ಲೆಸ್‌ ಸ್ಟೀಲ್‌ ಕೌಂಟರ್‌ಟಾಪ್‌ಗಳು ಮತ್ತು ಕ್ಯಾಬಿನೆಟ್‌ಗಳನ್ನು ಅಳವಡಿಸಿ.

ಸ್ಮೋಕಿ ಗ್ರೀನ್: ಸ್ನಾನಗೃಹ ಸೇರಿದಂತೆ ಯಾವುದೇ ಕೋಣೆಗಳಿಗಾದರೂ ತಟಸ್ಥ ಬಣ್ಣದ ಥೀಮ್‌ ಆಗಿ ಸ್ಮೋಕಿ ಗ್ರೀನ್‌ ಬಳಸಬಹುದು. ಸಣ್ಣ ಸ್ನಾನಗೃಹಗಳಿಗೆ ಈ ಬಣ್ಣ ಬಳಸಿದರೆ ಆವರಣವು ವಿಶಾಲವಾಗಿ ಕಾಣಿಸುತ್ತದೆ. ಒಂದು ವೇಳೆ ನಿಮಗೆ ಲಿವಿಂಗ್‌ ರೂಮ್‌ಗೆ ಹಸಿರು ಬಣ್ಣ ಇಷ್ಟವಾಗದಿದ್ದಲ್ಲಿ, ಕೇಂದ್ರ ಭಾಗದಲ್ಲಿ ಮಾತ್ರ ಹಸಿರು ಅಗತ್ಯ ಎನಿಸಿದರೆ ಒಳಾಂಗಣವನ್ನು ಆಹಾ ಎನಿಸುವ ಟ್ರೆಂಡಿ ಮತ್ತು ಸುಂದರವಾಗಿ ವಿನ್ಯಾಸಗೊಳಿಸಿ.

Exit mobile version