ಬೆಂಗಳೂರು ಜನರ ಜೀವನಾಡಿ ಎಂದು ಕರೆಸಿಕೊಳ್ಳುವ ಬಿಎಂಟಿಸಿ, ಸಿಲಿಕಾನ್ ಸಿಟಿ ಮಂದಿಗೆ ಉತ್ತಮಸೇವೆ ಕೊಟ್ಟು ಜನರ ಗಮನ ಸೆಳೆದಿತ್ತು. ಆದ್ರೆ ಇದೀಗ ಅದೇ ಬಿಎಂಟಿಸಿ ನೋಡಿ ಜನ ಭಯಬೀಳುತ್ತಿದ್ದಾರೆ. ಚಾಲಕರು & ನಿರ್ವಾಹಕರ ಮೇಲೆ ಗದಾಪ್ರಹಾರ ನಡೆಸುತ್ತಿರೋ ಅಧಿಕಾರಿಗಳಿಂದ ಆದಾಯ ʻಟಾರ್ಗೆಟ್ ಕಿರುಕುಳಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದಾರೆ ಎನ್ನೋ ಮಾತುಗಳು ಕೇಳಿ ಬರ್ತಿವೆ
ಬಿಎಂಟಿಸಿ ಬಲಿಯಾಗ್ತಿವೆ ಸಾಲು-ಸಾಲು ಜೀವಗಳು
ಇದರ ಪರಿಣಾಮಕ್ಕೆ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಬಿಎಂಟಿಸಿಗೆ ಸಾಲು ಸಾಲು ಹೆಣಗಳು ಬೀಳ್ತಿವೆ. ಅಷ್ಟಕ್ಕೂ ಬಿಎಂಟಿಸಿಬಸ್ ಗೆ ಸಿಲುಕಿ ಜನ ಜೀವ ಬಿಡುತ್ತಿರೋದ್ಯಾಕೆ ಗೊತ್ತಾ ?
ಟ್ರಾಫಿಕ್ ಜಂಜಾಟದಿಂದ ಬೇಸತ್ತು ಹೋಗಿರುವ BMTC ಡ್ರೈವರ್ ಮತ್ತು ಕಂಡೆಕ್ಟರ್ಸ್..!
ಹೌದು…ಟ್ರಾಫಿಕ್ ಜಂಜಾಟದ ನಡುವೆ ಚಾಲಕ, ನಿರ್ವಾಹಕರು ಹಗಲು ರಾತ್ರಿ ಕಣ್ಣಿಗೆ ಎಣ್ಣೆಬಿಟ್ಕೊಂಡು ಕೆಲಸ ನಿರ್ವಹಿಸುತ್ತಿದ್ದಾರೆ. ಒಂದು ಕಡೆ ಸರಿಯಾದ ಸಂಬಳ ಬರ್ತಿಲ್ಲ. ಮತ್ತೊಂದು ಕಡೆ ಅಧಿಕಾರಿಗಳ ಕಿರುಕುಳ. ಸಾರಿಗೆ ನೌಕರರಿಗೆ ಒಂದಿಲ್ಲೊಂದು ರೂಪದಲ್ಲಿ ಸಮಸ್ಯೆಗಳ ಸರಮಾಲೆ ಇದ್ದೆ ಇದೆ. ಅದರ ಸಾಲು ಇದೀಗ ಮತ್ತಷ್ಟು ದೊಡ್ಡದಾಗ್ತಿದೆ. ಹೀಗೆ ನಾನಾ ಸಮಸ್ಯೆಗಳಿಂದ ನಿರ್ವಾಹಕರು ಹಾಗೂ ಚಾಲಕರು ಬೇಸತ್ತಿದ್ದಾರೆ. ಇದ್ರ ನಡುವೆ ಆದಾಯ ಸಂಗ್ರಹದಲ್ಲಿ ಟಾರ್ಗೆಟ್ ಸುಳಿಗೆ ಸಿಲುಕಿ ಡ್ರೈವರ್ ಗಳು ಹಾಗೂ ಕಂಡೆಕ್ಟರ್ ಗಳು ಕಂಗಾಲಾಗ್ತಿದ್ದಾರೆ. ಬಿಎಂಟಿಸಿ ಅಧಿಕಾರಿಗಳ ಹಿಟ್ಲರ್ ಆಡಳಿತ ಮತ್ತೊಮ್ಮೆ ಬದಲಾಗಿದೆ. ಅಧಿಕಾರಿಗಳ ಕಿರುಕುಳ ಹೇಳಿಕೊಳ್ಳಲಾಗದೆ ಬಿಎಂಟಿಸಿ ಡ್ರೈವರ್ ಹಾಗೂ ಚಾಲಕರು ಒತ್ತಡದಲ್ಲಿಯೆ ಪ್ರತಿದಿನ ಕೆಲಸ ಮಾಡ್ತಾ ಇದ್ದಾರೆ. ಮೇಲಾಧಿಕಾರಿಗಳು ಕೋಟ್ಯಾನು ಕೋಟಿ ನಷ್ಟ ಮಾಡ್ತಿದ್ರೂ ಕ್ರಮ ತೆಗೆದುಕೊಳ್ಳದ ಅಧಿಕಾರಿಗಳು, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಅನ್ನೋಹಾಗೆ ಚಾಲಕ ಮತ್ತು ನಿರ್ವಾಹಕರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹೀಗಾಗಿನೇ ಸಾರಿಗೆ ಸಿಬ್ಬಂದಿ ಒತ್ತಡದಲ್ಲಿ ಕೆಲಸ ಮಾಡ್ತಾ ಇದ್ದು, ನಗರದಲ್ಲಿ ಕಳೆದ ಒಂದೇ ವರ್ಷದಲ್ಲಿ ಬಿಎಂಟಿಸಿ ಬಸ್ ಗೆ ಸಿಲುಕಿ 32 ಜನ ಪ್ರಾಣ ಬಿಟ್ಟಿದ್ದಾರೆ.. ಇಷ್ಟೆಲ್ಲಅವಘಡ ನಡೆದರು ಬಿಎಂಟಿಸಿ ತಾನಾಗೇನು ಗೊತ್ತಿಲ್ಲದ ಹಾಗೆ ಕಂಡು ಕಾಣದಂತೆ ಕುಳಿತಿದೆ.
ಆದಾಯ ಹೆಚ್ಚಿಸಿಕೊಳ್ಳೋಕೆ BMTC ಅನುಸರಿಸ್ತಿದ್ಯಾ ಸರ್ವಾಧಿಕಾರಿ ಧೋರಣೆ.?
ಒಟ್ನಲ್ಲಿ ಬಿಎಂಟಿಸಿ ತನ್ನ ಆದಾಯದ ಮೂಲವನ ಹೆಚ್ಚಿಸಿಕೊಳ್ಳಲು ಬಿಎಂಟಿಸಿ ಡ್ರೈವರ್ ಹಾಗೂ ಕಂಡೆಕ್ಟರ್ ಟಾರ್ಗೆಟ್ ಮಾಡಿದ್ದು, ಇದರ ಎಫೆಕ್ಟ್ ನಿಂದ ಸಿಬ್ಬಂದಿಗಳು ನೆಮ್ಮದಿಇಂದ ಕೆಲಸ ಮಾಡಲು ಆಗ್ತಿಲ್ಲ್. ಇನಾದ್ರು ಬಿಎಂಟಿಸಿ ಸರ್ವಾಧಿಕಾರಿ ಆಡಳಿತವನ್ನ ನಿಲ್ಲಿಸಿ ಸಿಬ್ಬಂದಿ ಹಾಗೂ ಜನರ ಜೀವ ಉಳಿಸಬೇಕಿದೆ.
ಚೈತನ್ಯ, ರೆವಿನ್ಯೂ ಫ್ಯಾಕ್ಟ್ ನ್ಯೂಸ್ , ಬೆಂಗಳೂರು