Revenue Facts

GST Council Meeting: ಜಿಎಸ್‍ಟಿ ಮಂಡಳಿ ಸಭೆ ಹಲವು ವಸ್ತುಗಳ ತೆರಿಗೆ ಇಳಿಕೆ

ನವದೆಹಲಿ : ಕೇಂದ್ರ ಸರ್ಕಾರ ಕೆಲವು ಸರಕುಗಳ ಮೇಲಿನ ಜಿಎಸ್‌ಟಿ ಇಳಿಸಲು ನಿರ್ಧರಿಸಿದ್ದು, ಇತರೆ ವಸ್ತುಗಳ ಮೇಲೆ ಜಿಎಸ್‌ಟಿ ವಿನಾಯಿತಿ ನೀಡಿದೆ. ಅದ್ರಂತೆ, ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದರು.ಸರಕು ಮತ್ತು ಸೇವಾ ತೆರಿಗೆ ಮಂಡಳಿಯ 50ನೇ ಸಭೆಯಲ್ಲಿ ಕೇಂದ್ರ ಸರ್ಕಾರ ಹಲವು ವಸ್ತುಗಳ ತೆರಿಗೆ ಹೊರೆ ಇಳಿಸಿದೆ. ಕುದುರೆ ಸ್ಪರ್ಧೆ, ಕ್ಯಾಸಿನೋ ಮತ್ತು ಆನ್‌ಲೈನ್ ಗೇಮಿಂಗ್ ಮೇಲೆ ಶೇ. 28 ರಷ್ಟು ತೆರಿಗೆ ವಿಧಿಸಲು ಜಿಎಸ್‌ಟಿ ಮಂಡಳಿ ಮಂಗಳವಾರ ಅನುಮೋದನೆ ನೀಡಿದೆ. ಅಲ್ಲದೆ, ಕ್ಯಾನ್ಸರ್ ಔಷಧಕ್ಕೆ ತೆರಿಗೆ ವಿನಾಯ್ತಿ ಮತ್ತು ಚಿತ್ರಮಂದಿರಗಳಲ್ಲಿ ಮಾರಾಟ ಮಾಡುವ ಆಹಾರ-ಪಾನೀಯಗಳ ಮೇಲಿನ ತೆರಿಗೆಯನ್ನು ಶೇ. 5 ರಷ್ಟು ಇಳಿಸಲೂ ಒಪ್ಪಿಗೆ ನೀಡಲಾಗಿದೆ.

ಪಾನ್ ಮಸಾಲಾ, ಕೆಫಿನ್ ಪಾನೀಯಗಳು,ಕಾರ್ಬೊನೇಟೆಡ್ ಪಾನೀಯಗಳು,ಹೊಗೆಸೊಪ್ಪು. ಹೊಗೆಸೊಪ್ಪಿನೊಂದಿಗೆ ತಯಾರಿಸಿದ ವಸ್ತುಗಳು, ಟೈರ್, ಎಸಿ ಯಂತ್ರಗಳು, ಡಿಪ್ ಐದು ಆನ್‌ಲೈನ್ ವಾಷಿಂಗ್ ಪೈಪ್‌ಗಳು . ಈಗ ಹೊಸದಾಗಿ ಈ ಪಟ್ಟಿಗೆ ಆನ್‌ಲೈನ್ ಗೇಮಿಂಗ್, ಕುದುರೆ ಸ್ಪರ್ಧೆ ಮತ್ತು ಕ್ಯಾಸಿನೋ ಜೂಜು ಪಾತ್ರೆ ತೊಳೆಯುವ ಯಂತ್ರಗಳು, ಧೂಮಪಾನದ ಪೈಪ್‌ಗಳು ಎಲ್ಲವೂ 28 ಪ್ರತಿಶತ ಜಿಎಸ್‌ಟಿ ಸ್ಲ್ಯಾಬ್‌ನಲ್ಲಿವೆ.

Exit mobile version