Revenue Facts

ಹುತಾತ್ಮ ಸಿಬ್ಬಂದಿಯ ಗುಂಪು ವಿಮಾ ಮೊತ್ತ 50 ಲಕ್ಷಕ್ಕೆ ಏರಿಕೆ : ಸಿಎಂ ಸಿದ್ದರಾಮಯ್ಯ

ಹುತಾತ್ಮ ಸಿಬ್ಬಂದಿಯ ಗುಂಪು ವಿಮಾ ಮೊತ್ತ 50 ಲಕ್ಷಕ್ಕೆ ಏರಿಕೆ : ಸಿಎಂ ಸಿದ್ದರಾಮಯ್ಯ

ಬೆಂಗಳೂರು;ಇಂದು ಪೊಲೀಸ್ ಸಂಸ್ಕರಣ ದಿನದ ಪ್ರಯುಕ್ತ, ಮೈಸೂರು ರಸ್ತೆಯ ಹುತಾತ್ಮರ ಉದ್ಯಾನವನದಲ್ಲಿ ಹುತಾತ್ಮರಿಗೆ ಗೌರವ ನಮನ ಸಲ್ಲಿಸಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ.ಹುತಾತ್ಮ ಪೊಲೀಸ್ ಸಿಬ್ಬಂದಿಗಳ ಗುಂಪು ವಿಮಾ ಮೊತ್ತವನ್ನು 20 ರಿಂದ 50 ಲಕ್ಷಕ್ಕೆ ಏರಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ ಹುತಾತ್ಮರಾಗುವ ಸಿಬ್ಬಂದಿ ವಿಮಾ ಮೊತ್ತವನ್ನು ಹೆಚ್ಚಳ ಮಾಡುವುದಾಗಿ ಭರಸವೆ ನೀಡಿದ ಸಿಎಂ, ಇದೇ ವೇಳೆ ಪೊಲೀಸರ ಕರ್ತವ್ಯದ ಬಗ್ಗೆ ಶ್ಲಾಘಿಸಿದ್ದಾರೆ.2,400 ಪೊಲೀಸ್ ಪೇದೆಗಳನ್ನು ಶೀಘ್ರವೇ ನೇಮಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿ, 5 ಸಂಚಾರಿ ಮತ್ತು ಠಾಣೆಗಳನ್ನು ಸ್ಥಾಪಿಸಲಾಗುವುದು 6 ಮಹಿಳಾ ಪೊಲೀಸ್ ಎಂದೂ ತಿಳಿಸಿದ್ದಾರೆ. ಇದಲ್ಲದೇ, ಗೃಹ 2025 ಯೋಜನೆಯಡಿ ಒಟ್ಟು 2,225 ಪೊಲೀಸ್ ವಸತಿಗೆ 1450 ಕೋಟಿ ಅನುದಾನ ರಿಲೀಸ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಆರೋಗ್ಯ ಭಾಗ್ಯ ಯೋಜನೆಯಡಿ ಪೊಲೀಸ್ ಸಿಬ್ಬಂದಿ ಮತ್ತವರ ಕುಟುಂಬಸ್ಥರಿಗಾಗಿ 7100 ನೀಡಲಾಗಿದೆ,ರಾಜ್ಯಾದ್ಯಂತ ಪೊಲೀಸ್ ಮಕ್ಕಳ ಶಿಕ್ಷಣಕ್ಕಾಗಿ ರಾಜ್ಯದ ಏಳು ಸ್ಥಳಗಳಲ್ಲಿ ಪೊಲೀಸ್ ಪಬ್ಲಿಕ್ ಸ್ಕೂಲ್ ತೆರೆಯಲಾಗುವುದು. ಪೊಲೀಸ್ ಕ್ಯಾಂಟೀನ್ ಕಲ್ಪಿಸಲಾಗಿದೆ ಎಂದು ಸಿಎಂ ವಿವರಿಸಿದ್ದಾರೆ.ಕೇಂದ್ರ ಸರ್ಕಾರ ತರುತ್ತಿರುವ 3 ಹೊಸ ಕಾನೂನುಗಳು ದೇಶದ ಸಂಪೂರ್ಣ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ಬದಲಾಯಿಸಲಿವೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಪೊಲೀಸ್ ಸಂಸ್ಮರಣಾ ದಿನಾಚರಣೆಯಲ್ಲಿ ಪಾಲ್ಗೊಂಡು ಹುತಾತ್ಮ ಪೊಲೀಸ್ ಯೋಧರಿಗೆ ಅವರು ನಮನ ಸಲ್ಲಿಸಿದರು. ‘ಪೊಲೀಸ್ ವ್ಯವಸ್ಥೆ ಇಲ್ಲದೆ ಯಾವುದೇ ದೇಶದಲ್ಲಿ ಗಡಿ ಭದ್ರತೆ ಅಥವಾ ಆಂತರಿಕ ಭದ್ರತೆ ಸಾಧ್ಯ. ದೇಶದಲ್ಲಿ ಪೊಲೀಸರ ಕರ್ತವ್ಯ ಎಲ್ಲಕ್ಕಿಂತ ಕಠಿಣವಾಗಿದೆ’ ಎಂದು ಶಾ ಹೇಳಿದ್ದಾರೆ.

Exit mobile version