Revenue Facts

Gruhalakshmi :ಗೃಹ ಲಕ್ಷ್ಮಿ ಯೋಜನೆ ನೋಂದಣಿ ವೇಳಾಪಟ್ಟಿ ಪರಿಶೀಲನೆ ವಿವರ

ಬೆಂಗಳೂರು, ಜು. 22 :ಗೃಹ ಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಲು ಪ್ರಕ್ರಿಯೆ ಆರಂಭವಾಗಿರುವದರಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವವರು ನಿಮ್ಮನಿಗದಿತ ನೋಂದಣಿ ವೇಳಾಪಟ್ಟಿಯನ್ನು ಸುಲಭವಾಗಿ ತಿಳಿದುಕೊಳ್ಳಬಹುದು.ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ನೀವು ನಿಮ್ಮ ಮೊಬೈಲ್ ನಂಬರ್ ಇಂದ ಮೆಸೇಜ್ ಮಾಡಿದ ನಂತರ ಯಾವ ಸ್ಥಳಕ್ಕೆ ತೆರಳಿ ಅರ್ಜಿಯನ್ನು ಸಲ್ಲಿಸಬೇಕು ಎಂಬುದರ ಮಾಹಿತಿಯನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಕುಳಿತ ಜಾಗದಿಂದಲೇ ಸಂಪೂರ್ಣ ವಿವರವನ್ನು ಪರಿಶೀಲಿಸಬಹುದಾಗಿದೆ.ಈ ಕೆಳಗೆ ನೀಡಲಾದ ವಿಧಾನದ ಮೂಲಕ ನೋಂದಣಿ ವೇಳಾಪಟ್ಟಿಯನ್ನು ಪರಿಶೀಲನೆ ಮಾಡಿಕೊಂಡು ನಿಮಗೆ ನೀಡಲಾದ ದಿನಾಂಕದಂದು ನೋಂದಣಿ ಮಾಡಿಕೊಳ್ಳಬಹುದಾಗಿದೆ.

*ವೆಬ್ ಸೈಟ್ ಮೂಲಕ https://sevasindhugs1.karnataka.gov.in/gl-stat-sns/ ಲಿಂಕ್ ಕ್ಲಿಕ್ ಮಾಡಿ

*8147500500/8277000555 ಈ ಸಹಾಯವಾಣಿ ಸಂಖ್ಯೆಗೆ ನಿಮ್ಮ 12 ಅಂಕೆಯ ಪಡಿತರ ಚೀಟಿಯ ಸಂಖ್ಯೆಯನ್ನು ಎಸ್‌ಎಂಎಸ್ ಮೂಲಕ ಕಳುಹಿಸಿ ವಿವರಗಳನ್ನು ಪಡೆಯಬಹುದು.

*ನಿಮ್ಮ ಪಡಿತರ ಚೀಟಿ(Ration card)ಯ 12 ಸಂಖ್ಯೆಗಳನ್ನು ನಮೂದಿಸಬೇಕು. ನಂತರ ಕೆಳಗಿನ ಭಾಗದಲ್ಲಿ ಕ್ಯಾಪ್ಚವನ್ನು ಎಂಟರ್ ಮಾಡಿ, ಸ್ಥಿತಿಯನ್ನು ಪರಿಶೀಲಿಸಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

*ನಂತರ ಪುಟದಲ್ಲಿ, ಗೃಹಲಕ್ಷ್ಮಿ ಯೋಜನೆಗೆ ನೊಂದಣಿಯನ್ನು ಮಾಡಿಕೊಳ್ಳಲು ಸ್ಥಳ, ದಿನಾಂಕ ಹಾಗೂ ಸಮಯವನ್ನು ನೀಡಲಾಗಿರುತ್ತದೆ.

ನೀವು ಮೇಲಿನ ಹಂತಗಳನ್ನು ಪರಿಶೀಲಿಸಿಕೊಂಡು ಗೃಹಲಕ್ಷ್ಮಿ ಯೋಜನೆ ನೋಂದಣಿಯ ವೇಳಾಪಟ್ಟಿಯ ವಿವರವನ್ನು ತಿಳಿದುಕೊಳ್ಳಬಹುದಾಗಿದೆ.ರಾಜ್ಯದ ಗ್ರಾಮ ಒನ್ ಸೇವಾಕೇಂದ್ರಗಳಲ್ಲಿ ಮೆಸೇಜ್ ಇಲ್ಲದೇ ಇದ್ದರೂ ಅರ್ಜಿ ಸಲ್ಲಿಕೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.ಹೀಗಾಗಿ, ಮೇಸೆಜ್‌ಗಾಗಿ ಕಾಯದೇ ಗ್ರಾಮ ಒನ್‌ಗೆ ಹೋಗಿ ನೋಂದಣಿ ಮಾಡಬಹುದು

Exit mobile version