Revenue Facts

ರಾಜ್ಯಚುನಾವಣ ಆಯೋಗದಿಂದ ಗ್ರಾಮ ಪಂಚಾಯತ್‌ ಚುನಾವಣೆ ವೇಳಾಪಟ್ಟಿ ಪ್ರಕಟ

ಕರ್ನಾಟಕ ವಿಧಾನಸಭೆ ಚುನಾವಣೆ

ಕರ್ನಾಟಕ ವಿಧಾನಸಭೆ ಚುನಾವಣೆ

ಅವಧಿ ಮುಗಿದ ರಾಜ್ಯದ ಎಂಟು ಗ್ರಾಮ ಪಂಚಾಯತ್ ಗಳ 127 ಸ್ಥಾನಗಳು ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ 103 ಗ್ರಾಮ ಪಂಚಾಯತ್ ಗಳ 135 ಸ್ಥಾನಗಳಿಗೆ ಫೆ.25ರಂದು ಉಪಚುನಾವಣೆ ನಡೆಸಲು ರಾಜ್ಯ ಚುನಾವಣ ಆಯೋಗ ನಿರ್ಧರಿಸಿದೆ.ರಾಜ್ಯ ಚುನಾವಣ ಆಯೋಗವು 2023ರ ಜನವರಿಯಿಂದ ಎಪ್ರಿಲ್‌ ತಿಂಗಳವರೆಗೆ ಅವಧಿ ಮುಕ್ತಾಯವಾಗುವ ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಹಾಸನ, ವಿಜಯಪುರ, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳ 8 ಗ್ರಾ.ಪಂ.ಗಳ 127 ಸದಸ್ಯ ಸ್ಥಾನಗಳು ಮತ್ತು ವಿವಿಧ ಕಾರಣಗಳಿಂದ ತೆರವಾಗಿರುವ 30 ಜಿಲ್ಲೆಗಳ 103 ಗ್ರಾಮ ಪಂಚಾಯತ್ ಗಳ 135 ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲಿದೆ.

ಚುನಾವಣೆಗೆ ಜಿಲ್ಲಾಧಿಕಾರಿಗಳು ಫೆ.8ರಂದು ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಫೆ.14 ಕೊನೆ ದಿನಾಂಕವಾಗಿದೆ. ಫೆ.15ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ವಾಪಸ್‌ ಪಡೆದುಕೊಳ್ಳಲು ಫೆ.17 ಕೊನೆ ದಿನಾಂಕವಾಗಿದೆ. ಫೆ. 25ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದೆ. ಫೆ.28ಕ್ಕೆ ಮತ ಎಣಿಕೆ ನಡೆಯಲಿದೆ ಎಂದು ಆಯೋಗದ ಪ್ರಕಟನೆ ತಿಳಿಸಿದೆ

Exit mobile version