Revenue Facts

ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಗೌರವಧನ ಹೆಚ್ಚಳ

ಗ್ರಾ.ಪಂ. ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಗೌರವಧನ ಹೆಚ್ಚಳ

ಬೆಂಗಳೂರು, ಡಿ. 18- ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಮಾಸಿಕ ಗೌರವಧನವನ್ನು ದ್ವಿಗುಣ ಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.ಗ್ರಾಮಪಂಚಾಯತಿಗಳ ಚುನಾಯಿತ ಪ್ರತಿನಿಧಿಗಳಿಗೆ ಮಾಸಿಕ ಗೌರವಧನವನ್ನು ಹೆಚ್ಚಿಸಿ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆ ಆದೇಶ ಹೊರಡಿದೆ

ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರುಗಿಗೆ ರೂ.3,000, ಉಪಾಧ್ಯಕ್ಷರಿಗೆ ರೂ.2,000 ಹಾಗೂ ಸದಸ್ಯರಿಗೆ ರೂ.1000 ಮಾಸಿಕ ಗೌರವಧನವನ್ನು ನಿಗಧಿಪಡಿಸಲಾಗಿತ್ತು ಎಂದಿದ್ದಾರೆ.ಪ್ರಸ್ತುತ ಗೌರವಧನವನ್ನು ಪರಿಷ್ಕರಿಸಿ, ಗ್ರಾಮ ಪಂಚಾಯಿತಿಗಳ ಅಧ್ಯಕ್ಷರುಗಳಿಗೆ ರೂ.6,000, ಉಪಾಧ್ಯಕ್ಷರುಗಳಿಗೆ ರೂ.4,000 ಹಾಗೂ ಸದಸ್ಯರುಗಳಿಗೆ ರೂ.2,000 ಮಾಸಿಕ ಗೌರವಧವನ್ನು ಪರಿಷ್ಕರಿಸಿ ನಿಗದಿಗೊಳಿಸಿ ಆದೇಶಿಸಿದ್ದಾರೆ.

ಹಲವು ವರ್ಷಗಳಿಂದ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಗೌರವಧನ ಹೆಚ್ಚಳ ಮಾಡುವ ಬೇಡಿಕೆ ಇದೀಗ ಕೈಗೂಡಿದೆ.

 

Exit mobile version