Revenue Facts

ಆಸ್ತಿ ಖರೀದಿದಾರರಿಗೆ ಸರ್ಕಾರ ಶಾಕ್‌, ಸ್ಥಿರಾಸ್ತಿ ಬೆಲೆ ಗಗನಕ್ಕೆ

ಆಸ್ತಿ ಖರೀದಿದಾರರಿಗೆ ಸರ್ಕಾರ ಶಾಕ್‌, ಸ್ಥಿರಾಸ್ತಿ ಬೆಲೆ ಗಗನಕ್ಕೆ

#Govt #shocks #property #buyers #prices #skyrocket

ಬೆಂಗಳೂರು: ಐದು ವರ್ಷಗಳ ಬಳಿಕ ಪರಿಷ್ಕರಣೆಯಾದ ಸ್ಥಿರಾಸ್ತಿ ಮಾರ್ಗಸೂಚಿ ದರದಿಂದಾಗಿ ಭೂ ಮಾಲೀಕರ ಅದೃಷ್ಟ ಖುಲಾಯಿಸಿದೆ. ಪುಟ್ಟನಗರಗಳಲ್ಲೂ ಭೂಮಿ ಬೆಲೆ ಎರಡುಪಟ್ಟಾಗಿದ್ದರೆ, ಸಿಲಿಕಾನ್ಸಿಟಿ ಬೆಂಗಳೂರಿನ ಕೆಲವು ಗೌರವಾನ್ವಿತ ಬಡಾವಣೆಗಳಲ್ಲಿ ಒಂದು ಚದರ ಅಡಿಯ ಬೆಲೆ ಬರೋಬ್ಬರಿ 30 ಸಾವಿರದ ಆಸುಪಾಸು ತಲುಪಿದೆ. ಸರಣಿ ರಜೆಯಿಂದಾಗಿ ಮಂಗಳವಾರದಿಂದ(ಅ.3) ಹೊಸದರಗಳು ಅಧಿಕೃತವಾಗಿ ಅನ್ವಯವಾಗಲಿವೆ.ರಾಜ್ಯಾದ್ಯಂತ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ(Subregister office) ಇಂದಿನಿಂದ ನೋಂದಣಿಯಾಗುವ ಆಸ್ತಿಗಳಿಗೆ ಪರಿಷ್ಕೃತ ಮಾರ್ಗಸೂಚಿ ದರ(Gudiencevalue) ಹೆಚ್ಚಾಗಲಿದೆ. ಶೇ.20ರಿಂದ 30ರಷ್ಟು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಏರಿಕೆಯಾಗಲಿದೆ. ಮಾರ್ಗಸೂಚಿ ದರ ಏರಿಕೆ ಆಗಿರುವುದು ಆಸ್ತಿ ಖರೀದಿದಾರರಿಗೆ ಭಾರ ಎನಿಸಿದರೆ, ಗ್ಯಾರಂಟಿ ಯೋಜನೆಗಳ ಆರ್ಥಿಕ ಭಾರದಿಂದ ತತ್ತರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಆದಾಯದ ಆಶಾಕಿರಣವಾಗಿದೆ. ಇದು ಜನರಿಗೆ ಮತ್ತೊಂದು ಶಾಕ್ ಎಂದಲೇ ಹೇಳಬಹುದು.

ಮುದ್ರಾಂಕ ಮತ್ತು ಬೆಲೆ ನೋಂದಣಿ ಆಯುಕ್ತಾಲಯದ ಮಾಹಿತಿಯಂತೆ ವಿಲ್ಲಾಗಳ ಬೆಲೆಯಲ್ಲಿ ಶೇ10 ರಿಂದ 15 ಅ.3) ಏರಿಕೆಯಾದರೆ, ವಸತಿ ಸಮುಚ್ಚಯಗಳ ಸ್ಥಿರಾಸ್ತಿ(immovable property) ಮೌಲ್ಯ ಪ್ರಾದೇಶಿಕವಾರು ಪರಿಗಣನೆಯಾಗಲಿದೆ.ನೋಂದಣಿ ಇಲಾಖೆ ಕಳೆದೆರಡು ದಿನಗಳಿಂದ 24/7 ಕೆಲಸ ಮಾಡುತ್ತಿದೆ. ಸರ್ವರ್ ಸಾಮರ್ಥ್ಯವನ್ನು ನಿತ್ಯ 1ಲಕ್ಷ ಪುಟ ಅಪ್‌ಲೋಡ್ ಆಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ದಾಖಲೆ ವ್ಯವಹಾರದ ಜೊತೆಗೆ ದೊಡ್ಡಮಟ್ಟು ಆದಾಯವನ್ನೂ ನಿರೀಕ್ಷಿಸಲಾಗುತ್ತಿದೆ.ಪರಿಷ್ಕೃತ ಮಾರ್ಗಸೂಚಿಯಂತೆ ಮುಂದಿನ ಪ್ರಕ್ರಿಯೆಗಳು ನಡೆಯಬೇಕಾಗಿದೆ.

Exit mobile version