Revenue Facts

ಮೈಸೂರಿನ ಮಿರ್ಲೆ ಉಪ ನೋಂದಣಿ ಕಚೇರಿ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಆದೇಶಿಸಿದ ಸರ್ಕಾರ

ಮೈಸೂರಿನ ಮಿರ್ಲೆ ಉಪ ನೋಂದಣಿ ಕಚೇರಿ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಆದೇಶಿಸಿದ ಸರ್ಕಾರ

Mysore Mirle Sub-Registrar Office

ಬೆಂಗಳೂರು, ಜ. 12 :Mysore Mirle Sub-Registrar Office : ಮೈಸೂರು ಜಿಲ್ಲೆಯ ಮಿರ್ಲೆ ಉಪ ನೋಂದಣಿ ಕಛೇರಿ ಶೀಥಿಲಾವಸ್ಥೆಯಲ್ಲಿದ್ದು, ಇಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಸರ್ಕಾರ ಆದೇಶ ಹೊರಡಿಸಿದೆ.

ಮೈಸೂರು ಜಿಲ್ಲೆಯ ಮಿರ್ಲೆ ಉಪ ನೋಂದಣಿ ಕಛೇರಿಯು ಸ್ವಂತ ಕಟ್ಟಡವಾಗಿದ್ದು, ಇದನ್ನು 1959ರಲ್ಲಿ ನಿರ್ಮಿಸಲಾಗಿದೆ. ಸದರಿ ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು, ಮಳೆಗಾಲದಲ್ಲಿ ತಾರಸಿ ಮೇಲೆ ನೀರು ನಿಂತು ಗೋಡೆಗಳೆಲ್ಲಾ ವಸ್ತಿಯಿಂದ ಕೂಡಿರುತ್ತದೆ. ಇದರಿಂದ ಕಟ್ಟಡವು ಯಾವ ಸಮಯದಲ್ಲಾದರೂ ಕುಸಿಯುವ ಸಂಭವವಿರುವುದರಿಂದ ಕಟ್ಟಡವನ್ನು ನೆಲಸಮಗೊಳಿಸಿ, ಅದೇ ಜಾಗದಲ್ಲಿ ನೂತನ ಕಟ್ಟಡ ನಿರ್ಮಾಣ ಮಾಡಬೇಕು ಎಂದು ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ, ಮೈಸೂರು ಅರ್ಜಿ ಸಲ್ಲಿಸಿದ್ದರು. 2022-23ನೇ ಸಾಲಿನ ಆಯವ್ಯಯದಲ್ಲಿ ರೂ.175/- ಲಕ್ಷಗಳನ್ನು ಮಿನಿ ವಿಧಾನಸೌಧ ಮತ್ತು ಉಪನೋಂದಣಾಧಿಕಾರಿ ಕಛೇರಿಗಳ ಕಟ್ಟಡಗಳ ನಿರ್ಮಾಣ ಲೆಕ್ಕ ಶೀರ್ಷಿಕ 4059-80-051-0-30-386 ರಡಿಯಲ್ಲಿ ಒದಗಿಸಲಾಗಿರುವ ರೂ.8000/- ಲಕ್ಷಗಳ ಅನುದಾನದಲ್ಲಿ ಬಿಡುಗಡೆಗೊಳಿಸಲು ಕೋರಿದ್ದರು.

ಈ ಪತ್ರಕ್ಕೆ ಸರ್ಕಾರ ಅನುದಾನ ನೀಡಲು ಒಪ್ಪಿಗೆ ನೀಡಿದೆ. ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರವರು ಸಲ್ಲಿಸಿರುವ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಆದೇಶಿಸಿದೆ. ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಮೈಸೂರು ಜಿಲ್ಲೆಯ ಮಿರ್ಲೆ ಉಪ ನೋಂದಣಿ ಕಛೇರಿ ಕಟ್ಟಡವನ್ನು ನೆಲಸಮಗೊಳಿಸಿ, ನೂತನ ಕಟ್ಟಡವನ್ನು ರೂ.175.00 ಲಕ್ಷಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲು ಮೈಸೂರು ನಿರ್ಮಿತಿ ಕೇಂದ್ರ ಇವರು ಸಲ್ಲಿರುವ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಿದೆ. ಈ ಕಾಮಗಾರಿಗಾಗಿ ಮೊದಲನೇ ಕಂತಿನ ರೂ.40.00ಲಕ್ಷ (ರೂ. ನಲವತ್ತು ಲಕ್ಷಗಳು ಮಾತ್ರಗಳನ್ನು ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕಗಳ ಆಯುಕ್ತರು, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಇವರಿಗೆ ಬಿಡುಗಡೆಗೊಳಿಸಿ ಆದೇಶಿಸಿದೆ.

ವೆಚ್ಚವನ್ನು 2022-23ನೇ ಸಾಲಿನ ಲೆಕ್ಕ ಶೀರ್ಷಿಕೆ ‘ಮಿನಿ ವಿಧಾನಸೌಧ ಮತ್ತು ಉಪನೋಂದಣಾಧಿಕಾರಿ ಕಛೇರಿಗಳ ಕಟ್ಟಡಗಳ ನಿರ್ಮಾಣ 4059-80-051-0-30-386″ ರಡಿಯಲ್ಲಿ ಲಭ್ಯವಿರುವ ಅನುದಾನದಿಂದ ಸದರಿ ಕಾಮಗಾರಿಯನ್ನು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999 ಮತ್ತು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ನಿಯಮಗಳು, 2000ರಲ್ಲಿ ನಿಗದಿಪಡಿಸಿರುವ ಕಾರ್ಯವಿಧಾನವನ್ನು ಅನುಸರಿಸಿ ಕೈಗೊಳ್ಳತಕದ್ದು ಹಾಗೂ ವೆಚ್ಚವಾದ ಅನುದಾನಕ್ಕೆ ಹಣ ಬಳಕೆ ಪ್ರಮಾಣ ಪತ್ರವನ್ನು ಕಾಮಗಾರಿಯ ಭೌತಿಕ ಪ್ರಗತಿಯೊಂದಿಗೆ ಇರತಕ್ಕದ್ದು ಎಂದು ಹೇಳಿದೆ.

Exit mobile version