ಬೆಂಗಳೂರು: ಫೆ 27
ರಾಜ್ಯ ಸರ್ಕಾರಿ ನೌಕರರ ಸಂಘವು ದಿನಾಂಕ:- 01.03.2023 ರಿಂದ ರಾಜ್ಯದ್ಯಂತ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಮುಷ್ಕರವನ್ನು ಪರಿಣಾಮಕಾರಿಯಾಗಿ ಯಶಸ್ವಿಗೊಳಿಸುವ ಬಗ್ಗೆ ಚರ್ಚಿಸಲು ಇಂದು ಸಂಜೆ 07.00 ಗಂಟೆಗೆ ” ಗೂಗಲ್ ಮೀಟ್ ಸಭೆ”ಯನ್ನು ಆಯೋಜಿಸಿದೆ.
ಮಾನ್ಯ ಮುಖ್ಯಮಂತ್ರಿಗಳು ಮಂಡಿಸಿದ್ದ ರಾಜ್ಯ ಸರ್ಕಾರದ 2023-24ನೇ ಸಾಲಿನ ಬಜೆಟ್ನಲ್ಲಿ 7ನೇ ವೇತನ ಆಯೋಗದ ಜಾರಿ ಮತ್ತು ನೂತನ ಪಿಂಚಣಿ ಯೋಜನೆಯ ಬಗ್ಗೆ ಯಾವುದೇ ಪ್ರಸ್ತಾವ ಮಾಡದಿರುವ ಬಗ್ಗೆ ವಿರೋದವನ್ನು ವ್ಯಕ್ತಪಡಿಸಿ ಈ ಬಗ್ಗೆ ಸೂಕ್ತ ಕ್ರಮವನ್ನು ಕೈಗೊಳ್ಳಲು ಕಳೆದ ವಾರ ನಡೆಸಿದ ಸಭೆಯಲ್ಲಿ ದಿನಾಂಕ:- 01.03.2023 ರಿಂದ ಎಲ್ಲಾ ಸರ್ಕಾರಿ ನೌಕರರು ಅನಿರ್ಧಿಷ್ಟಾವಧಿ ಕರ್ತವ್ಯಕ್ಕೆ ಗೈರಾಜರಾಗುವ ಮೂಲಕ ಹೋರಟ ಮಾಡಬೇಕೆಂದು ತಿರ್ಮಾನಿಸಲಾಗಿತ್ತು.
ಈ ಹೋರಾಟಕ್ಕೆ ಇನ್ನೂ ಕೇವಲ ಎರಡೇ ಎರಡು ದಿನಗಳು ಬಾಕಿ ಇರುವುದರಿಂದ ಹೋರಟವನ್ನು ಯಶಸ್ವಿಗೊಳಿಸಲು ಮಾಡಬೇಕಾದ ಕೆಲಸಗಳ ಬಗ್ಗೆ ಚರ್ಚಿಸಲು ಇಂದು ಗೂಗಲ್ ಮಿಟ್ ಸಭೆಯನ್ನು ಆಯೋಜಿಸಿ ಸಂಘಕ್ಕೆ ಸಂಬಂಧಿಸಿದ 1.ಜಿಲ್ಲಾಧ್ಯಕ್ಷರು ಮತ್ತು ಜಿಲ್ಲಾ ಕಾರ್ಯದರ್ಶಿಗಳು, 2. ತಾಲ್ಲೂಕು ಮತ್ತು ಯೋಜನಾ ಶಾಖೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು, 3, ಬೆಂಗಳೂರು ನಗರ ರಾಜ್ಯ ಪರಿಷತ್ ಸದಸ್ಯರಿಗೆ ತಪ್ಪದೆ ಭಾಗವಹಿಸಲು ಕೋರಿ ಸುತ್ತೋಲೆ ಹೊರಡಿಸದೆ.
ಸಂಬಂಧ ಪಟ್ಟವರು ತಮ್ಮ ಮೊಬೈಲ್ ನಲ್ಲಿರುವ ಗೂಗಲ್ ಮೀಟ್ app ಮೂಲಕ https:meet.google.com/rok-gvan-ors ಲಿಂಕ್ ಬಳಸಿ ಸಭೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್. ಷಡಾಕ್ಷರಿ ರವರು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.