Revenue Facts

ʻಪಡಿತರ ಚೀಟಿʼದಾರರಿಗೆ ಗುಡ್ ನ್ಯೂಸ್;ಅಕ್ಕಿ, ಗೋಧಿ ಜೊತೆಗೆ ಇನ್ನೊಂದು ಫ್ರೀ

ʻಪಡಿತರ ಚೀಟಿʼದಾರರಿಗೆ ಗುಡ್ ನ್ಯೂಸ್;ಅಕ್ಕಿ, ಗೋಧಿ ಜೊತೆಗೆ ಇನ್ನೊಂದು ಫ್ರೀ

#Good news # ration card #holders# rice# wheat # other free

ಬೆಂಗಳೂರು;ಕೇಂದ್ರ ಸರ್ಕಾರ ಪಡಿತರ ಚೀಟಿದಾರರಿಗೆ(Rationcard) ಸಿಹಿ ಸುದ್ದಿ ನೀಡಿದ್ದು, ಅನ್ನ ಯೋಜನೆಯಡಿ ಅಕ್ಕಿ, ಗೋಧಿಯ ಜೊತೆಗೆ ಸಿರಿ ಧಾನ್ಯಗಳನ್ನು((Cereal) ಫೆಬ್ರವರಿಯಿಂದಲೇ ವಿತರಣೆ ಮಾಡಲಿದೆ. ಈ ಹಿಂದೆ 21 KG ಅಕ್ಕಿ & 14 KG ಗೋಧಿ ಕೊಡುತ್ತಿದ್ದರು. ಆದರೆ,ಕೇಂದ್ರ ಸರ್ಕಾರವು ಫೆಬ್ರವರಿಯಿಂದ ಗೋಧಿ ಮತ್ತು ಅಕ್ಕಿಯ ಜೊತೆಗೆ, ಸಿರಿ ಧಾನ್ಯಗಳನ್ನು ಉಚಿತವಾಗಿ ಒದಗಿಸುತ್ತದೆ. ಇನ್ನು ಮುಂದೆ 9 KG ಗೋಧಿಯ ಜೊತೆಗೆ 5 KG ಸಿರಿ ಧಾನ್ಯ ಸಹ ನೀಡಲಿದೆ ಎಂದು ವರದಿಯಾಗಿದೆ. ಸಿರಿಧಾನ್ಯಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಈ ಕ್ರಮ ಕೈಗೊಳ್ಳುತ್ತಿದ್ದು, ದೇಶದ ಕೋಟ್ಯಂತರ ಪಡಿತರ ಚೀಟಿದಾರರು ಇದರ ಲಾಭ ಪಡೆಯಲಿದ್ದಾರೆ.ಅಂತ್ಯೋದಯ ಕಾರ್ಡ್(Antyodaya card) ಹೊಂದಿರುವವರಿಗೆ ಈ ಹಿಂದೆ 21 ಕೆಜಿ ಅಕ್ಕಿ ಮತ್ತು 14 ಕೆಜಿ ಗೋಧಿ ಸಿಗುತ್ತಿತ್ತು, ಇದರ ಬದಲು ಒಂಬತ್ತು ಕೆಜಿ ಗೋಧಿ ಮತ್ತು ಐದು ಕೆಜಿ ಸಿರಿಧಾನ್ಯಗಳನ್ನು ನೀಡಲು ನಿರ್ಧರಿಸಿದೆ ಎನ್ನಲಾಗಿದೆ.ಗೋಧಿ ಮತ್ತು ಅಕ್ಕಿಯ ಜೊತೆಗೆ ಬಡವರಿಗೆ ಸಿರಿ ಧಾನ್ಯಗಳನ್ನು ನೀಡುವುದು ಸರ್ಕಾರದ ದೊಡ್ಡ ನಿರ್ಧಾರವಾಗಿದೆ.ಫಲಾನುಭವಿ ಕುಟುಂಬದವರು ಪೌಷ್ಟಿಕ ಆಹಾರ (nutrient food) ಸೇವಿಸಿದಂತೆ ಆಗುತ್ತದೆ ಎನ್ನುವುದು ಸರ್ಕಾರದ ನಿಲುವು. ಈ ಹೊಸ ವ್ಯವಸ್ಥೆಯಡಿ, ಕಾರ್ಡ್ದಾರರಿಗೆ ನೀಡುವ ಪಡಿತರದ ಮೇಲಿನ ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ ಮತ್ತು ಅದರ ಸ್ಥಾನದಲ್ಲಿ ಸಿರಿ ಧಾನ್ಯಗಳನ್ನು ಸೇರಿಸಲಾಗಿದೆ. ಕೇಂದ್ರ ಸರ್ಕಾರವು ಫೆಬ್ರವರಿಯಿಂದ ಗೋಧಿ ಮತ್ತು ಅಕ್ಕಿಯ ಜೊತೆಗೆ, ಸಿರಿ ಧಾನ್ಯಗಳನ್ನು ಉಚಿತವಾಗಿ ಒದಗಿಸುತ್ತದೆ. ಯಾವ ಕಾರ್ಡ್ ಹೊಂದಿರುವವರಿಗೆ ಎಷ್ಟು ಧಾನ್ಯವನ್ನು ನೀಡಬೇಕು ಎಂಬುದನ್ನು ಇಲಾಖೆ ನಿರ್ಧರಿಸಿದೆ.

Exit mobile version