Revenue Facts

ರೈತರಿಗೆ ಗುಡ್ ನ್ಯೂಸ್- ಫ್ರೂಟ್ಸ್‌ ತಂತ್ರಾಂಶದಲ್ಲಿ ಸ್ವಯಂ ನೋಂದಣಿಗೆ ಅವಕಾಶ,

ಬೆಂಗಳೂರು;ಕರ್ನಾಟಕ ರಾಜ್ಯ ಸರ್ಕಾರವು (Karnataka state govt) ರೈತರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.ಎಲ್ಲಾ ವರ್ಗದ ರೈತರು ಕೃಷಿಗೆ ಸಂಬಂಧಿಸಿ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಬೇಕಾದರೆ ‘FRUITS’ ಪೋರ್ಟಲ್‌ನಲ್ಲಿ ನೋಂದಾಯಿಸುವುದು ಕಡ್ಡಾಯ. ಇಲ್ಲಿ ನೋಂದಣಿ ಬಳಿಕ FID ನಂಬರ್ ದೊರೆಯುತ್ತಿದೆ. ಆಧಾರ್ ನಂಬರ್‌ನಂತೆಯೇ FID ನಂಬರ್ ರೈತನಿಗೆ ಸಿಗುತ್ತದೆ. ರೈತರು ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಕೃಷಿ ಅಥವಾ ತೋಟಗಾರಿಕೆ ಇಲಾಖೆಗಳಲ್ಲಿ ನೋಂದಾಯಿಸಿ FID ನಂಬರ್ ಪಡೆಯಿರಿ, ಹೆಚ್ಚಿನ ಮಾಹಿತಿಗೆ https://fruits.karnataka .gov.in/ ಇಲ್ಲಿ ಕ್ಲಿಕ್ಕಿಸಿ.ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿಯಾಗಲು ರೈತರ ಆಧಾರ್ ಕಾರ್ಡ್‍ನ ಪ್ರತಿ, ರಾಷ್ಟ್ರೀಕೃತ ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಪ್ರತಿ ಹಾಗೂ ಪಹಣಿ ಕಡ್ಡಾಯವಾಗಿ ಬೇಕಾಗಿದೆ.ಭೂದಾಖಲೆ ನೀಡುವ ನೋಂದಣಿ ಇಲಾಖೆಯ ‘ಭೂಮಿ ತಂತ್ರಾಂಶ’ದ ಜತೆಗೆ ರೈತರು ಪಡೆಯುವ ಸೌಲಭ್ಯಗಳ ದತ್ತಾಂಶ ಸಂಗ್ರಹಣೆಗೆ ಕೃಷಿ ಇಲಾಖೆಯು FRUITS BANK ತಂತ್ರಾಂಶವನ್ನು ಬಳಸುತ್ತಿದೆ. ಇವನ್ನು ಸಂಯೋಜಿಸಿ ಸೃಷ್ಟಿಸಿರುವ ನೂತನ ವೆಬ್‌ ಪೋರ್ಟಲ್‌ ಇದಾಗಿದೆ. ಒಂದೇ ಪೋರ್ಟಲ್‌ ವೇದಿಕೆಯಲ್ಲಿ ರೈತನ ಭೂಮಿಗೆ ಸಂಬಂಧಿಸಿದ ಪೂರ್ಣ ಮಾಹಿತಿಗಳು ಹಣಕಾಸಿನ ಸಂಸ್ಥೆಗಳಿಗೆ ದೊರೆಯಲಿವೆ. ಇದರಿಂದ ಸಂಸ್ಥೆಗಳಿಗೆ ಆಧಾರ್‌ ನಂಬರ್‌ ನೀಡುವ ಮೂಲಕ ಅರ್ಹ ರೈತನು ಕೆಲವೇ ನಿಮಿಷಗಳಲ್ಲಿ ಕೃಷಿ ಸಾಲ ಪಡೆಯಬಹುದಾಗಿದೆ.

Exit mobile version