Revenue Facts

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್ ;ಮಕ್ಕಳ ಶೈಕ್ಷಣಿಕ ಸಹಾಯಧನ ಪರಿಷ್ಕರಣೆ ಆದೇಶ

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಗುಡ್‌ ನ್ಯೂಸ್ ;ಮಕ್ಕಳ ಶೈಕ್ಷಣಿಕ ಸಹಾಯಧನ ಪರಿಷ್ಕರಣೆ ಆದೇಶ

ಬೆಂಗಳೂರು;ರಾಜ್ಯ ಸರ್ಕಾರವು ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಿಹಿಸುದ್ದಿ ನೀಡಿದ್ದು, ಮಕ್ಕಳ ಶೈಕ್ಷಣಿಕ ಸಹಾಯಧನವನ್ನು ಪರಿಷ್ಕರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅವರ ಶೈಕ್ಷಣಿಕ ಸಹಾಯಧನವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ವಾರ್ಷಿಕವಾಗಿ ₹1,800 (1 ರಿಂದ 5ನೇ ತರಗತಿ), ₹2,400 (6 ರಿಂದ 8ನೇ ತರಗತಿ), ₹3,000 (9ನೇ ತರಗತಿಯಿಂದ 10ನೇ ತರಗತಿ), ₹4,600 (ಪ್ರಥಮ ಪಿಯುದಿಂದ ದ್ವಿತೀಯ ಪಿಯು) ₹12,000 (ಎಂಡಿ ಮೆಡಿಕಲ್) ವರೆಗೂ ಸಹಾಯಧನ ಸಿಗಲಿದೆ. ಈ ಸಹಾಯಧನ ಕೋರಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಹಿಂದಿನ ತರಗತಿಯಲ್ಲಿ ಪಾಸ್ ಆಗಿರಬೇಕು.2023-24 ನೇ ಸಾಲಿನಲ್ಲಿ ಅರ್ಹ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಧನ ಸಹಾಯವನ್ನು SSP ತಂತ್ರಾಂಶದ ಮೂಲಕ ನೀಡಲು ಅನುಕೂಲವಾಗುವಂತೆ ಮಂಡಳಿಯಲ್ಲಿ ನೋಂದಣಿಯಾಗಿರುವ ಎಲ್ಲಾ ಕಾರ್ಮಿಕರು https://kbocwwb.karnataka.gov.in ಲಿಂಕ್ ಅನ್ನು ಉಪಯೋಗಿಸಿಕೊಂಡು ಮಂಡಳಿಯ ತಂತ್ರಾಂಶದಲ್ಲಿ & ಉಲ್ಲೇಖ ಸಂಖ್ಯೆಯನ್ನು ನಮೂದಿಸಿ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯ.ಇದಲ್ಲ ನೋಂದಾಯಿತ ಕಾರ್ಮಿಕರು ತಮ್ಮ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡಿ ಮ್ಯಾಪಿಂಗ್ ಮಾಡಬೇಕಾಗುತ್ತದೆ. ಆಧಾ‌ರ್ ಸೀಡ್ ಮತ್ತು NPCI ಮಾಡಿಸದೇ ಇರುವ ಕಾರ್ಮಿಕರಿಗೆ ಶೈಕ್ಷಣಿಕ ಧನ ಸಹಾಯ ನೀಡಲು ಸಾಧ್ಯವಾಗದಿರುವುದರಿಂದ ಕಡ್ಡಾಯವಾಗಿ ಸೀಡಿಂಗ್ ಮಾಡಿಸಬೇಕಾಗುತ್ತದೆ.

ವಾರ್ಷಿಕ ಶೈಕ್ಷಣಿಕ ಸಹಾಯಧನದ (educational assistance) ಮೊತ್ತ ಇಲ್ಲಿದೆ:

1ನೇ ತರಗತಿಯಿಂದ-5ನೇ ತರಗತಿಯವರೆಗೆ: 1,800
6ನೇ ತರಗತಿಯಿಂದ-8ನೇ ತರಗತಿಯವರೆಗೆ: 2,400
9ನೇ ತರಗತಿಯಿಂದ-10ನೇ ತರಗತಿಯವರೆಗೆ: 3,000
ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿ.ಯು.ಸಿ: 4,600
ಪದವಿ (ಗರಿಷ್ಠ ಮೂರು ವರ್ಷ ಮೀರದಂತೆ): 10,000
ಬಿ.ಇ/ಬಿಟೆಕ್ ಅಥವಾ ತತ್ಸಮಾನ ತಾಂತ್ರಿಕ ಪದವಿ: 10,000
ಸ್ನಾತಕೋತ್ತರ ಪದವಿ (ಗರಿಷ್ಠ ಎರಡು ವರ್ಷಗಳು): 10,000
ಪಾಲಿಟೆಕ್ನಿಕ್/ಡಿಪ್ರಮಾ/ಐಟಿಐ: 4,600
ಬಿ.ಎಸ್.ಸಿ ನರ್ಸಿಂಗ್/ಜಿ.ಎನ್.ಮ್/ ಪ್ಯಾರ ಮೆಡಿಕಲ್ ಕೋರ್ಸ್: 10,000
ಬಿ.ಎಡ್: 6,000
ವೈದ್ಯಕೀಯ (ಎಮ್.ಬಿ.ಬಿ.ಎಸ್ /ಬಿ.ಎ.ಎಮ್.ಸ್ /ಬಿ.ಡಿ.ಎಸ್ /ಬಿ.ಹೆಚ್.ಎಮ್.ಎಸ್ ಕೋರ್ಸ್ ಅಥವಾ ಇದಕ್ಕೆ ಸಂಬಂಧಪಟ್ಟ ಸಮಾನಾಂತರ ಸ್ನಾತಕೋತ್ತರ ಕೋರ್ಸ್: 11,000
ಎಲ್.ಎಲ್.ಬಿ/ಎಲ್.ಎಲ್.ಎಮ್: 10,000
ಎಮ್.ಟೆಕ್/ಎಮ್.ಇ ತತ್ಸಮಾನ ಸ್ನಾತಕೋತ್ತರ ಪದವಿ (ಗರಿಷ್ಠ ಎರಡು ವರ್ಷಗಳು): 10,000
ಎಮ್.ಡಿ ಮೆಡಿಕಲ್: 12,000
ಪಿಹೆಚ್ ಡಿ / ಎಮ್. ಫಿಲ್ (ಗರಿಷ್ಠ, ಮೂರು ವರ್ಷ ಅವಧಿಗೆ): 11,000
ಐ.ಐ.ಟಿ/ಐ.ಐ.ಐ.ಟಿ/ಐ.ಐ.ಎಮ್/ಎನ್.ಐ.ಟಿ/ಐ.ಐ.ಎಸ್.ಇ.ಆರ್/ಎ.ಐ.ಐ.ಎಮ್.ಎಸ್ /ಎನ್.ಎಲ್.ಯೂ ಮತ್ತು ಭಾರತ ಸರ್ಕಾರದ ಮಾನ್ಯತೆ ಪಡೆದ ಕೋಸ್ ðಗಳು: 11,000

 

 

ವಿಶೇಷ ಸೂಚನೆಗಳು :

1. ಈ ಮೇಲಿನ ಸಹಾಯಧನದ ಮೊತ್ತವು ಶೈಕ್ಷಣಿಕ ವರ್ಷ 2023-24ನೇ ಸಾಲಿನಿಂದ ಅನ್ವಯವಾಗುತ್ತದೆ.
2. ಶೈಕ್ಷಣಿಕ ಸಹಾಯಧನ ಕೋರಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಉತ್ತೀರ್ಣರಾಗಿರಬೇಕು ಮತ್ತು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ದಾಖಲಾತಿಯನ್ನು ಪಡೆದಿರಬೇಕು.
3. ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ನೋಂದಣಿ ಸದಸ್ಯತ್ವವು ಚಾಲ್ತಿಯಲ್ಲಿರುಬೇಕು.
4. ಶೈಕ್ಷಣಿಕ ವರ್ಷದ ಪೂರ್ವದ ಮೇ-31ರ ಒಳಗೆ ನೋಂದಣಿಯಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಮಾತ್ರ ನಂತರದ ಶೈಕ್ಷಣಿಕ ವರ್ಷದ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
5. ಈ ಮೇಲಿನ ಪಟ್ಟಿಯಲ್ಲಿ ನಿಗದಿಪಡಿಸದಿರುವ ತರಗತಿಗಳಿಗೆ ಅದೇ ಅವಧಿಯ ತತ್ಸಮಾನ ವ್ಯಾಸಂಗಕ್ಕೆ ಇರುವ ಶೈಕ್ಷಣಿಕ ಧನಸಹಾಯವನ್ನು ಪಡೆಯಲು ಅರ್ಹರಿರುತ್ತಾರೆ ಅಂತ ತಿಳಿಸಿದೆ.

 

Exit mobile version