Revenue Facts

ಶುಭ ಸುದ್ದಿ: ಐಷಾರಾಮಿ ರಿಯಲ್‌ ಎಸ್ಟೇಟ್‌ಗೆ ಭಾರತದಲ್ಲಿ ಹೆಚ್ಚುತ್ತಿದೆ ಬೇಡಿಕೆ

ಶುಭ ಸುದ್ದಿ: ಐಷಾರಾಮಿ ರಿಯಲ್‌ ಎಸ್ಟೇಟ್‌ಗೆ ಭಾರತದಲ್ಲಿ ಹೆಚ್ಚುತ್ತಿದೆ ಬೇಡಿಕೆ

ಭಾರತದಲ್ಲಿ ಬೆಳವಣಿಗೆ ಕಾಣುತ್ತಿರುವ ಉದ್ಯಮಗಳಲ್ಲಿ ಐಷಾರಾಮಿ ರಿಯಲ್‌ ಎಸ್ಟೇಟ್‌ ಕ್ಷೇತ್ರವೂ ಒಂದಾಗಿದೆ. ಸಾಮಾನ್ಯ ಸ್ಥಿತಿಗೆ ಮರಳುವುದರೊಂದಿಗೆ ರಿಯಲ್‌ ಎಸ್ಟೇಟ್‌ ಮಾರುಕಟ್ಟೆಯು ಖರೀದಿದಾರರ ವಿಶ್ವಾಸವನ್ನು ಮರಳಿ ಗಳಿಸಿದೆ. ರೂ. 2.5 ಕೋಟಿಗೂ ಹೆಚ್ಚು ಮೌಲ್ಯದ ಸ್ವತ್ತುಗಳಲ್ಲಿ ಆಸಕ್ತಿ ಹೆಚ್ಚಿರುವುದು ಮತ್ತು ಇತ್ತೀಚೆಗಿನ ತಿಂಗಳುಗಳಲ್ಲಿ ವಹಿವಾಟುಗಳಲ್ಲಿನ ಹೆಚ್ಚಳ ದಾಖಲಾಗಿರುವುದು ಐಷಾರಾಮಿ ರಿಯಲ್‌ ಎಸ್ಟೇಟ್‌ ಕ್ಷೇತ್ರದತ್ತ ಸೆಳೆತ ಹೆಚ್ಚುತ್ತಿದೆ ಎಂಬುದನ್ನು ದೃಢೀಕರಿಸುತ್ತದೆ ಮತ್ತು 2023ನೇ ಸಾಲಿನಲ್ಲಿಯೂ ಈ ಬೆಳವಣಿಗೆ ಇನ್ನಷ್ಟು ವೇಗ ಪಡೆದುಕೊಳ್ಳುವ ನಿರೀಕ್ಷೆ ಇದೆ.

ಪ್ರಸ್ತುತ ಮಾರುಕಟ್ಟೆಯ ಚಲನೆ ಮತ್ತು ಟ್ರೆಂಡ್‌ಗಳನ್ನು ಗಮನಿಸಿದಾಗ, ಪ್ರಮುಖ ರಿಯಾಲ್ಟರ್ಗಳು ಹೊಸ ಗ್ರಾಹಕರನ್ನು ಸೆಳೆಯುವುದಷ್ಟೇ ಅಲ್ಲ, ಉತ್ತಮ ನವೀಕರಣಗಳನ್ನು ಒದಗಿಸುವ ಮೂಲಕ ಅಸ್ತಿತ್ವದಲ್ಲಿರುವ ಗ್ರಾಹಕರನ್ನು ಉಳಿಸಿಕೊಳ್ಳುತ್ತಾರೆ.

ನಿವೃತ್ತಿ ಮತ್ತು ಎರಡನೇ ಮನೆ ಸಂಸ್ಕೃತಿ
ಸಾಂಕ್ರಾಮಿಕವು ರಿಯಲ್‌ ಎಸ್ಟೇಟ್‌ ಉದ್ಯಮದ ಮೇಲೆ ಸಕಾರಾತ್ಮಕ ಪರಿಣಾಮವನ್ನೇ ಬೀರಿದೆ. ಏಕೆಂದರೆ ಗೇಟೆಡ್/ಕೂಡು ಮನೆಗಳು, ವಿಲ್ಲಾಗಳು, ನಿವೃತ್ತಿ ಮತ್ತು ಎರಡನೇ ಮನೆಗಳು, ಸಾಲು ಮನೆಗಳು ಮತ್ತು ಇತರ ಆಸ್ತಿಗಳ ಬೇಡಿಕೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ.

ವ್ಯಾಲೆಟ್ ಪಾರ್ಕಿಂಗ್, ಚಾವಣಿ ಮೇಲಿನ ಆಹಾರ ಮತ್ತು ಪಾನೀಯ ಸೌಲಭ್ಯಗಳು, ವಿಶ್ವ ದರ್ಜೆಯ ಗೇಮಿಂಗ್ ವಲಯಗಳು, ಗಾಲ್ಫ್ ಕೋರ್ಸ್‌ಗಳು, ನೀರಿನ ಸಾಮಿಪ್ಯ, ಹಸಿರು ಮತ್ತು ಪ್ರಕೃತಿ ಜೊತೆಗಿನ ನಂಟು, ಬಿಸಿನೆಸ್‌ ಸಭಾಗೃಹಗಳು ಇತ್ಯಾದಿ ವಿಶ್ವದರ್ಜೆಯ ಸೌಕರ್ಯಗಳನ್ನೊಳಗೊಂಡ ವಿಶಾಲವಾದ ಗೇಟೆಡ್ ಸಮುದಾಯಗಳನ್ನು ಜನರು ಬಯಸುತ್ತಾರೆ. ವರ್ಕ್ ಫ್ರಮ್‌ ಹೋಮ್ ಮತ್ತು ಹೈಬ್ರಿಡ್ ಕಾರ್ಯವಿಧಾನದ ಪ್ರವೃತ್ತಿ ಹೆಚ್ಚುತ್ತಿರುವುದರಿಂದ ಜನರು ಉನ್ನತ ಜೀವನಶೈಲಿಯನ್ನು ಒದಗಿಸುವ, ಒಟ್ಟಾರೆ ಯೋಗಕ್ಷೇಮದ ಖಾತ್ರಿ ನೀಡುವ ಮತ್ತು ಅಸೀಮ ಹೊಸ ಕೆಲಸದ ವಿಧಾನಗಳಳಿಗೆ ಅನುಕೂಲ ಮಾಡಿಕೊಡುವ ಮನೆಗಳನ್ನು ಹುಡುಕುತ್ತಿದ್ದಾರೆ. ಜನರು ಕೆಲಸಕ್ಕಾಗಿ ದೂರದ ಪ್ರಯಾಣವನ್ನು ಬಯಸುತ್ತಿಲ್ಲ, ಬದಲಿಗೆ ತಮ್ಮ ಆವರಣದಲ್ಲಿಯೇ ಹೆಚ್ಚಿನ ಸೌಕರ್ಯಗಳನ್ನು ಹೊಂದಲು ಬಯಸುತ್ತಾರೆ. ಇದರಿಂದಾಗಿ ಅವರು ತಮ್ಮ ಸ್ನೇಹಿತರು ಮತ್ತು ಕುಟುಂಬಗಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತ ಆನಂದಿಸಬಹುದು.

ಹೂಡಿಕೆಯ ಅವಕಾಶ
ಸಾಂಕ್ರಾಮಿಕೋತ್ತರ ಕಾಲದಲ್ಲಿ ವರ್ಕ್‌ ಫ್ರಮ್‌ ಹೋಂ ಮತ್ತು ಮನೆಯೇ ಶಾಲೆಯಾಗುತ್ತಿರುವ ಪರಿಸ್ಥಿತಿಯಲ್ಲಿ ಖರೀದಿದಾರರು ವಿಶಾಲ ಸ್ಥಳಾವಕಾಶವನ್ನು ಬಯಸುತ್ತಿದ್ದಾರೆ. ಈ ಮೊದಲು 2/3 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸವಾಗಿದ್ದ ಜನರು ಈಗ ಇನ್ನಷ್ಟು ದೊಡ್ಡದಾದ ಮನೆಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಖರೀದಿದಾರರನ್ನು ಆಕರ್ಷಿಸುತ್ತಿರುವ ಕಾರಣಕ್ಕೆ ಐಷಾರಾಮಿ ಮನೆಗಳು ಲಾಭದಾಯಕ ಹೂಡಿಕೆ ಅವಕಾಶಗಳಾಗಿ ಕಾಣಿಸುತ್ತಿವೆ. ಸಾರ್ವಕಾಲಿಕ ಕಡಿಮೆ ಪ್ರಮಾಣದಲ್ಲಿ ಇರುವ ಗೃಹಸಾಲಗಳ ಮೇಲಿನ ಬಡ್ಡಿ ದರಗಳೂ ಈ ವಲಯದ ಬೆಳವಣಿಗೆಗೆ ಪೂರಕವಾಗಿ ಪರಿಣಮಿಸಿದೆ.

ಅನಿವಾಸಿ ಭಾರತೀಯರ ಆಸಕ್ತಿ
ಇತ್ತೀಚೆಗಿನ ತಿಂಗಳುಗಳಲ್ಲಿ, ಅನಿವಾಸಿ ಭಾರತೀಯರು ದೇಶದಲ್ಲಿ ಐಷಾರಾಮಿ ಮನೆಗಳತ್ತ ತಮ್ಮ ಗಮನವನ್ನು ಹೊರಳಿಸಿದ್ದಾರೆ. ಭಾರತೀಯ ಐಷಾರಾಮಿ ರಿಯಲ್ ಎಸ್ಟೇಟ್ ಪ್ರಗತಿ ಕಾಣುತ್ತಿದ್ದಂತೆ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳೊಂದಿಗಿನ ಅಂತರವು ಕಡಿಮೆ ಆಗುತ್ತಿದ್ದಂತೆ, ಅವರು ಇಲ್ಲಿನ ಉನ್ನತ ಶ್ರೇಣಿಯ ಮನೆಗಳು, ವಿಲ್ಲಾಗಳು, ಬಂಗಲೆಗಳತ್ತ ಆಕರ್ಷಿತರಾಗಿದ್ದಾರೆ. ಐಷಾರಾಮಿ ರಿಯಲ್ ಎಸ್ಟೇಟ್ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿರುವುದರೊಂದಿಗೆ ಉತ್ತಮ ಹೂಡಿಕೆಯಾಗಿದೆ. ಇದು ಸ್ಮಾರ್ಟ್ ಕ್ಯಾಪಿಟಲ್ ರಿಟರ್ನ್ಸ್ ಮತ್ತು ನಿಯಮಿತವಾದ ಬಾಡಿಗೆ ಆದಾಯ ಎರಡನ್ನೂ ಉತ್ಪಾದಿಸಬಹುದು. ಮಾರುಕಟ್ಟೆಯು ಐಷಾರಾಮಿ ವಿಭಾಗದ ಬೇಡಿಕೆಯಲ್ಲಿ ತ್ರೈಮಾಸಿಕವಾಗಿ ಶೇ 35ರಷ್ಟು ಹೆಚ್ಚಳವನ್ನು ಕಂಡಿದೆ ಮತ್ತು ಈ ಉಬ್ಬರವು ಮುಂದಿನ ವರ್ಷಕ್ಕೂ ಮುಂದುವರಿಯುವ ನಿರೀಕ್ಷೆಯಿದೆ.

Exit mobile version