Revenue Facts

ಪಿಎನ್‌ಬಿ ಹೌಸಿಂಗ್‌ ಫೈನಾನ್ಸ್‌ ವ್ಯವಸ್ಥಾಪಕ ನಿರ್ದೇಶಕರಾಗಿ ಗಿರೀಶ್‌ ಕೌಸ್ಗಿ

ಪಿಎನ್‌ಬಿ ಹೌಸಿಂಗ್‌ ಫೈನಾನ್ಸ್‌ ವ್ಯವಸ್ಥಾಪಕ ನಿರ್ದೇಶಕರಾಗಿ ಗಿರೀಶ್‌ ಕೌಸ್ಗಿ

ಪಿಎನ್‌ಬಿ ಹೌಸಿಂಗ್‌ ಫೈನಾನ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾಗಿ ಗಿರೀಶ್‌ ಕೌಸ್ಗಿ ಅವರು ನೇಮಕವಾಗಿದ್ದಾರೆ. ಹರ್ದಯಾಳ್‌ ಪ್ರಸಾದ್‌ ಅವರು ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಅವರ ತೆರವಾದ ಸ್ಥಾನಕ್ಕೆ ಗಿರೀಶ್‌ ಅವರು ಆಯ್ಕೆಯಾಗಿದ್ದಾರೆ.

ಗಿರೀಶ್‌ ಅವರು ಕ್ಯಾನ್‌ ಫಿನ್‌ ಹೋಮ್ಸ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಗಿರೀಶ್‌ ಅವರ ನೇಮಕಾತಿಯು ಷೇರುದಾರರ ಅನುಮೋದನೆಯಂತೆ ನಡೆದಿದೆ ಎಂದು ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಇವರಿಗೆ ಅಡಮಾನ ಸಾಲ ಹಾಗೂ ಚಿಲ್ಲರೆ ವ್ಯಾಪಾರ ಕ್ಷೇತ್ರದಲ್ಲಿ 25 ವರ್ಷಗಳ ಅನುಭವವಿದೆ.

ಹರ್ದಯಾಳ್‌ ಪ್ರಸಾದ್‌ ಅವರು ಕಳೆದ ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ತಾವು ಪಿಎನ್‌ಬಿ ಹೌಸಿಂಗ್‌ ಫೈನಾನ್ಸ್‌ ಸಲಹೆಗಾರರಾಗಿ ಮುಂದುವರಿಯುವುದಾಗಿ ತಿಳಿಸಿದ್ದಾರೆ. ಇವರ ಅಧಿಕಾರಾವಧಿ ಅನೇಕ ತಿರುವು ಹಾಗೂ ಕಷ್ಟದ ಅವಧಿಗಳನ್ನು ಕಂಡಿತ್ತು.

Exit mobile version