Revenue Facts

ಗಿಗ್ ಕೆಲಸಗಾರರಿಗೂ ಪಿಂಚಣಿ ಯೋಗ : ಪಿಎಫ್ʼಆರ್ʼಡಿಎ ಶಿಫಾರಸು

ಗಿಗ್ ಕೆಲಸಗಾರರಿಗೂ ಪಿಂಚಣಿ ಯೋಗ : ಪಿಎಫ್ʼಆರ್ʼಡಿಎ ಶಿಫಾರಸು

ಬೆಂಗಳೂರು, ಡಿ. 28 : ಗಿಗ್ ಕೆಲಸಗಾರರನ್ನೂ ಪಿಂಚಣಿ ಯೋಜನೆಯ ವ್ಯಾಪ್ತಿಗೆ ತರಬೇಕು ಎಂದು ಭಾರತೀಯ ಪಿಂಚಣಿ ನಿಧಿ ನಿರ್ವಾಹಕ ಮತ್ತು ಅಭಿವೃದ್ಧಿ ಪ್ರಾಧಿಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸನ್ನು ಮಾಡಿಸದೆ. ಈಗಾಗಲೇ ಬ್ರಿಟನ್ ನಂತಹ ದೇಶಗಳಲ್ಲಿ ಕಂಪನಿಯಲ್ಲಿ ಒಬ್ಬ ವ್ಯಕ್ತಿ ಕೆಲಸಕ್ಕಿದ್ದರೂ, ಆತನನ್ನೂ ಪಿಂಚಣಿ ಸೇವೆಗೆ ಒಳಪಡಿಸಲಾಗಿದೆ. ಇದೇ ವ್ಯವಸ್ಥೆಯನ್ನು ಭಾರತಕ್ಕೂ ತಂದರೆ, ಇಲ್ಲಿನ ಶೇ. 90 ರಷ್ಟು ಉದ್ಯೋಗಿಗಳು ಪಿಂಚಣಿ ಯೋಜನೆಯ ಫಲಾನುಭವಿಗಳಾಗುತ್ತಾರೆ ಎಂಬುದು ಭಾರತೀಯ ಪಿಂಚಣಿ ನಿಧಿ ನಿರ್ವಾಹಕ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಭಿಪ್ರಾಯವಾಗಿದೆ. ಹೀಗಾಗಿ ಭಾರತದಲ್ಲೂ ಗಿಗ್ ಕೆಲಸಗಾರರನ್ನು ಪಿಂಚಣಿ ಯೋಜನೆಯ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಶಿಫಾರಸ್ಸು ಮಾಡಿದೆ.

ಭಾರತದಲ್ಲಿ ಝೋಮ್ಯಾಟೋ, ಸ್ವಿಗ್ಗಿ, ಡನ್ಝೋ, ಬಿಗ್ ಬಾಸ್ಕೆಟ್, ಉರ್ಬನ್ ನಂತಹ ಕಂಪನಿಗಳಲ್ಲಿ ಸಾಕಷ್ಟು ಮಂದಿ ಊಟ ಹಾಗೂ ಆಹಾರ ಪದಾರ್ಥಗಳನ್ನು ಮನೆ ಮನೆ ಬಾಗಿಲಿಗೆ ತಲುಪಿಸುವ ಡೆಲಿವರಿ ಬಾಯ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇನ್ನು ಆಟೋ, ಓಲಾ ಹಾಗೂ ಊಬರ್ ಗಳಲ್ಲಿ ಲಕ್ಷಾಂತರ ಮಂದಿ ಜನ ಸಾಮಾನ್ಯರನ್ನು ಮನೆ, ಕಚೇರಿಗಳಿಗೆ ತಲುಪಿಸುತ್ತಿದ್ದಾರೆ. ಆದರೆ ಇವರಿಗೆ ಯಾರಿಗೂ ಸಾಮಾಜಿಕ ಭದ್ರತಾ ಪ್ರಯೋಜನಗಳ ಸೌಲಭ್ಯವಿಲ್ಲ. ಇವರ ನಿವೃತ್ತಿ ಸಮಯದಲ್ಲಿ ಹಣದ ಯಾವುದೇ ಭದ್ರತೆ ಇಲ್ಲ. ಹಾಗಾಗಿ ಇವರನ್ನೂ ಪಿಂಚಣಿ ಯೋಜನೆಗೆ ಒಳಪಡಿಸಬೇಕು. ಇದರಿಂದ ಸಂಧ್ಯಾ ಕಾಲದಲ್ಲಿ ಗಿಗ್ ಕೆಲಸಗಾರರಿಗೂ ಹಣದ ಭದ್ರತೆ ಒದಗಿಸಿದಂತೆ ಆಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ.

ಸರ್ಕಾರಿ, ಖಾಸಗಿ ಮತ್ತು ಅಸಂಘಟಿತ ವಲಯದಲ್ಲಿ 1.67 ಕೋಟಿ ಜನ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಚಂದಾದಾರರಾಗಿದ್ದಾರೆ. ಹಾಗಾಗಿ ಗಿಗ್‌ ಕೆಲಸಗಾರರಿಗೆ ನೀಡುತ್ತಿರುವ ವೇತನದಲ್ಲಿ ಒಂದು ಪಾಲನ್ನು ಕಂಪನಿಗಳು ಮುರಿದುಕೊಂಡು ಎನ್‌ʼಪಿಎಸ್‌ ಯೋಜನೆಗೆ ನೀಡಬೇಕು. ಆಗ ಅವರಿಗೂ ಪಿಂಚಣಿ ಸಿಗುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ. ಅಲ್ಲದೇ, ಪಿಂಚಣಿ ಯೋಜನೆಯನ್ನು ಮತ್ತಷ್ಟು ಆಕರ್ಷಿಸಬೇಕಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಪಿಂಚಣಿ ಯೋಜನೆ ಅಡಿಯಲ್ಲಿ ಹೂಡಿಕೆಗೆ ನೀಡುವ ಆದಾಯವನ್ನು ಒಂದು ಲಕ್ಷ ರೂಪಾಯಿಗೆ ಹೆಚ್ಚಿಸಬೇಕು ಎಂದು ಪ್ರಾಧೀಕಾರ ಶಿಫಾರಸು ಮಾಡಿದೆ.

ಗಿಗ್‌ ಕೆಲಸಗಾರರು ಹೆಚ್ಚಿನ ಸಂಖ್ಯೆಯಲ್ಲಿ ಡೆಲಿವರಿ ಏಜೆಂಟ್‌ ಗಳಾಗಿ, ಕ್ಯಾಬ್‌ ಡ್ರೈವರ್‌ ಗಳಾಗಿಕೆಲಸ ಮಾಡುತ್ತಿದ್ದಾರೆ. 2022–23ರಲ್ಲಿ ನೀತಿ ಆಯೋಗದ ಅಂದಾಜಿನ ಪ್ರಕಾರ ಇವರ ಸಂಖ್ಯೆ ಹೆಚ್ಚಾಗಿದೆ. ಬರೋಬ್ಬರಿ 99 ಕೋಟಿಗೆ ಏಜೆಂಟ್‌ ಕೆಲಸಗಾರರ ಸಂಖ್ಯೆ ಹೆಚ್ಚಳ ಕಂಡಿದೆ. ಹಾಗಾಗಿ ಗಿಗ್‌ ಕೆಲಸಗಾರರನ್ನು ಪಿಂಚಣಿ ಯೋಜನೆಯ ವ್ಯಾಪ್ತಿಗೆ ಒಳಪಡಿಸಿದರೆ ಸೂಕ್ತ ಎಂದು ಹೇಳಲಾಗಿದೆ. ಇನ್ನು ಡಿಜಿಟಲ್‌ ವೇದಿಕೆಗಳಲ್ಲಿ ಕೆಲಸದ ವಾತಾವರಣ ಹೇಗಿದೆ ಎಂದು ತಿಳಿಯಲು ಫೇರ್‌ ವರ್ಕ್‌ ಇಂಡಿಯಾ ಸಂಸ್ಥೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಶೀಲನೆಯನ್ನು ನಡೆಸುತ್ತದೆ.

ಈಗ 12 ಡಿಜಿಟಲ್‌ ವೇದಿಕೆಗಳ ಪರಿಶೀಲನೆಯನ್ನು ಆಕ್ಸ್‌ ಫರ್ಡ್‌ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಪರಿಶೀಲಿಸಿದೆ. ಗಿಗ್‌ ಕೆಲಸಗಾರರಿಗೆ ಉತ್ತಮವಾದ ಕೆಲಸದ ವಾತಾವರಣವನ್ನು ಒದಗಿಸಿಕೊಡುವುದರಲ್ಲಿ ಊಬರ್‌, ಓಲಾ, ಡಂಜೋ, ಅಮೆಜಾನ್ ಫ್ಲೆಕ್ಸ್ ಹಾಗೂ ಫಾರ್ಮ್ ಈಸಿ ಅತ್ಯಂತ ಕಡಿಮೆ ಅಂಕಗಳನ್ನು ಗಳಿಸಿರುವುದು ಬೆಳಕಿಗೆ ಬಂದಿದೆ. ಫೇರ್‌ವರ್ಕ್‌ ಇಂಡಿಯಾ ರೇಟಿಂಗ್ಸ್‌ 2022 ವರದಿಯಲ್ಲಿ ಮೇಲಿನ ಐದು ಕಂಪನಿಗಳು ಶೂನ್ಯ ಅಂಕವನ್ನು ಗಳಿಸಿದೆ. ಈ ಮೂಲಕ ಗಿಗ್‌ ಕೆಲಸಗಾರರ ಪರೀಸ್ಥಿತಿಯು ಉತ್ತಮವಾಗಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಇನ್ನು ಯಾವ ವೇದಿಕೆಯಲ್ಲೂ 7 ಕ್ಕಿಂತ ಹೆಚ್ಚಿನ ಅಂಕ ಪಡೆದಿಲ್ಲ ಎಂಬುದು ಮತ್ತೊಂದು ಆಶ್ಚರ್ಯಕರವಾದ ವಿಷಯ

Exit mobile version