Revenue Facts

ಗೌತಮ್ ಅದಾನಿ ಸಂಪತ್ತು ಒಂದೆ ವಾರದಲ್ಲಿ 46,663 ಕೋಟಿ ರೂ. ಏರಿಕೆ

ನವದೆಹಲಿ;ಒಂದೇ ದಿನದಲ್ಲಿ ಅದಾನಿ ಗ್ರೂಪ್ ಮುಖ್ಯಸ್ಥ ಗೌತಮ್ ಅದಾನಿ(Goutam Adani) ಅವರ ಸಂಪತ್ತು ಒಂದು ದಿನದಲ್ಲಿ 5.6 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ. ಅಂದ್ರೆ ಭಾರತೀಯ ರೂಪಾಯಿಗಳಲ್ಲಿ ಬರೋಬ್ಬರಿ 46,355 ಕೋಟಿ ರೂಪಾಯಿ ಆಗಿದೆ.ಅದಾನಿ ಗ್ರೂಪ್ ಕಂಪನಿಗಳು ಹಣಕಾಸು ಅಕ್ರಮ ಎಸಗಿವೆ ಎಂದು ಅಮೆರಿಕದ ಶಾರ್ಟ್ ಸೆಲ್ಲಿಂಗ್ ಕಂಪನಿ ಹಿಂಡೆನ್‌ಬರ್ಗ್(Hindenburg) ಕಳೆದ ವರ್ಷ ಆರೋಪಿಸಿತ್ತು. ಆದರೆ ಅದಾಗಿ ವರ್ಷದ ನಂತರ ಅದಾನಿ ಕಂಪನಿಯ ಷೇರುಗಳು ಮತ್ತೆ ಏರಿಕೆಯತ್ತ ಸಾಗಿದ್ದು, ಗೌತಮ್ ಅದಾನಿಯವರ ಸಂಪತ್ತು ಕೂಡ ಈಗ ಹೆಚ್ಚಾಗಿದೆ.ಹಿಂಡೆನ್​ಬರ್ಗ್ ಆರೋಪಗಳ ಬಗ್ಗೆ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದ್ದು, ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ. ಅಲ್ಲದೆ ಅದಾನಿ ಗ್ರೂಪ್​ ವಿರುದ್ಧದ ಮಾಧ್ಯಮ ವರದಿಗಳನ್ನೇ ಸತ್ಯವೆಂದು ಪರಿಗಣಿಸಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದ ನಂತರ ಮಂಗಳವಾರ ಅದಾನಿ ಷೇರು ಮೌಲ್ಯ ಹೆಚ್ಚಾಗಿವೆ.

ಡಿಸೆಂಬರ್ 4 ರಂದು, ಅದಾನಿ ಎಂಟರ್‌ಪ್ರೈಸಸ್ ಷೇರುಗಳ ಮೌಲ್ಯ ಶೇಕಡಾ 7, ಅದಾನಿ ಟೋಟಲ್ ಗ್ಯಾಸ್ ಶೇಕಡಾ 4.4, ಅದಾನಿ ಎನರ್ಜಿ ಸೊಲ್ಯೂಷನ್ಸ್ ಶೇಕಡಾ 7.1, ಅದಾನಿ ಪವರ್ ಶೇಕಡಾ 5.5, ಅದಾನಿ ಗ್ರೀನ್ ಎನರ್ಜಿ ಶೇಕಡಾ 9.4, ಎನ್‌ಡಿಟಿವಿ ಶೇಕಡಾ 3, ಅದಾನಿ ವಿಲ್ಮರ್ ಶೇಕಡಾ 1.7 ರಷ್ಟು ಏರಿದರೆ, ಅಂಬುಜಾ ಸಿಮೆಂಟ್ಸ್ ಶೇಕಡಾ 7.3, ಅದಾನಿ ಪೋರ್ಟ್ಸ್ ಶೇಕಡಾ 6.2, ಮತ್ತು ಎಸಿಸಿ ಶೇಕಡಾ 6.26 ರಷ್ಟು ಏರಿಕೆಯಾಗಿದೆ.ಗೌತಮ್ ಅದಾನಿ ಅವರ ಸಂಪತ್ತಿನ ಪ್ರಸ್ತುತ ನಿವ್ವಳ ಮೌಲ್ಯ 59.5 ಬಿಲಿಯನ್ ಡಾಲರ್​ಗೆ ಏರಿಕೆಯಾಗಿದೆ ಎಂದು ಫೋರ್ಬ್ಸ್(Forbes) ತಿಳಿಸಿದೆ.ಭಾನುವಾರದ ಚುನಾವಣಾ ಫಲಿತಾಂಶಗಳು ಸೋಮವಾರ ಸೆನ್ಸೆಕ್ಸ್(Censex) ಮತ್ತು ನಿಫ್ಟಿ(Nifti)ಯಲ್ಲಿ ಒಳ್ಳೆಯ ಸುದ್ದಿಯನ್ನು ತಂದವು ಮತ್ತು ಸಂಜೆಯ ವೇಳೆಗೆ ಹೂಡಿಕೆದಾರರ(Investors) ಸಂಪತ್ತು 5.83 ಲಕ್ಷ ಕೋಟಿ ರೂಪಾಯಿಗಳಷ್ಟು ಏರಿಕೆಗೊಂಡು 343.51 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ಕಳೆದ ಅವಧಿಯಲ್ಲಿ ಮಾರುಕಟ್ಟೆ ಮೌಲ್ಯ 337.67 ಲಕ್ಷ ಕೋಟಿ ರೂ. ನಷ್ಟಿತ್ತು. ಹಿಂಡೆನ್​ಬರ್ಗ್ ವರದಿಯ ಆರೋಪಗಳಿಂದ ಅದಾನಿ 55 ಬಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದಾರೆ. ಆರೋಪಗಳು ಕೇಳಿಬಂದಾಗ ಅವರು ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದರು. ಆದರೆ ಈಗ ಅವರು ವಿಶ್ವದ 20 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ.

Exit mobile version