#Full waiver # interest on #cooperative# bank loans# Siddaramaiah
ಬೆಳಗಾವಿ;ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲವನ್ನು(Long term loan) ನಿಗದಿ ಪಡಿಸಿದ ಸಮಯದೊಳಗೆ ಮರು ಪಾವತಿ(Repayment) ಮಾಡಿದಲ್ಲಿ ಅಂತಹ ಸಾಲಗಳ ಮೇಲಿನ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುವುದೆಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಈ ಘೋಷಣೆ ಮಾಡಿರುವ ಸಿದ್ಧರಾಮಯ್ಯ, ಉತ್ತರ ಕರ್ನಾಟಕದ ರೈತರಿಗೂ ಅನುಕೂಲವಾಗಲೆಂದು ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವಂತ ವಿಧಾನಸಭೆಯಲ್ಲಿ ಮಾತನಾಡಿದಂತ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಹಕಾರಿ ಬ್ಯಾಂಕ್(Cooperative Bank) ನಲ್ಲಿ ಅವಧಿಯೊಳಗೆ ಸಾಲ ಮರುಪಾವತಿ ಮಾಡಿದ್ದಂತ ರೈತರ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದರು.ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲಕ್ಕೆ ಸಂಬಂಧಿಸಿದಂತ ಬಡ್ಡಿ ಮನ್ನಾ ಮಾಡಲಾಗುತ್ತಿದೆ.ಈ ವೇಳೆ ಮಧ್ಯಪ್ರವೇಶಿಸಿದಂತ ವಿಪಕ್ಷ ನಾಯಕ ಆರ್ ಅಶೋಕ್ ಸಿಎಂ ಸಿದ್ಧರಾಮಯ್ಯ ಸಾಲ ಮನ್ನಾ ಘೋಷಣೆಯನ್ನು ಟೀಕಿಸಿದರು. ಅಲ್ಲದೇ ರೈತರು ಸಾಲ ಕಟ್ಟಲ್ಲ ನೀವು ಬಡ್ಡಿ ಮನ್ನಾ ಮಾಡಲ್ಲ ಎಂದರು.ರೈತರ 2 ಲಕ್ಷ ರೂಪಾವಿಯವೆರಿಗನ ಸಾಲ ಮನ್ನಾ ಮಾಡಬೇಕು. ಬರದಿಂದ ಕಂಗೆಟ್ಟ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ಪರಿಹಾರ ಕೊಡಬೇಕು ಎಂಬುದಾಗಿಯೂ ಒತ್ತಾಯಿಸಿದರು.