Revenue Facts

ಪಹಣಿ ಕಾಲಂ 5 ಕಾಲಂಗಳ ಬಗ್ಗೆ ಸಂಪೂರ್ಣ ಮಾಹಿತಿ..

ಪಹಣಿ ಕಾಲಂ 5 ಕಾಲಂಗಳ ಬಗ್ಗೆ ಸಂಪೂರ್ಣ ಮಾಹಿತಿ..

ಬೆಂಗಳೂರು, ಮೇ. 17 : ಈ ಹಿಂದೆ ಬ್ರಿಟೀಷರ ಕಾಲ ಇದ್ದಾಗ ಅವರ ನೇರ ಆಡಳಿತ ಇದ್ದಾಗ ಭೂಮಿಯ ಕಾಯ್ದೆ ಬೇರೆ ಬೇರೆಯೇ ಇತ್ತು. ಆಗ ಗಡಿ ಗುರುತಿಸುವಿಕೆ ಬಹಳ ಕಷ್ಟಕರವಾಗಿತ್ತು. ಜೊತೆಗೆ ಉಳ್ಳವರು ಬಡ ರೈತರ ಜಮೀನು ಅಕ್ರಮ ಮಾಡಿಕೊಂಡಿದ್ದರು. ಹೀಗಾಗಿ ಭೂ ಸುಧಾರಕ ಥಾಮಸ್ ಮೊನ್ರೋ ಸಹಾಯದಿಂದ ಅನೇಕ ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದವು. ಹಕ್ಕು ಪತ್ರವನ್ನು ನೀಡಲು ಪ್ರಾರಂಬಿಸಿದರು. ಆಗ ಇದನ್ನು ಗಟ್‌ ಎಂದು ಕರೆಯಲಾಗುತ್ತಿತ್ತು. ಕೊನೆಯಲ್ಲಿ ಭೂಮಿ ಅಳತೆ ಮಾಡಿ, ಸರ್ವೆ ನಂಬರ್ ಅನ್ನು ನೀಡಲಾಗುತ್ತಿತ್ತು.

ಪಹಣಿ ಎಂದರೇನು?

ಜಮೀನು ನಿಮ್ಮದು ಎಂದು ಹೇಳಲು ಅಥವಾ ತೋರಿಸಲು ಇರುವ ದಾಖಲೆಯೇ ಪಹಣಿ. ಇದನ್ನು ಫಾರ್ಮ್ 16 ಎಂದು ಕೂಡ ಕರೆಯಲಾಗುತ್ತದೆ. ಇನ್ನು ಪಹಣಿಯಲ್ಲಿ ಒಟ್ಟು 16 ಕಾಲಂಗಳು ಇರುತ್ತವೆ. ಇದರಲ್ಲಿ 12 ಕಾಲಂಗಳಲ್ಲಿ ಏನಿರುತ್ತೆ ಎಂಬುದನ್ನು ತಿಳಿಯೋಣ ಬನ್ನಿ. 1ನೇ ಕಾಲಂನಲ್ಲಿ ಸರ್ವೇ ನಂಬರ್ ಇರುತ್ತದೆ. ಜಮೀನು ಗುರುತಿಸಲು ಮತ್ತು ಕ್ರಮಬದ್ಧ ದಾಖಲೆ ಸೃಷ್ಟಿಸಲು ಇದು ಸಹಕಾರಿಯಾಗುತ್ತದೆ.
2ನೇ ಕಾಲಂ ಹಿಸ್ಸಾ ನಂಬರ್ ಇರುತ್ತದೆ.

ಮೂಲ ಸರ್ವೆ ಭಾಗ ಮಾಡಿ, ಭೂಮಿಗೆ ಹೊಸ ಹಿಸ್ಸಾ ಸಂಖ್ಯೆಯನ್ನು ನೀಡಲಾಗುತ್ತದೆ. ಉದಾಹರಣೆಗೆ ರಾಮಪ್ಪ ಹೆಸರಿಗೆ ಸರ್ವೆ ನಂಬರ್ 5 ರಲ್ಲಿ 6 ಎಕರೆ ಜಮೀನು ಇರುತ್ತದೆ. ಇದನ್ನು ಎರಡು ಮಕ್ಕಳಿಗೆ ಸಮಪಾಲು ಮಾಡಿ ನೀಡಿದಾಗ ಹಿಸ್ಸಾ ನಂಬರ್ ಕ್ರಮವಾಗಿ 5*1 ಮತ್ತು 5*2 ಎಂದು ಇರುತ್ತದೆ. 3ನೇ ಕಾಲಂ ಜಮೀನಿನ ವಿಸ್ತೀರ್ಣವನ್ನು ಜಮೀನಿನ ಒಟ್ಟು ವಿಸ್ತೀರ್ಣ 3ನೇ ಕಾಲಂ ನಲ್ಲಿ. ಜಮೀನಿನ ಒಟ್ಟು ವಿಸ್ತೀರ್ಣ ಖರಾಬ್ ಜಮೀನಿನ ವಿಸ್ತರಣೆ ಸಾಗುವಳಿ ಜಮೀನಿನ ವಿಸ್ತೀರ್ಣ ಖರಾಬ್ ಜಮೀನಿನ ಬಗ್ಗೆ ನೀಡಿರಲಾಗುತ್ತದೆ.

ಪಹಣಿಯ ಪ್ರಮುಖ ಅಂಶಗಳು.!

1) ವರ್ಷಕ್ಕೊಮ್ಮೆ ಪಹಣಿ ತೆಗೆದುಕೊಂಡು ಪರಿಶೀಲಿಸುವುದು ಸೂಕ್ತ.!

2) ಮೂಲ ಸರ್ವೆ ಆರಂಭ ಮೈಸೂರು ಸಂಸ್ಥಾನದಲ್ಲಿ.!

3) ಸರ್ವೇ ನಂಬರ್ ಹೇಗೆ ಬಂತು.!

ಗ್ರಾಮಠಾಣಾ ಹೊರತುಪಡಿಸಿ, ಉತ್ತರ ದಿಕ್ಕಿನಿಂದ ಪೂರ್ವಕ್ಕೆ, ಪೂರ್ವ ದಿಕ್ಕಿನಿಂದ ದಕ್ಷಿಣ, ಕೊನೆಯಲ್ಲಿ ಪಶ್ಚಿಮ್ ದಿಕ್ಕಿಗೆ ಬರುವ ಎಲ್ಲಾ ಭೂಮಿ ಅಳತೆ ಮಾಡಿ ಸರ್ವೇ ನಂಬರ್ ನೀಡಿಲಾಗುತ್ತದೆ. 5ನೇ ಕಾಲಂ ಮಣ್ಣಿನ ವಿಧವನ್ನು ಹೇಳಿರಲಾಗುತ್ತದೆ. ಜಮೀನಿನಲ್ಲಿರುವ ಮಣ್ಣು ಯಾವುದೆಂದು ಗುರುತಿಸಿ ತಿಳಿಸಲಾಗಿರುತ್ತದೆ. ಮಣ್ಣು ಕಪ್ಪು, ಕೆಂಪು, ಜೇಡಿ & ಸೇಡಿ ಎಂದು ಗುರುತಿಸಲಾಗಿರುತ್ತದೆ. ಇದು ಮಾರಾಟ ಮಾಡುವಾಗ ಬೆಲೆ ನಿಗಧಿ ಪಡಿಸಲು ಸಹಕಾರಿಯಾಗುತ್ತದೆ. ಜಮೀನಿನ ಕಂದಾಯ ದರ ನಿಗದಿ ಮಾಡಲು ಮಣ್ಣಿನ ವಿಧ ಪ್ರಮುಖ ಪಾತ್ರ.!

Exit mobile version