Revenue Facts

ಅಕ್ಟೋಬರ್ 1ರಿಂದ ಜನನ ಪ್ರಮಾಣ ಪತ್ರವೆ ಎಲ್ಲದಕ್ಕೂ ಏಕೈಕ ದಾಖಲೆ

ನವದೆಹಲಿ : ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು, ಚಾಲನಾ ಪರವಾನಗಿ ಪಡೆಯಲು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ, ಆಧಾರ್ (Aadharcard)ಸಂಖ್ಯೆ ನೋಂದಣಿಗೆ, ವಿವಾಹ ನೋಂದಣಿಗೆ, ಸರ್ಕಾರಿ ಉದ್ಯೋಗ ನೇಮಕಾತಿ ಮತ್ತು ಕೇಂದ್ರ ಸರ್ಕಾರ ಇತರ ಯಾವುದೇ ಉದ್ದೇಶಕ್ಕಾಗಿ ಜನನ ಏಕೈಕ ದಾಖಲೆಯಾಗಿ(Document) ಬಳಸುವುದನ್ನು ಜನನ ಮತ್ತು ಮರಣ ನೋಂದಣಿ ಕಾಯ್ದೆ, 2023 ಅಕ್ಟೋಬರ್ 1 ರಿಂದ ಇನ್ನಿತರ ಯಾವುದೇ ಉದ್ದೇಶಕ್ಕಾಗಿ ಜನನ ಪ್ರಮಾಣಪತ್ರವನ್ನು ಏಕೈಕ ದಾಖಲೆಯಾಗಿ ಬಳಸುವುದನ್ನು ಕಡ್ಡಾಯಗೊಳಿಸುವ ಜನನ ಮತ್ತು ಮರಣ ನೋಂದಣಿ ಕಾಯ್ದೆ 2023 ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ. ಕಳೆದ ಮುಂಗಾರು ಅಧಿವೇಶನದಲ್ಲಿ ಈ ಮಸೂದೆಗೆ ಅನುಮೋದನೆ ನೀಡಲಾಗಿತ್ತು. ಅದರಂತೆ, ಈ ಕಾಯಿದೆ ಜಾರಿಗೆ ಬರುವ ದಿನಾಂಕದಂದು/ ಬಳಿಕ ಎಲ್ಲ ಉದ್ದೇಶಗಳಿಗೆ ಜನನ ಪ್ರಮಾಣಪತ್ರವನ್ನು ಒಂದೇ ದಾಖಲೆಯಾಗಿ ಬಳಸಬಹುದಾಗಿದೆ.ಬಹುತೇಕ ದಾಖಲೆ ಪಡೆಯಲು (Single Document) ಇನ್ನು ಮುಂದೆ ‘ಜನನ ಪ್ರಮಾಣಪತ್ರ’ ಒಂದೇ (Birth Certificate) ಸಾಕಾಗುತ್ತದೆ.

ಕಳೆದ ತಿಂಗಳು ಮುಕ್ತಾಯಗೊಂಡ ಮುಂಗಾರು ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳು ಜನನ ಮತ್ತು ಮರಣ ನೋಂದಣಿ ಮಸೂದೆ(Birth and Death Registration Bill), 2023 ಅನ್ನು ಅಂಗೀಕರಿಸಿವೆ. ರಾಜ್ಯಸಭೆ ಆಗಸ್ಟ್ 7 ರಂದು ಧ್ವನಿ ಮತದಿಂದ ಮಸೂದೆಯನ್ನು ಅಂಗೀಕರಿಸಿದರೆ, ಲೋಕಸಭೆ ಆಗಸ್ಟ್ 1 ರಂದು ಅಂಗೀಕರಿಸಿದೆ.ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ, 2023 ರ 20) ರ ಸೆಕ್ಷನ್ 1 ರ ಉಪ-ವಿಭಾಗ (2) ರ ಅಡಿ ನೀಡಲಾದ ಅಧಿಕಾರಗಳನ್ನು ಚಲಾಯಿಸಲು, ಕೇಂದ್ರ ಸರ್ಕಾರವು ಈ ಮೂಲಕ 2023 ರ ಅಕ್ಟೋಬರ್ 1 ನೇ ದಿನವನ್ನು ಸದರಿ ಕಾಯ್ದೆಯ ನಿಬಂಧನೆಗಳು ಜಾರಿಗೆ ಬರುವ ದಿನಾಂಕವಾಗಿ ಘೋಷಿಸುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಸಾರ್ವಜನಿಕ ಸೇವೆಗಳು ಮತ್ತು ಸಾಮಾಜಿಕ ಯೋಜನೆಗಳು ಮತ್ತು ಡಿಜಿಟಲ್ (Digital) ನೋಂದಣಿಯ ಪರಿಣಾಮಕಾರಿ ಮತ್ತು ಪಾರದರ್ಶಕತೆ ಖಚಿತಪಡಿಸುತ್ತದೆ.ಕಳೆದ ತಿಂಗಳು ಮುಕ್ತಾಯಗೊಂಡ ಮುಂಗಾರು ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳು ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಮಸೂದೆ-2023ಅನ್ನು ಅಂಗೀಕರಿಸಿವೆ.

Exit mobile version