Revenue Facts

ಜಗತ್ತಿನಲ್ಲಿ ವಾಸ ಮಾಡಲು ಸ್ನೇಹಪರ ನಗರಗಳು ಯಾವುವು ಗೊತ್ತೇ..?

ಬೆಂಗಳೂರು, ಜೂ. 27: ಈಗ ಪ್ರತಿಯೊಬ್ಬರು ತಮ್ಮ ವೃತ್ತಿ ಜೀವನವನ್ನು ಹುಟ್ಟೂರಿನಲ್ಲಿ ಮುಂದುವರೆಸದೇ, ಬೇರೆ ಜಾಗಗಳಿಗೆ ತೆರಳಲು ಬಯಸುತ್ತಾರೆ. ಫಾರಿನ್‌ ಗಳಲ್ಲಿ ಉದ್ಯೋಗ ಮಾಡಲು ಹಲವರು ಹಾತೊರೆಯುತ್ತಾರೆ. ಆದರೆ, ಜಗತ್ತಿನ ಯಾವ ನಗರಗಳು ಹೊರ ಜನರಿಗೆ ಮಣೆ ಹಾಕುತ್ತದೆ ಅಥವಾ ಬೇರೆ ದೇಶದಿಂದ ಬರುವ ಜನರಿಗೆ ಯಾವೆಲ್ಲಾ ನಗರಗಳು ಸ್ನೇಹಪರವಾಗಿರುತ್ತವೆ. ಯಾವ ನಗರಗಳು ಸ್ನೇಹಮಯಿ ಆಗಿ ಇರುವುದಿಲ್ಲ ಎಂಬುದನ್ನು ಸಮುದಾಯ ಸ್ಪಿರಿಟ್ ಇಂಡೆಕ್ಸ್ ಸಮೀಕ್ಷೆ ನಡೆಸಿದೆ.

ಸಮುದಾಯ ಸ್ಪಿರಿಟ್ ಇಂಡೆಕ್ಸ್ನ ಪ್ರಕಾರ ವಿವಿಧ ದೇಶಗಳ 53 ನಗರಗಳಿಗೆ ಅವರ ನಿವಾಸಿಗಳ ಸಮೀಕ್ಷೆಯನ್ನು ನಡೆಸಿದ್ದು, ಅದರಂತೆ ಸ್ನೇಹಪರ ಹಾಗೂ ಸ್ನೇಹಮಯಿ ಅಲ್ಲದ ನಗರಗಳನ್ನು ಗುರುತಿಸಿವೆ. ಭಾರತದಲ್ಲಿನ ನಗರಗಳನ್ನು ಸಮೀಕ್ಷೆ ನಡೆಸಲಾಗಿದೆ. ಆನ್‌ಲೈನ್ ಟ್ಯೂಟರಿಂಗ್ ಹಾಗೂ ಭಾಷಾ ಪಾಠಗಳ ವೇದಿಕೆಯಾದ ಪ್ರಿಪ್ಲೈ ನಡೆಸಿದ ಸಮೀಕ್ಷೆಯ ಬಹಿರಂಗಪಡಿಸಿದೆ. ಹಾಗಾದರೆ, ಮೊದಲನೇಯದಾಗಿ ಸ್ನೇಹಪರವಲ್ಲದ ನಗರಗಳ ಪಟ್ಟಿಯನ್ನು ನೋಡೋಣ ಬನ್ನಿ.

ಘಾನಾದ ಅಕ್ರಾ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದಲ್ಲಿನ ಮೊರಾಕೊದ ಮರ್ಕೆಚ್‌ ಎರಡನೇ ಸ್ಥಾನದಲ್ಲಿದೆ. ಭಾರತದ ಮುಂಬೈ ಮೂರನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಮಲೇಶಿಯಾದ ಕೌಲಾಲಂಪುರ್, ಬ್ರೆಜಿಲ್‌ ದೇಶದ ರಿಯೋ ಡಿ ಜನೈರೊ, ಭಾರತದ ದೆಹಲಿ ದೇಶಗಳು ಇವೆ. ಸ್ನೇಹಪರವಲ್ಲದ ಈ ನಗರಗಳನ್ನು ಗುರುತಿಸಲು ಕೆಲ ಮಾನದಂಡಗಳನ್ನು ಪರಿಗಣಿಸಲಾಗಿದೆ. ಸಂದರ್ಶಕರ ವಾಪಸಾತಿ ದರಗಳು, ಸುರಕ್ಷತೆಯ ರೇಟಿಂಗ್‌ಗಳು, LGBTQ+ ಸಮಾನತೆ, ಒಟ್ಟಾರೆ ಸಂತೋಷ, ಸಾಮಾನ್ಯ ಭಾಷೆಯ ಮೂಲಕ ಸಂವಹನದ ಸುಲಭತೆ ಹಾಗೂ ಸಿಬ್ಬಂದಿ ಸ್ನೇಹಪರತೆಯ ಅಂಶಗಳನ್ನು ಮಾನದಂಡಗಳನ್ನಾಗಿ ಒಳಗೊಂಡಿವೆ.

ಇನ್ನು ಸ್ನೇಹಪರ ನಗರಗಳ ಪಟ್ಟಿಯಲ್ಲಿ ಯಾವೆಲ್ಲಾ ಸಿಟಿಗಳು ಸೇರಿವೆ ಎಂಬುದನ್ನು ನೋಡೋಣ. ಟೊರೊಂಟೊ ಮತ್ತು ಸಿಡ್ನಿ ನಗರಗಳು ಅಗ್ರಸ್ಥಾನದಲ್ಲಿವೆ. ನಂತರದಲ್ಲಿ ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ, ಡಬ್ಲಿನ್, ಎಡಿನ್‌ಬರ್ಗ್, ಕೋಪನ್ ಹ್ಯಾಗನ್, ಮೆಲ್ಬೋರ್ನ್, ಮಾಂಟ್ರಿಯಲ್ ಹಾಗೂ ಮ್ಯಾಂಚೆಸ್ಟರ್ ಉನ್ನತ ಸ್ನೇಹಪರ ನಗರಗಳ ಪಟ್ಟಿಯಲ್ಲಿ ಸೇರಿವೆ.

Exit mobile version