Revenue Facts

ಮುಡಾ ನಿವೇಶನ ಕೊಡಿಸುವುದಾಗಿ ವಂಚನೆ: ನಿವೃತ್ತ ಡಿವೈಎಸ್ ಪಿ ವಿಜಯಕುಮಾರ್ ಬಂಧನ

ಮುಡಾ ನಿವೇಶನ ಕೊಡಿಸುವುದಾಗಿ ವಂಚನೆ: ನಿವೃತ್ತ ಡಿವೈಎಸ್ ಪಿ ವಿಜಯಕುಮಾರ್ ಬಂಧನ

ಮೈಸೂರು : ಮುಡಾ ನಿವೇಶನ(Muda location) ಕೊಡಿಸುವುದಾಗಿ ಬೀದಿ ಬದಿ ವ್ಯಾಪಾರಿಗೆ ವಂಚಿಸಿದ ಪ್ರಕರಣದ ಎರಡನೇ ಆರೋಪಿಯಾಗಿರುವ ನಿವೃತ್ತ ಡಿವೈಎಸ್ ಪಿ(DYSP) ವಿಜಯಕುಮಾರ ಅವರನ್ನು ಲಕ್ಷ್ಮಿಪುರಂ ಠಾಣೆ(Lakshmipuram) ಪೋಲೀಸರು ಮಂಗಳವಾರ ಬಂಧಿಸಿದ್ದಾರೆ.ಈ ಪ್ರಕರಣದ ಪ್ರಮುಖ ಆರೋಪಿ ಮಾಜಿ ಕಾರ್ಪೊರೇಟರ್(Corprator) ಆರ್.ಸೋಮ ಸುಂದರ್ ಅವರನ್ನು ಸೆ. 28 ರಂದು ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ನ್ಯಾಯಾಂಗ(Judiciary) ಬಂಧನಕ್ಕೆ ಒಪ್ಪಿಸಲಾಗಿತ್ತು. ವಂಚನೆಗೆ ಸಹಕರಿಸಿದ ಆರೋಪವಿರುವ ನಿವೃತ್ತ ಡಿವೈಎಸ್ ಪಿ(DYSP) ವಿಜಯಕುಮಾರ್ ಮುಡಾ ನಿವೇಶನ(Muda location) ಕೊಡಿಸುವುದಾಗಿ ಭರವಸೆ ನೀಡಿ, ನಕಲಿ ದಾಖಲೆ(Fake document) ಸೃಷ್ಟಿಸಿ, ನನ್ನಿಂದ 12 ಲಕ್ಷ ರೂ. ಹಣ ಪಡೆದು ವಂಚಿಸಿರುವುದಾಗಿ ಮೈಸೂರಿನ ಬೋಗಾದಿ ಬ್ಯಾಂಕ್ ಕಾಲೋನಿ ನಿವಾಸಿ ಪುಟ್ಟರಾಜೇಗೌಡರ ಮಗ ವೆಂಕಟರಾಜು ನೀಡಿದ ದೂರಿನ ಮೇರೆಗೆ ಆರ್.ಸೋಮಸುಂದರ್ ಮತ್ತು ವಿಜಯ್ ಕುಮಾರ್ ವಿರುದ್ಧ ಲಕ್ಷ್ಮಿಪುರಂ ಠಾಣೆಯಲ್ಲಿ ಸೆ. 25 ರಂದು ಎಫ್.ಐ.ಆರ್ ದಾಖಲಾಗಿತ್ತು.

Exit mobile version