Revenue Facts

8,800 ಕೋಟಿ ರೂ ಹೂಡಿಕೆ ಮಾಡಲಿದೆ ಫಾಕ್ಸ್‌ಕಾನ್ ಕಂಪನಿ

8,800 ಕೋಟಿ ರೂ ಹೂಡಿಕೆ ಮಾಡಲಿದೆ ಫಾಕ್ಸ್‌ಕಾನ್ ಕಂಪನಿ

ಬೆಂಗಳೂರು, ಜು . 17 :ತುಮಕೂರಿನಲ್ಲಿ ಮತ್ತೊಂದು ಘಟಕ ಸ್ಥಾಪಿಸುವ ಪ್ರಸ್ತಾವನೆ ಕುರಿತಂತೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಫಾಕ್ಸ್‌ಕಾನ್ ಕಂಪನಿಯ ಸಿಇಓ ಬ್ಯಾಂಡ್ ಚೆಂಗ್ ನೇತೃತ್ವದ ಎಫ್‌ಐಐ ನಿಯೋಗದ ಜೊತೆ ಉನ್ನತ ಮಟ್ಟದ ಸಭೆ ವಿಧಾನಸೌಧ ಸಮಿತಿ ಕೊಠಡಿಯಲ್ಲಿ ನಡೆಯಿತು ಬಳಿಕ ಮಾತನಾಡಿದ ಸಿಎಂ, ಫಾಕ್ಸ್ ಕಾನ್ ಸಂಸ್ಥೆಗೆ ಉದ್ಯಮ ಸ್ಥಾಪಿಸಲು ರಾಜ್ಯ – ಸರ್ಕಾರ ಅಗತ್ಯ ಸಹಕಾರ ನೀಡುವುದಾಗಿ ತಿಳಿಸಿದರು.

ಫಾಕ್ಸ್ ಕಾನ್ ಕಂಪನಿಯ ಅಂಗಸಂಸ್ಥೆ ಫಾಕ್ಸ್‌ಕಾನ್ ಇಂಡಸ್ಟ್ರಿಯಲ್ ಇಂಟರ್ನೆಟ್ (ಎಫ್‌ಐಟಿ) ಇದಕ್ಕಾಗಿ 8,800 ಕೋಟಿ ರೂ. ಹೂಡಿಕೆ ಮಾಡುವ ಯೋಜನೆ ಹೊಂದಿದ್ದು, ಇದು 14,000 ಉದ್ಯೋಗ ಸೃಷ್ಟಿಸಲಿದೆ.ತುಮಕೂರಿನ ಬಳಿ ಇರುವ ಜಪಾನೀಸ್ ಕೈಗಾರಿಕಾ ವಸಾಹತು ಪ್ರದೇಶದಲ್ಲಿ ಅಗತ್ಯ 100 ಎಕರೆ ಭೂಮಿ ಇದ್ದು, ಉದ್ದಿಮೆ ಸ್ಥಾಪಿಸಲು ಒಳ್ಳೆಯ ವಾತಾವರಣ ಇದೆ. ಇದಕ್ಮೆ ರಾಜ್ಯ ಸರ್ಕಾರ ಕೂಡ ಪೂರ್ಣ ಸಹಕಾರ ನೀಡಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ. ಪಾಟೀಲ, ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು,ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯಕಾರ್ಯದರ್ಶಿ ರಜನೀಶ್ ಗೋಯಲ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ ಸೇರಿದಂತೆ ಇತರರು ಇದ್ದರು.

Exit mobile version