Revenue Facts

ಪಠ್ಯಪುಸ್ತಕ ಪರಿಷ್ಕರಣೆಗೆ ತಜ್ಞರ ಸಮಿತಿ ರಚನೆ

ಪಠ್ಯಪುಸ್ತಕ ಪರಿಷ್ಕರಣೆಗೆ ತಜ್ಞರ ಸಮಿತಿ ರಚನೆ

ಬೆಂಗಳೂರು: ರಾಜ್ಯ ಪಠ್ಯಕ್ರಮದ ಪಠ್ಯ ಪುಸ್ತಕಗಳ ಪರಿಷ್ಕರಣೆಗೆ ಐದು ಸಮಿತಿಗಳನ್ನು ರಚಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.ಕನ್ನಡ ಪ್ರಥಮ ಭಾಷೆ, ಕನ್ನಡ ದ್ವಿತೀಯ ಭಾಷೆ, ಕನ್ನಡ ತೃತೀಯ ಭಾಷೆ, 6, 7ನೇ ತರಗತಿಯ ಸಮಾಜ ವಿಜ್ಞಾನ ಹಾಗೂ 8,9,10ನೇ ತರಗತಿಯ ಸಮಾಜ ವಿಜ್ಞಾನಕ್ಕೆ ಪ್ರತ್ಯೇಕವಾಗಿ ಸಮಿತಿಗಳನ್ನು ರಚಿಸಲಾಗಿದ್ದು, ಪಠ್ಯಪುಸ್ತಕಗಳ ಪರಿಷ್ಕರಣೆ ಸಂಬಂಧ ಶೈಕ್ಷಣಿಕ ಮಾರ್ಗದರ್ಶನ ಮತ್ತು ಸಲಹೆ ನೀಡಲು ಉತ್ತರ ಕನ್ನಡ ಜಿಲ್ಲೆಯ ಡಾ. ಮಂಜುನಾಥ ಜಿ. ಹೆಗಡೆ ಅವರನ್ನು ಮುಖ್ಯ ಸಂಯೋಜಕರನ್ನಾಗಿ ಹಾಗೂ ಹಲವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.2-3ತಿಂಗಳಲ್ಲಿ ಪರಿಷ್ಕರಣೆ ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ,ಸಮಿತಿಗಳ ಅಧ್ಯಕ್ಷರು

ಸಮಿತಿಗಳ ಅಧ್ಯಕ್ಷರು ವಿವರ:

ಪ್ರಥಮ ಭಾಷೆ ಕನ್ನಡ: ಅಂಜನಪ್ಪ, ಪ್ರಾಧ್ಯಾಪಕರು, ತುಂಗಾಕಾಲೇಜು, ತೀರ್ಥಹಳ್ಳಿ.

ದ್ವಿತೀಯ ಭಾಷೆ ಕನ್ನಡ:ಎಚ್.ಎಸ್.ಸತ್ಯನಾರಾಯಣ್‌, ಉಪನ್ಯಾಸಕ, ಸರ್ಕಾರಿ ಬಾಲಕಿಯರ ಪಿಯು

ಕಾಲೇಜು ಬಸವನಹಳ್ಳಿ, ಚಿಕ್ಕಮಗಳೂರು.

ತೃತೀಯ ಭಾಷೆ ಕನ್ನಡ: ಮಂಜಣ್ಣ, ಪ್ರಾಧ್ಯಾಪಕ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ.

6,7ನೇ ತರಗತಿ ಸಮಾಜ ವಿಜ್ಞಾನ: ಎಂ.ಕಿರಣ್‌, ಸಹಾಯಕ ಪ್ರಾಧ್ಯಾಪಕರು, ಕೇಂದ್ರೀಯ ವಿವಿ ಕಲಬುರಗಿ.

8-10ನೇ ತರಗತಿ ಸಮಾಜ ವಿಜ್ಞಾನ: ಅಶ್ವತ್ಥನಾರಾಯಣ, ನಿವೃತ್ತ ಪ್ರಾಧ್ಯಾಪಕರು ಬೆಂಗಳೂರು.

Exit mobile version