Revenue Facts

ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ಅವಲಹಳ್ಳಿಯಲ್ಲಿ ಭೂಮಿ ಒತ್ತುವರಿ ನಡೆಸಿದ ಬಿಡಿಎ ಅಧಿಕಾರಿಗಳು

ಬೆಂಗಳೂರು, ಮೇ. 20 : ಶಿವರಾಂ ಕಾರಂತ ಬಡಾವಣೆಗಾಗಿ ಕೆಲಸ ಚುರುಕುಗೊಂಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಶಿವರಾಂ ಕಾರಂತ ಬಡಾವಣೆಗಾಗಿ ಭೂ ಸ್ವಾಧೀನ ಪ್ರಕ್ರಿಯೆ ಅನ್ನು ಪ್ರಾರಂಭಿಸಿದೆ. ಯಲಹಂಕದ ಅವಲಹಳ್ಳಿಯಲ್ಲಿರುವ ಕುದುರೆ ಫಾರ್ಮ್‌ ಅನ್ನು ತೆರವುಗೊಳಿಸಲಾಯ್ತು. ಭೂಮಿಯನ್ನು ಬಿಡಿಎ ಈಗ ಸ್ವಾಧೀನಪಡಿಸಿಕೊಂಡಿದ್ದು, ದಿಢೀರ್‌ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದೆ. ಲೇಔಟ್‌ ನಿರ್ಮಾಣಕ್ಕಾಗಿ 55 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ.

ಒತ್ತುವರಿ ಕಾರ್ಯಚರಣೆಯಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯ ಒಂದು ಭಾಗ ಸ್ಟಡ್ ಫಾರ್ಮ್ ಆಗಿತ್ತು ಎಂದು ಹೇಳಲಾಗಿದೆ. ಈ ಬಗ್ಗೆ ಮಾಹಿತಿ ನೀಡಿದ ಬಿಡಿಎ ಅಧಿಕಾರಿ, ಭೂಮಿ ಒತ್ತುವರಿ ಕಾರ್ಯಚರಣೆಯನ್ನು ನಡೆಸಲಾಗಿದೆ. 2008 ರಲ್ಲಿ ನೀಡಿದ್ದ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆ ಹಾಗೂ 2018 ರಲ್ಲಿ ಅಂತಿಮ ಅಧಿಸೂಚನೆಯನ್ನು ಅನುಸರಿಸಿ ಕ್ರಮ ಜರುಗಿಸಲಾಗಿದೆ. ಸ್ಟಡ್ ಫಾರ್ಮ್‌ನ ಮಾಲೀಕರಿಗೆ ಈ ಸಂಬಂಧ ಹಲವು ನೋಟಿಸ್‌ಗಳನ್ನು ನೀಡಲಾಗಿದೆ.

ಸ್ಟಡ್ ಫಾರಂನ ಮೂರು ಕಿ.ಮೀ ಕಾಂಪೌಂಡ್ ಗೋಡೆ ಇರುವ ಭಾಗವನ್ನು ಕೆಡವಲಾಗಿದ್ದು, ಭೂಮಿಯನ್ನು ಸ್ವಾಧಿನಪಡಿಸಿಕೊಳ್ಳಲಾಗಿದೆ. ಆದರೆ ಇಲ್ಲಿರುವ ಕುದುರೆಗಳ ಲಾಯಗಳು, ಗದ್ದೆಗಳು ಹಾಗೂ ಕೂಲಿ ಕಾರ್ಮಿಕರ ವಸತಿಗಳಿಗೆ ತೊಂದರೆ ಕೊಟ್ಟಿಲ್ಲ. ಇದೆಲ್ಲದರ ಸ್ಥಳಾಂತರಗೊಳಿಸಲು ಸಮಯವನ್ನು ನೀಡಲಾಗಿದೆ. ಇನ್ನು ಬಡಾವಣೆ ನಿರ್ಮಾಣಕ್ಕೆ ಇದಕ್ಕೆ 3,546 ಎಕರೆ ಮತ್ತು 12 ಗುಂಟಾ ಭೂಮಿ ಅಗತ್ಯವಿದೆ ಎಂದು ಹೇಳಿದರು.

Exit mobile version