ಬಾಗಲಕೋಟೆ;ಬಾಗಲಕೋಟೆ ತಹಶೀಲ್ದಾರ್ (Tahasildar) ಕಚೇರಿಯ ಮೇಲೆ ದಾಳಿ ನಡೆಸಿದ ಲೋಕಾಯುಕ್ತ(Lokayukta) ಅಧಿಕಾರಿಗಳು ಆಹಾರ ಇಲಾಖೆ ನಿರೀಕ್ಷಕ (Food inspector) ಮತ್ತು ಸಿಬ್ಬಂದಿಯನ್ನು ಬಲೆಗೆ ಕೆಡವಿದ್ದಾರೆ.ಆಹಾರ ಇಲಾಖೆ ನಿರೀಕ್ಷಕ ಮತ್ತು ಸಿಬ್ಬಂದಿ ಲೋಕಾಯುಕ್ತ(lokayukta) ಬಲೆಗೆ ಬಿದ್ದ ಪ್ರಕರಣ ಬೆಳಕಿಗೆ ಬಂದಿದೆ. 60 ಸಾವಿರ ಲಂಚ(Bribe) ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.ಫುಡ್ ಇನ್ಸ್ ಪೆಕ್ಟರ್ ವೀರಯ್ಯ ಕೋಟಿ, ಶಿರಸ್ತೆದಾರ ಶ್ರೀಶೈಲ್ ಗಯ್ಯಾಳಿ ಲೋಕಾಯುಕ್ತ ಬಲೆಗೆ ಬಿದ್ದ .ಬಾಗಲಕೋಟೆಯ ಮುಚಖಂಡಿ ಕ್ರಾಸ್ ಹಾಗೂ ವಿದ್ಯಾಗಿರಿ 7ನೇ ಕ್ರಾಸ್ ನಲ್ಲಿರುವ ನ್ಯಾಯಬೆಲೆ ಅಂಗಡಿ ಮಾಲೀಕರಿಂದ ಆಹಾರ ಇಲಾಖೆ ಅಧಿಕಾರಿಗಳು ಲಂಚಕ್ಕೆ (Bribe) ಬೇಡಿಕೆ ಇಟ್ಟಿದ್ದರು.ಸುರೇಶ್ ಗಡಗಡಿ ಎಂಬುವರಿಂದ ರದ್ದಾದ ರೇಷನ್ ಅಂಗಡಿಗೆ ಪುನಃ ಆರಂಭಿಸಲು ಅನುಮತಿಗಾಗಿ 60 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರಂತೆ.ಸುರೇಂದ್ರ ಗಡಗಡೆ ಎಂಬುವರು ಲೋಕಾಯುಕ್ತರಿಗೆ ನೀಡಿದ ದೂರಿನ ಅನ್ವಯ ಡಿವೈಎಸ್ಪಿ ಪುಷ್ಪಲತಾ ಎನ್. ನೇತೃತ್ವದಲ್ಲಿ ಈ ದಾಳಿ ನಡೆದಿದೆ. ದಾಳಿ ವೇಳೆ ಆಹಾರ ಇಲಾಖೆ ನಿರೀಕ್ಷಕ ಮತ್ತು ಸಿಬ್ಬಂದಿ ಸಿಕ್ಕಿಬಿದ್ದಿದ್ದಾರೆ.