Revenue Facts

ಇಂದು ರಾಜ್ಯ ಶಿಕ್ಷಣ ಸಮಿತಿಯ ಮೊದಲ ಸಭೆ

#First #meeting #state #education #committee today

ಬೆಂಗಳೂರು;ರಾಜ್ಯ ಶಿಕ್ಷಣ ನೀತಿ(SEP) ಸಮಿತಿಯ ಮೊದಲ ಸಭೆಯು ಇಂದು ಬೆ.11ಗಂಟೆಗೆ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ನಡೆಯಲಿದೆ, ಈ ಸಭೆಗೆ ಹಾಜರಾಗುವಂತೆ ಎಲ್ಲ ಸದಸ್ಯರಿಗೆ ಆಹ್ವಾನವನ್ನು ನೀಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು(NEP) ರದ್ದು ಮಾಡಿ, SEPಯನ್ನು ಜಾರಿಗೆ ತರಲು ಸಿದ್ಧತೆ ಮಾಡಿಕೊಂಡಿದೆ. ಹಾಗಾಗಿ ಇದರ ಬಗ್ಗೆ ಚರ್ಚೆ ನಡೆಸಲು ಇಂದು ಮೊದಲ ಸಭೆ ಕರೆದಿದೆ. ಸಭೆಯಲ್ಲಿ ಸಮಿತಿ, ಉಪಸಮಿತಿಯ ರಚನೆ ಬಗ್ಗೆ ಚರ್ಚೆ ನಡೆಯಲಿದೆ.ಇದು ಮೊದಲ ಸಭೆಯಾಗಿರುವುದರಿಂದ ಸದಸ್ಯರಿಗೆ ಸ್ವ ಪರಿಚಯ ಮಾಡಿಕೊಳ್ಳುವುದಕ್ಕೆ ಸೂಚಿಸಲಾಗಿದೆ. ಇದರೊಂದಿಗೆ ಎಸ್‌ಇಪಿ ರಚನೆ ಸಂಬಂಧ ಸಮಿತಿಯ ಜತೆಯಲ್ಲಿ ಉಪ ಸಮಿತಿಗಳ ರಚನೆ ಕುರಿತು ಚರ್ಚೆ ನಡೆಯಲಿದೆ. ಎನ್ ಇಪಿನಲ್ಲಿದ್ದ ಅಂಶಗಳ ಕುರಿತು ಅವಲೋಕನ ನಡೆಯಲಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.ನವೆಂಬರ್ 3 ರಂದು ಎಂಟು ಸದಸ್ಯರ ತಜ್ಞರು/ಸಲಹೆಗಾರರ ಸಮಿತಿಯ ಸಭೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ ಇಲಾಖೆಯ ಸದಸ್ಯರೊಂದಿಗೆ ಉಪ ಸಮಿತಿಗಳನ್ನು ರಚಿಸುವುದು ಸಭೆಯ ಪ್ರಮುಖ ಕಾರ್ಯಸೂಚಿಗಳಲ್ಲಿ ಒಂದಾಗಿದೆ.ಅಕ್ಟೋಬರ್ 11 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರೊ. ಸುಖದೇವ್ ಥೋರಟ್ ಅಧ್ಯಕ್ಷತೆಯಲ್ಲಿ 15 ಸದಸ್ಯರ ಸಮಿತಿ ರಚಿಸಿ ಆದೇಶ ಹೊರಡಿಸಿದ್ದಾರೆ. ಸದಸ್ಯ ಕಾರ್ಯದರ್ಶಿಯಾಗಿ ಉನ್ನತ ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ಡಾ.ಭಾಗ್ಯವಾನ ಎಸ್.ಮುದಿಗೌಡ್ರ ಅವರನ್ನು ನೇಮಕ ಮಾಡಲಾಗಿದೆ.

Exit mobile version