Revenue Facts

ಕನ್ನಡ ಕಡ್ಡಾಯಕ್ಕೆ ಫೆ. 28 ಕೊನೆಯ ದಿನ ಇಲ್ಲದಿದ್ರೆ ದಂಡ ಫಿಕ್ಸ್

ಕನ್ನಡ ಕಡ್ಡಾಯಕ್ಕೆ ಫೆ. 28 ಕೊನೆಯ ದಿನ ಇಲ್ಲದಿದ್ರೆ ದಂಡ ಫಿಕ್ಸ್

ಬೆಂಗಳೂರು;ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಅಳವಡಿಕೆಗೆ ಫೆ. 28 ಕೊನೆಯ ದಿನ. ಈ ಸಂಬಂಧ ಮಂಡಿಸಲಾಗಿದ್ದ ವಿಧೇಯಕ ಎರಡೂ ಸದನಗಳಲ್ಲಿ ಅಂಗೀಕಾರವಾಗಿದೆ. ನಿಯಮದ ಪ್ರಕಾರ ಇನ್ನೀಗ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡವಿರಬೇಕು. ಇಲ್ಲದಿದ್ದರೆ ಪರವಾನಗಿ(Licence) ರದ್ದು ಮಾಡುವುದಾಗಿ DCM ಡಿಕೆಶಿ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಸರ್ಕಾರ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಕಾಯ್ದೆ ಅನ್ವಯ ಬೆಂಗಳೂರಿನ ಎಲ್ಲಾ ಅಂಗಡಿ, ಮುಂಗಟ್ಟುಗಳು, ಕಂಪನಿಗಳು, ಸಂಸ್ಥೆಗಳು, ವಾಣಿಜ್ಯ ಮಳಿಗೆಗಳು, ಕಾರ್ಖಾನೆಗಳು, ಸಂಘ-ಸಂಸ್ಥೆ, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲಾ ರೀತಿಯ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿದೆ. ಆದೇಶ ಪಾಲನೆಗೆ ಫೆಬ್ರವರಿ 28 ಕೊನೆಯ ದಿನವಾಗಿದೆ. ಪಾಲಿಸದಿದ್ದಲ್ಲಿ ಪರವಾನಗಿ ರದ್ದು ಮಾಡುವುದು ಅನಿವಾರ್ಯವಾಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.ನಾಮಫಲಕಗಳಲ್ಲಿ ಕನ್ನಡ ಬಳಕೆ ಕಡ್ಡಾಯ ಮಾಡುವ ವಿಚಾರಕ್ಕೆ ಕನ್ನಡಪರ ಸಂಘಟನೆಗಳು ಬೆಂಗಳೂರಿನಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದವು. ನಂತರ ಸರ್ಕಾರ ನಾಮಫಲಕಗಳಲ್ಲಿ ಶೇ.60 % ಕನ್ನಡ ಬಳಕೆ ಕಡ್ಡಾಯಗೊಳಿಸಿದ್ದು, ಫೆ.28 ಡೆಡ್ ಲೈನ್ ನೀಡಿದೆ.

Exit mobile version