Revenue Facts

ರೈತ ಪ್ರಣಾಳಿಕೆ: ರೈತ ಮಕ್ಕಳ ಮದುವೆಯಾಗುವ ಹೆಣ್ಣು ಮಕ್ಕಳಿಗೆ ಸರ್ಕಾರಿ ಕೆಲಸದಲ್ಲಿ ಮೀಸಲಾತಿ

ಬೆಂಗಳೂರು, ಏ. 18 : ರಾಜ್ಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಈ ಸಂದರ್ಭದಲ್ಲಿ ಅಭ್ಯರ್ಥಿಗಳು ಮತಬೇಟೆಗೆ ಇಳಿದಿದ್ದರೆ, ಮತ ನೀಡುವ ಸಾರ್ವಜನಿಕರು ತಮ್ಮ ತಮ್ಮ ಬೇಡಿಕೆಗಳ ಬಗ್ಗೆ ನಿರೀಕ್ಷೆಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಪಕ್ಷಗಳು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಹೀಗೆ ಪ್ರತಿ ಬಾರಿ ಚುನಾವಣೆ ಬಂದಾಗಲೂ ಬಿಡುಗಡೆ ಮಾಡುವ ಪ್ರಣಾಳಿಕೆಗಳು, ಎಂದಿಗೂ ಜಾರಿಯಾಗುವುದಿಲ್ಲ.

ಅಷ್ಟೇ ಅಲ್ಲದೇ, ರೈತ ಪರ ಪ್ರಣಾಳೀಕೆಗಳು ತೀರಾ ಕಡಿಮೆ. ಈ ಬಾರಿ ರೈತ ಪರ ಪ್ರಣಾಳಿಕೆ ಬಿಡುಗಡೆಯಾಗದೇ ಹೋದರೆ, ಏ.20ರಂದು ಪ್ರತೀ ಹಳ್ಳಿಗಳಲ್ಲೂ ಅಭ್ಯರ್ಥಿಗಳನ್ನು ಪ್ರಶ್ನೆ ಮಾಡಬೇಕು ಎಂದು ತೀರ್ಮಾನಿಸಿರುವುದಾಗಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ರೈತರ ಚುನಾವಣಾ ಪ್ರಣಾಳಿಕೆಗಳು ಏನೇನು ಎಂಬುದನ್ನೂ ತಿಳಿಸಿದ್ದಾರೆ. ಡಾ. ಸ್ವಾಮಿನಾಥನ್ ವರದಿಯಂತೆಯೇ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ಎಲ್ಲರಿಗೂ ಪ್ರತಿ ತಿಂಗಳು ಸಂಬಳ ಸಿಗುವಂತೆಯೇ ರೈತರಿಗೂ ಕನಿಷ್ಠ ಆದಾಯ ಖಾತರಿ ಭದ್ರತೆ ಯೋಜನೆ ಜಾರಿಗೊಳಿಸಬೇಕು. ಹಗಲು ವೇಳೆಯಲ್ಲಿ ಕೃಷಿ ಪಂಪ್ ಸೆಟ್ ಗಳಿಗೆ 12 ಗಂಟೆಗಳ ಕಾಲ ವಿದ್ಯುತ್ ನೀಡಬೇಕು. ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಆಗಬೇಕು ಎಂದು ಕೇಳಲಾಗಿದೆ.

ಇದರ ಜೊತೆಗೆ, ರೈತರಿಗೆ ಬಡ್ಡಿ ರಹಿತವಾಗಿ ಕೃಷಿ ಸಾಲ ಸಿಗಬೇಕು. ಫಸಲ್ ಭೀಮಾ ಬೆಳೆ ವಿಮೆ ಯೋಜನೆಯನ್ನು ತಿದ್ದುಪಡಿ ಮಾಡಿ, ಎಲ್ಲಾ ಬೆಳೆಗಳಿಗೂ ಬೆಳೆ ವಿಮೆ ಅನ್ವಯವಾಗುವಂತೆ ಮಾಡಬೇಕು. ಅಭಿವೃದ್ಧಿ ಹೆಸರಲ್ಲಿ ರೈತರ ಕೃಷಿ ಭೂಮಿ ಭೂಸ್ವಾದಿನ ಪ್ರಕ್ರಿಯೆಗಳನ್ನು ನಿಲ್ಲಿಸಬೇಕು. ಬಾಳೆ ಬೆಳೆಯಂತೆಯೇ ಕಬ್ಬು ಬೆಳೆ ಉತ್ಪಾದನೆಗೂ ಎನ್ಆರ್‌ಇಜಿ ಯೋಜನೆಯನ್ನು ಲಿ೦ಕ್ ಮಾಡಬೇಕು. ರೈತರನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಸರ್ಕಾರಿ ಕೆಲಸದಲ್ಲಿ ಮೀಸಲಾತಿ ನೀಡಬೇಕು.

Exit mobile version