Revenue Facts

ದೇಶಾದ್ಯಂತ ಫೆಬ್ರವರಿ 26 ಕ್ಕೆ ದೆಹಲಿ ಚಲೋಗೆ ರೈತರ ನಿರ್ಧಾರ

ದೇಶಾದ್ಯಂತ ಫೆಬ್ರವರಿ 26 ಕ್ಕೆ  ದೆಹಲಿ ಚಲೋಗೆ ರೈತರ ನಿರ್ಧಾರ

#Farmers’ #decision # Delhi Chalo # February 26 # country

ಬೆಂಗಳೂರು: ದೆಹಲಿಯಲ್ಲಿ(Dehali) ಒಂದು ವರ್ಷ ಕಾಲ ಹೋರಾಟ ಮಾಡಿದ ರೈತರಿಗೆ 2021 ರ ಡಿಸೆಂಬರ್ 21 ರಂದು ಪ್ರಧಾನ ಮಂತ್ರಿಗಳು ನೀಡಿದ್ದ ಭರವಸೆ ಈಡೇರದ ಕಾರಣ ದೇಶಾದ್ಯಂತ ಮುಂದಿನ ಫೆಬ್ರವರಿ 26 ಕ್ಕೆ ದೆಹಲಿ ಚಲೋ (Delhi Chalo) ಮಾಡಲು ರೈತರು ತೀರ್ಮಾನಿಸಿದ್ದಾರೆ. ಸಂಯುಕ್ತ ಕಿಸಾನ್ ಮೋರ್ಚಾ(Samyukta kissan morcha) ಸಂಘಟನೆಯಿಂದ ದೆಹಲಿ ಯಲ್ಲಿ 1 ವರ್ಷ ಹೋರಾಟ ನಡೆಸಿದಾಗ ಬೇಡಿಕೆ ಈಡೇರಿಸುವುದಾಗಿ ಪ್ರಧಾನಿಮೋದಿ ಭರವಸೆ ನೀಡಿದ್ದರು,ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ದೇಶಾದ್ಯಂತ ರೈತರು ಫೆಬ್ರವರಿ 26 ರಂದು ‘ದೆಹಲಿ ಚಲೋ’ ನಡೆಸಲಿದ್ದಾರೆ. ಎಂದು ಭಾರತೀಯ ಸಂಯುಕ್ತ ಕಿಸಾನ್ ಮೋರ್ಚಾ ರಾಷ್ಟ್ರೀಯ ರೈತ ಮುಖಂಡ ಜಗಜೀತ್ ಸಿಂಗ್ ದಲೈವಾಲ ತಿಳಿಸಿದರು.ರೈತರ ಪ್ರಮುಖ 7 ಒತ್ತಾಯಗಳ ಬಗ್ಗೆ ದೆಹಲಿ ಚಲೋ ಹಮ್ಮಿಕೊಂಡಿದೆ. ದೆಹಲಿ ಚಲೋಗೆ ಪೂರ್ವಭಾವಿಯಾಗಿ ರೈತರಲ್ಲಿ ಜಾಗೃತಿ ಮೂಡಿಸಲು 6 ಕಿಸಾನ್ ಮಹಾ ಪಂಚಾಯತ್ಗಳನ್ನು ಒಡಿಶಾದ ಭುವನೇಶ್ವರ, ಪಂಜಾಬ್ನ ಲೂಧಿಯಾನ ಮತ್ತು ಮೊಗಾ, ಕೇರಳದ ಪಾಲಕ್ಕಾಡ್, ತಮಿಳುನಾಡಿನ ಚೆನ್ನೈ ಮತ್ತು ಕರ್ನಾ ಟಕದ ಬೆಂಗಳೂರಿನಲ್ಲಿ ಈಗಾಗಲೇ ನಡೆಸಲಾಗಿದೆ ಎಂದು ಹೇಳಿದರು.

 

ಬೇಡಿಕೆಗಳೇನು

* ದೇಶದ ಎಲ್ಲ ರೈತರನ್ನು ಸಂಪೂರ್ಣ ಕೃಷಿ ಸಾಲದಿಂದ ಋಣಮುಕ್ತರನ್ನಾಗಿಸಬೇಕು.

*ದೆಹಲಿ ಚಲೋ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಡಾ.ಸ್ವಾಮಿನಾಥನ್ ವರದಿಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು.

*ಕೃಷಿ ಉತ್ಪನ್ನಗಳ ಆಮದು ಸುಂಕವನ್ನು ಹೆಚ್ಚಿಸಿ, ಕೃಷಿ ಉತ್ಪನ್ನಗಳ ಬೆಲೆ ಕುಸಿಯದಂತೆ ರಕ್ಷಿಸಬೇಕು. ಭಾರತ ಸರ್ಕಾರ WBTO ದಿಂದ ಹೊರಬರಬೇಕು

*​ಎಂಎಸ್​ಪಿ ಅನ್ನು ಖಾತರಿಪಡಿಸಲು ಕಾನೂನನ್ನು ಮಾಡಬೇಕು. ದೇಶದ ಎಲ್ಲ ರೈತರನ್ನು ಸಂಪೂರ್ಣ ಕೃಷಿ ಸಾಲದಿಂದ ಋಣಮುಕ್ತರನ್ನಾಗಿಸಬೇಕು

* ವಿದ್ಯುತ್ ಮಂಡಳಿಗಳ ಖಾಸಗೀಕರಣ ಬೇಡ. ಕೃಷಿ ಪಂಪ್ಸೆಟ್‌ಗಳಿಗೆ ಉಚಿತ ವಿದ್ಯುತ್ ನಿಲ್ಲಿಸುವ ಹುನ್ನಾರ ನಿಲ್ಲಬೇಕು.

*60 ವರ್ಷ ತುಂಬಿದ ರೈತರಿಗೆ ಮಾಸಿಕ 5 ಸಾವಿರ ಪಿಂಚಣಿ ನಿಗದಿಪಡಿಸಬೇಕು. ಫಸಲ್ ಭೀಮಾ ಬೆಳವಿಮೆ ಯೋಜನೆ ತಿದ್ದುಪಡಿಯಾಗಬೇಕು ಮತ್ತು ಎಲ್ಲ ಬೆಳೆಗಳಿಗೂ ಬೆಳೆ ವಿಮೆ ಜಾರಿಯಾಗಬೇಕು

*ಬಗರುಹುಕುಂ ಸಾಗುವಳಿ ರೈತರಿಗೆ ಸಾಗುವಳಿ ಪತ್ರ ಕೂಡಲೇ ವಿತರಿಸಬೇಕು.

Exit mobile version