Revenue Facts

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ವಸೂಲಿ ಬಾಜಿಯ ಅಸಲಿ ಕಥೆ 8408 ಕೋಟಿ ರೂ. ಹೂಡಿಕೆ, ಒಂದು ಲಕ್ಷ ಕೋಟಿ ಗೂ ಅಧಿಕ ಟೋಲ್ ಕಲೆಕ್ಷನ್ !

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ವಸೂಲಿ ಬಾಜಿಯ ಅಸಲಿ ಕಥೆ    8408 ಕೋಟಿ ರೂ. ಹೂಡಿಕೆ, ಒಂದು ಲಕ್ಷ ಕೋಟಿ ಗೂ ಅಧಿಕ ಟೋಲ್ ಕಲೆಕ್ಷನ್ !

ಬೆಂಗಳೂರು, ಜು. 31: ಎಂಟು ತಿಂಗಳ ಹಿಂದೆ ಸಾರ್ವಜನಿಕ ಬಳಕೆಗೆ ಮುಕ್ತವಾದ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ವಸೂಲಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದೇಶದ ಇತರೆ ರಾಷ್ಟ್ರೀಯ ಹೆದ್ದಾರಿ ಬಳಕೆಯ ಪ್ರತಿ ವಾಹನಕ್ಕೆ ಪ್ರತಿ ಕಿ.ಮೀ.ಗೆ ರೂ. 1.48 ಟೋಲ್ ಶುಲ್ಕ ವಸೂಲಿ ಮಾಡಿದರೆ, ಬೆಂಗಳೂರು ಮೈಸೂರು ಎಕ್ಸ್‌ ಪ್ರೆಸ್ ವೇ ನಲ್ಲಿ ಪ್ರತಿ ಕಿ. ಮೀ. ಒಂದು ವಾಹನಕ್ಕೆ 3. 80 ರೂ. ಟೋಲ್ ಶುಲ್ಕ ವಸೂಲಿ ಮಾಡುತ್ತಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಟೋಲ್ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದ್ದು, ಸಾಮಾಜಿಕ ಜಾಲ ತಾಣದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕ್ರಮದ ವಿರುದ್ಧ ಕಿಡಿ ಕಾರಿದ್ದಾರೆ.
ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ 275 ದಶಪತ ರಸ್ತೆಯನ್ನಾಗಿ ನಿರ್ಮಿಸುವ ಯೋಜನೆ 2018 ರಲ್ಲಿ ಪ್ರಾರಂಭಿಸಲಾಯಿತು. ದಶಪಥ ರಸ್ತೆ ನಿರ್ಮಾಣ ಯೋಜನೆಯ ವೆಚ್ಚ 9000 ಕೋಟಿ ರೂ. ಮಾತ್ರ. 2018 ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಡೆಸಿದ ಸಮೀಕ್ಷೆ ಪ್ರಕಾರ ದಿನಕ್ಕೆ 53 ಸಾವಿರ ವಾಹನಗಳು ಸಂಚರಿಸುತ್ತವೆ ಎಂದು ಹೇಳಲಾಗಿತ್ತು.

ಇದೀಗ 2023 ರ ರಾಷ್ಟ್ರೀಯ ಹೆದ್ದಾರಿ ಸಮೀಕ್ಷೆ ಪ್ರಕಾರ ಒಂದು ಲಕ್ಷಕ್ಕಿಂತಲೂ ಅಧಿಕ ವಾಹನಗಳು ಸಂಚರಿಸುತ್ತಿವೆ. ಇದರ ಮಧ್ಯೆ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ಶುಲ್ಕ ಕಳೆದ ಜೂನ್ ನಲ್ಲಿ ಹೆಚ್ಚಳ ಮಾಡಿದ್ದು, ಅದರ ಪ್ರಕಾರ ದಿನಕ್ಕೆ ಸರಾಸರಿ 8 ರಿಂದ 10 ಕೋಟಿ ರೂ. ಸಂಗ್ರಹವಾಗುತ್ತಿದೆ ಎಂದು ಅಂದಾಜಿಸಲಾಗಿದೆ. 30 ವರ್ಷ ಟೋಲ್ ಶುಲ್ಕ ಸಂಗ್ರಹಿಸಲಾಗಿದ್ದು, ಪ್ರತಿ ವರ್ಷ ಶೇ. 30 ರಷ್ಟು ಟೋಲ್ ಶುಲ್ಕ ಹೆಚ್ಚಳವಾಗಲಿದೆ. ಇದನ್ನು ಲೆಕ್ಕ ಹಾಕಿದರೆ ಬರೋಬ್ಬರಿ ಒಂದು ಲಕ್ಷ ಕೋಟಿ ಕೋಟಿ ರೂ.ಗೂ ಅಧಿಕ ಸಂಗ್ರಹ ಮಾಡಲಾಗುತ್ತಿದೆ. ಕೇವಲ 8408 ಸಾವಿರ ಕೋಟಿ ಹೂಡಿಕೆ ಮಾಡಿ ಒಂದು ಲಕ್ಷ ಕೋಟಿ ರೂ. ಸರಾಸರಿ ಒಂದು ಕಿ.ಮೀ.3.80 ಪೈಸೆ ಸಂಗ್ರಹಿಸುತ್ತಿದ್ದು, ಸಾರ್ವಜನಿಕರಿಂದ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ವಾಹನ ಸವಾರರು ಕಿಡಿ ಕಾರಿದ್ದಾರೆ.

ಲೂಟಿ ಟೋಲ್ : ಬೆಂಗಳೂರು- ಮೈಸೂರು ಎಕ್ಸ್‌ ಪ್ರೆಸ್ ವೇ ಲೂಟಿ ಟೋಲ್ ಆಗಿ ಪರಿವರ್ತನೆ ಅಗಿದೆ. ಇಲ್ಲಿ ದಿನಕ್ಕೆ ಒಂದು ಲಕ್ಷ ವಾಹನಗಳು ಸರಾಸರಿ ಓಡಾಡುತ್ತಿದೆ. ದಶಪಥ ರಸ್ತೆ ಬಳಕೆ ಶುಲ್ಕ ದೇಶದಲ್ಲಿ ಯಾವ ರಾಷ್ಟ್ರೀಯ ಹೆದ್ದಾರಿಗೂ ಅಳವಡಿಸಿಲ್ಲ. ಪರಿಷ್ಕೃತ ಟೋಲ್ ಶುಲ್ಕದ ಪ್ರಕಾರ, ವಾಹನಗಳ ಸಿಂಗಲ್ ಜರ್ನಿಗೆ 165 ರೂ. ರಿಂದ 790 ರೂ. ನಿಗದಿ ಮಾಡಲಾಗಿದೆ. ಅದರಲ್ಲಿ ಅತಿ ಹೆಚ್ಚು ವಾಹನಗಳು ಲಾರಿ ಮತ್ತು ಬಸ್ ಗಳು ಸೇರಿದಂತೆ ದೊಡ್ಡ ಗಾತ್ರದ ವಾಹನಗಳೇ ಅತಿ ಹೆಚ್ಚು ಸಂಚರಿಸುತ್ತಿವೆ.

ರಸ್ತೆ ಸಾರ್ವಜನಿಕ ಬಳಕೆಗೆ ಅವಕಾಶ ನೀಡುತ್ತಿದ್ದಂತೆ ಕಳೆದ ಫೆಬ್ರವರಿಯಲ್ಲಿ ಟೋಲ್ ಶುಲ್ಕವನ್ನು ಪರಿಚಯಿಸಲಾಗಿತ್ತು. ಇದಾದ ಬಳಿಕ ಜೂನ್ ನಲ್ಲಿ ಟೋಲ್ ಶುಲ್ಕ ಪರಿಷ್ಕರಣೆ ಮಾಡಿ ಹೆಚ್ಚಿಸಿದ್ದು, ಇದೀಗ ಎಕ್ಸ್‌ ಪ್ರೆಸ್ ವೇ ಬಳಕೆ ಮಾಡುತ್ತಿರುವ ವಾಹನಗಳು ಟೋಲ್ ಶುಲ್ಕ ನೋಡಿ ಕಂಗಾಲಾಗಿದ್ದಾರೆ. ಕಾರು , ಜೀಪುಗಳಿಗೆ ಏಕ ಮುಖ ರಸ್ತೆ ಬಳಕೆಗೆ 165 ರೂ. ಸಣ್ಣ ಪ್ರಮಾಣದ ಗೂಡ್ಸ್‌ ವಾಹನ ಹಾಗೂ ಮಿನಿ ಬಸ್ ಗಳಿಗೆ 270 ರೂ. ಟ್ರಕ್ ಹಾಗೂ ಬಸ್ ಎರಡು ಆಕ್ಸಲ್ ವಾಹನಗಳಿಗೆ 565 ರೂ. ಹಾಗೂ ಮೂರು ಅಕ್ಸಲ್ ವಾಹನಗಳಿಗೆ 680 ರೂ. ಕನ್‌ಸ್ಟ್ರಕ್ಷನ್ ಮಿಷನರಿ, ವಾಹನಗಳಿಗೆ ಏಕ ಮುಖ ಸಂಚಾರಕ್ಕೆ 825 ರೂ. ಏಳು ಆಕ್ಸಲ್ ದೊಡ್ಡ ಲಗೇಜ್ ವಾಹನಗಲಿಗೆ 1080 ರೂ. ಶುಲ್ಕ ನಿಗದಿ ಮಾಡಲಾಗಿದೆ.

ಪ್ರತಿಭಟನೆ: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ವೇ ಟೋಲ್ ಶುಲ್ಕ ಹೆಚ್ಚಳ ವಿರೋಧಿಸಿ ಹಲವು ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ಮಾಡಿದ್ದವು. ಆದರೂ ಏನೂ ಪ್ರಯೊಜನ ಆಗಿಲ್ಲ. ಎಂಟು ಸಾವಿರ ಕೋಟಿ ಹೂಡಿಕೆ ಮಾಡಿ ಮೂವತ್ತು ವರ್ಷದ ವರೆಗೂ ಟೋಲ್ ವಸೂಲಿಗೆ ಅವಕಾಶ ನೀಡಲಾಗಿದೆ. ಪ್ರತಿ ವರ್ಷ ವಾಹನಗಳ ಸಂಖ್ಯೆ ಹೆಚ್ಚಳವಾಗಲಿದ್ದು, ತಾಂತ್ರಿಕವಾಗಿ ನೋಡುವುದಾದರೆ ಟೋಲ್ ಶುಲ್ಕ ಕಡಿಮೆ ಮಾಡಬೇಕು. ವಾಹನಗಳು ಹೆಚ್ಚಾಗುವ ಜತೆಗೆ ಪ್ರತಿ ವರ್ಷ ಟೋಲ್ ಶುಲ್ಕ ಹೆಚ್ಚಳ ಮಾಡಿ ಸಾರ್ವಜನಿಕರಿಂದ ಸುಲಿಗೆ ಮಾಡಲಾಗುತ್ತಿದೆ. ಕೇವಲ ಬೆಂಗಳೂರು- ಮೈಸೂರು ರಸ್ತೆ ಮಾತ್ರವಲ್ಲದೇ ರಾಜ್ಯದ ಅನೇಕ ಟೋಲ್ ರಸ್ತೆಗಳ ಪರಿಸ್ಥಿತಿ ಇದೇ ಅಗಿದ್ದು ಟೋಲ್ ಶುಲ್ಕದ ಬಗ್ಗೆ ಸಾರ್ವಜನಿಕರಲ್ಲಿ ಅಸಹನೆ ಶುರುವಾಗಿದೆ. ಅದು ಸ್ಫೋಟಗೊಂಡರೆ ಒಂದು ದಿನ ಟೋಲ್ ಶುಲ್ಕದ ಬಗ್ಗೆ ಸಾರ್ವಜನಿಕರು ರೊಚ್ಚಿಗೇಳುವ ದಿನಗಳು ದೂರವಿಲ್ಲ ಎಂದೇ ಹೇಳಲಾಗುತ್ತಿದೆ.

ಅಪಘಾತಗಳಲ್ಲಿ 189 ಮಂದಿ ಸಾವು : ಮೂರು ಗಂಟೆ ಪ್ರಯಾಣವನ್ನು ಕೇವಲ 90 ನಿಮಿಷಕ್ಕೆ ಇಳಿಸಿದ ಪರಿಣಾಮ ಬೆಂಗಳೂರು ಮೈಸೂರು ಎಕ್ಸ್‌ ಪ್ರೆಸ್ ವೇ ನಲ್ಲಿ ಅಪಘಾತಗಳು ಹೆಚ್ಚಾಗಿವೆ. ಪ್ರಾಧಿಕಾರ ನೀಡಿರುವ ದಾಖಲೆಗಳ ಪ್ರಕಾರವೇ ಎಂಟು ತಿಂಗಳಲ್ಲಿ 456 ಅಪಘಾತಗಳು ಸಂಭವಿಸಿವೆ. 189 ಮಂದಿ ಜೀವ ಕಳೆದುಕೊಂಡಿದ್ದಾರೆ. ರಸ್ತೆಯಲ್ಲಿ ಸುರಕ್ಷತಾ ನಿಯಮಗಳೇ ಅಳವಡಿಸಿಲ್ಲ. ಜನರಲ್ಲಿ ಜಾಗೃತಿಯೂ ಮೂಡಿಸಿಲ್ಲ. ವೇಗದ ಹೆಸರಿನಲ್ಲಿ ಜನರ ಜೀವ ತೆಗೆಯಲಾಗುತ್ತಿದೆ ಎಂದು ಸಾರ್ವಜನಿಕರು ಕಿಡಿ ಕಾರಿದ್ದಾರೆ.

Exit mobile version