Revenue Facts

ಈ ದಿಕ್ಕಿನಲ್ಲಿ ರಸ್ತೆ ಕುತ್ತು ಇದ್ರೆ ಮಹಿಳೆಯರು ಉದ್ಯಮ ಸ್ಥಾಪಿಸಿದ್ರೆ ಯಶಸ್ಸು ನಿಶ್ಚಿತ!

ಈ ದಿಕ್ಕಿನಲ್ಲಿ ರಸ್ತೆ ಕುತ್ತು ಇದ್ರೆ ಮಹಿಳೆಯರು ಉದ್ಯಮ ಸ್ಥಾಪಿಸಿದ್ರೆ ಯಶಸ್ಸು ನಿಶ್ಚಿತ!

ಬೆಂಗಳೂರು, ಸೆ. 01: ರಸ್ತೆ ಕುತ್ತು ಇಲ್ಲದ ನಿವೇಶನ ಸಿಗುವುದೇ ಅಪರೂಪ. ರಸ್ತೆ ಕುತ್ತು ಇದ್ದರೆ ಅದನ್ನು ಖರೀದಿ ಮಾಡಬಾರದು. ಅಂತಹ ನಿವೇಶನದಲ್ಲಿ ಮನೆ ಕಟ್ಟಿದರೂ ಉದ್ದಾರ ಅಗಲ್ಲ ಎಂಬ ಸಾಮಾನ್ಯ ಭಾವನೆ ಎಲ್ಲರಲ್ಲಿ ಮೂಡಿದೆ. ಆದರೆ, ವೇದಿಕ್ ವಾಸ್ತು ಶಾಸ್ತ್ರದ ಪ್ರಕಾರ ರಸ್ತೆ ಕುತ್ತು ಇರುವ ನಿವೇಶನಗಳು ಕೂಡ ಅದೃಷ್ಟವಂತ ನಿವೇಶನಗಳೇ.

ಯಾವ ದಿಕ್ಕಿನ ನಿವೇಶನದಲ್ಲಿ ರಸ್ತೆ ಕುತ್ತು ಇದೆ. ಅ ನಿವೇಶನದಲ್ಲಿ ಕಟ್ಟಡ ಯಾವ ರೀತಿ ಕಟ್ಟಬೇಕು ಎಂಬುದು ಮಹತ್ವ ಪಡೆದುಕೊಳ್ಳುತ್ತದೆ. ಈಶಾನ್ಯ, ವಾಯುವ್ಯ, ನೈರುತ್ಯ, ಆಗ್ನೇಯ ದಿಕ್ಕಿನ ನಿವೇಶನಗಳಿಗೆ ರಸ್ತೆ ಕುತ್ತು ಇದ್ದರೆ ಅಂತಹ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ವೇದಿಕ್ ವಾಸ್ತು ತಜ್ಞ ನಯನ್ ಕುಮಾರ್ ಸಮಗ್ರವಾಗಿ ವಿವರಿಸಿದ್ದಾರೆ.

ರಸ್ತೆ ಕುತ್ತು ನಿವೇಶನ ಇರುವ ನಿವೇಶನ ಆಯಾ ಕುತ್ತಿಗೆ ಸಂಬಂಧಪಟ್ಟ ಪಂಚತತ್ವಗಳ ಮೇಲೆ ಆಧಾರಪಟ್ಟಿರುತ್ತವೆ. ಗಾಳಿ, ವಾಯು, ಅಗ್ನಿ, ಜಲ, ಹಾಗೂ ಭೂಮಿ ತತ್ವಗಳು ಇಲ್ಲಿ ಮಹತ್ವ ಪಡೆದುಕೊಳ್ಳುತ್ತವೆ. ಯಾವ ಮೂಲೆಯಲ್ಲಿ ಯಾವ ತತ್ವ ಹೆಚ್ಚಾಗಿರುತ್ತದೋ ಪಂಚತತ್ವಕ್ಕೆ ಸಂಬಂಧಪಟ್ಟ ಕೆಲಸಗಳನ್ನು ಮಾಡುವುದರಿಂದ ಅಂತಹ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡಿ ಶ್ರೇಯಸ್ಸು ಪಡೆಯಬಹುದು. ಯಶಸ್ಸು ಆಗಬಹುದು ಎಂದು ವೇದಿಕ್ ವಾಸ್ತು ಶಾಸ್ತ್ರ ಹೇಳುತ್ತದೆ.

ಈಶಾನ್ಯ- ದಿಕ್ಕಿನ ರಸ್ತೆ ಕುತ್ತು ನಿವೇಶನ: (Road hit on North East site)
ಒಂದು ನಿವೇಶನದ ಈಶಾನ್ಯ ದಿಕ್ಕಿಗೆ ರಸ್ತೆ ಕುತ್ತು ಬಂದರೆ ಅದನ್ನು ಈಶಾನ್ಯ ದಿಕ್ಕಿನ ರಸ್ತೆ ಕುತ್ತು ನಿವೇಶನ ಎಂದು ಕರೆಯುತ್ತೇವೆ. ಈ ನಿವೇಶನದಲ್ಲಿ ನೀರಿನ ತತ್ವ ( ಪಂಚ ತತ್ವಗಳಲ್ಲಿ ಒಂದು) ಅಧಿಕವಾಗಿರುತ್ತದೆ. ಇಲ್ಲಿ ನೀರಿನ ಪಂಚತತ್ವ ಅಧಿಕವಾಗಿರುವುದರಿಂದ ನೀರಿಗೆ ಸಂಬಂಧಪಟ್ಟ ಕೆಲಸ ಜಾಸ್ತಿ ಮಾಡಿದ್ರೆ ಒಳ್ಳೆಯದಾಗುತ್ತದೆ. ಅಂದರೆ, ಡೈರಿ ಫಾರ್ಮಿಂಗ್, ಲ್ಯಾಂಡ್ರೀ, ಶಿಪ್ಪಿಂಗ್, ವಾಟರ್ ಟೆಕ್ನಾಲಜಿ, ಶಿಕ್ಷಣ ಸಂಸ್ಥೆಗಳು, ಹೋಟೆಲ್ ಗಳು, ಫ್ಯಾಕ್ಟರಿಗಳು ಶಾಪ್ ಮತ್ತು ಕಚೇರಿಗಳು ತೆರೆಯುವುದು ಒಳಿತು. ವಾಸ್ತು ಯೋಗಕ್ಕೆ ಕೂಡ ಒಳ್ಳೆಯದು. ಇದರಿಂದ ಒಳ್ಳೆಯ ಆದಾಯ ಮತ್ತು ಶ್ರೇಯಸ್ಸು ಬರುತ್ತದೆ ಎನ್ನುತ್ತದೆ ವೇದಿಕ್ ವಾಸ್ತು ಶಾಸ್ತ್ರ.

ಆಗ್ನೇಯ ದಿಕ್ಕಿನ ವಿಧಿಶೂಲ ನಿವೇಶನ (Road hit on South East site):
ಒಂದು ನಿವೇಶನದ ಆಗ್ನೇಯ ದಿಕ್ಕಿನಲ್ಲಿ ರಸ್ತೆ ಕುತ್ತು ಇದ್ದರೆ ಅದನ್ನು ಆಗ್ನೇಯ ದಿಕ್ಕಿನ ವಿಧಿಸೂಲ ನಿವೇಶನ ಎಂದು ಕರೆಯಲಾಗುತ್ತದೆ. ಈ ನಿವೇಶನದಲ್ಲಿ ಅಗ್ನಿ ತತ್ವ ಅಧಿಕವಾಗಿರುತ್ತದೆ. ಆದ್ದರಿಂದ ಅಗ್ನಿ ಅಥವಾ ಬೆಂಕಿಗೆ ಸಂಬಂಧಿಸಿದ ಕೆಲಸಗಳು ಮಾಡಿದರೆ ಹೆಚ್ಚು ಶ್ರೇಯಸ್ಸು ಮತ್ತು ಅಭಿವೃದ್ಧಿಯಾಗುತ್ತವೆ. ನಿರೀಕ್ಷೆಗೂ ಮೀರಿ ಹಣ ಬರುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ. ಉದಾಹರಣೆಗೆ ರೆಸ್ಟೋರೆಂಟ್, ಬೇಕರಿ, ಆಟೋ ಮೊಬೈಲ್, ಇಂಜಿನ್, ಬಿಲ್ಡಿಂಗ್ ಮೆಟೀರಿಯಲ್, ಮಾರ್ಬಲ್ ಮತ್ತು ಟೈಲ್ಸ್ ಮತ್ತು ಹೋಟೆಲ್ ಗಳು, ಮನರಂಜನಾ ವಹಿವಾಟು, ಅದರಲ್ಲೂ ಮಹಿಳೆಯರ ಯಜಮಾನಿಕೆಯಲ್ಲಿ ನಡೆಸುವ ವಹಿವಾಟುಗಳು ಇಲ್ಲಿ ಹೆಚ್ಚು ಫಲ ನೀಡುತ್ತವೆ. ವಿಶೇಷವಾಗಿ ಈ ವಿಧಿಶೂಲ ನಿವೇಶನದಲ್ಲಿ ಹೆಣ್ಣು ಮಕ್ಕಳು ವಹಿವಾಟು ನಡೆಸಿದರೆ ಹೆಚ್ಚು ಸೂಕ್ತ ಎಂದು ವೇದಿಕ್ ವಾಸ್ತು ಶಾಸ್ತ್ರ ಹೇಳುತ್ತದೆ. ಈ ನಿವೇಶನ ವಾಸಕ್ಕೆ ಕೂಡ ಸೂಕ್ತವಾದುದು.

ವಾಯುವ್ಯ ದಿಕ್ಕಿನ ರಸ್ತೆ ಕುತ್ತು ನಿವೇಶನ (Road hit on north west site):
ವಾಯುವ್ಯ ದಿಕ್ಕಿನಲ್ಲಿ ರಸ್ತೆ ಕುತ್ತು ಇದ್ದರೆ ಅದನ್ನು ವಾಯುವ್ಯ ದಿಕ್ಕಿನ ರಸ್ತೆ ಕುತ್ತು ನಿವೇಶನ ಎಂದು ಕರೆಯಲಾಗುತ್ತದೆ. ಈ ನಿವೇಶನದಲ್ಲಿ ಗಾಳಿ ತತ್ವ ಅಧಿಕವಾಗಿರುತ್ತದೆ. ಗಾಳಿ ತತ್ವಕ್ಕೆ ಸಂಬಂಧಿಸಿದ ಚಟುವಟಿಕೆ ಮಾಡುವುದರಿಂದ ಅಧಿಕ ಯಶಸ್ಸು, ಲಾಭ ಗಳಿಸಬಹುದು. ಏರ್ ಕಂಡೀಷನ್, ಕೃಷಿ ಉಪಕರಣಗಳ ಮಾರಾಟ, ಸಿನಿಮಾ ಹಾಲ್, ಪೆಟ್ರೋಲ್ ಪಂಪ್, ವಾಹನ ಶೋರೂಮ್, ಗ್ಯಾರೇಜ್, ಫ್ಯಾಕ್ಟರಿ ಚಟುಟಿಕೆ ಮಾಡುವುದು ಕ್ಷೇಮ. ಇಲ್ಲಿ ಈ ಚಟುವಟಿಕೆ ಮಾಡಿದರೆ ಅತಿ ಶೀಘ್ರದಲ್ಲಿ ಯಶಸ್ಸು ಗಳಿಸಬಹುದು. ಈ ನಿವೇಶನ ಕೂಡ ವಾಸಕ್ಕೆ ಕೂಡ ಸೂಕ್ತವಾದುದು.

ನೈರುತ್ಯ ದಿಕ್ಕಿನ ರಸ್ತೆ ಕುತ್ತು ನಿವೇಶನ (Road hit on South West site) :
ನಿವೇಶನದ ನೈರುತ್ಯ ದಿಕ್ಕಿನಲ್ಲಿ ರಸ್ತೆ ಕುತ್ತು ಇದ್ದರೆ ಅದನ್ನು ನೈರುತ್ಯ ದಿಕ್ಕಿನ ರಸ್ತೆ ಕುತ್ತು ನಿವೇಶನ ಎಂದು ಕರೆಯುತ್ತೇವೆ. ನೈರುತ್ಯ ದಿಕ್ಕಿಗೆ ರಸ್ತೆ ಕುತ್ತು ಇರುವ ನಿವೇಶನದಲ್ಲಿ ಭೂ ತತ್ವ ಅಧಿಕವಾಗಿರುತ್ತದೆ. ಇದು ವಾಸ ಯೋಗ್ಯವಲ್ಲ. ಇಲ್ಲಿ ಆಸ್ಪತ್ರೆ , ನರ್ಸಿಂಗ್ ಹೋಮ್, ಮೆಡಿಕಲ್ ಕಾಲೇಜ್, ಕ್ಲಿನಿಕ್, ಬಾರ್, ಕ್ಯಾಸಿನೋ, ಟೈರ್, ಉಪಕರಣ, ಮೆಡಿಕಲ್ ಸ್ಟೋರ್, ಹಾರ್ಡ್ ವೇರ್, ಬ್ರೀವರೀಸ್ ( ಮದ್ಯ) ಕಟ್ಟಡ ನಿರ್ಮಾಣ ಸಂಸ್ಥೆಗಳು ಇಂತಹ ಜಾಗದಲ್ಲಿ ನಿರ್ಮಿಸಿದರೆ ಅಧಿಕ ಲಾಭ ತಂದುಕೊಡುತ್ತವೆ. ಜತೆಗೆ ಹೆಚ್ಚು ಶ್ರೇಯಸ್ಸು ಕೂಡ ಹೌದು. ವಿಶೇಷ ಸೂಚನೆ ಏನೆಂದರೆ, ಈ ರೀತಿ ಕುತ್ತು ಇರುವ ನಿವೇಶನದಲ್ಲಿ ಕಟ್ಟಡ ನಿರ್ಮಾಣ ಮಾಡುವಾಗ ನಿವೇಶನಕ್ಕೆ ಸಮಾನಾಂತರವಾಗಿ ಕಾಂಪೌಂಡ್ ನಿರ್ಮಾಣ ಮಾಡಬೇಕು.

ರಸ್ತೆ ಕುತ್ತು ಇರುವ ನಿವೇಶನದಲ್ಲಿ ಕಟ್ಟಡ ನಿರ್ಮಿಸುವಾಗ ಪಾಲಿಸಲೇಬೇಕಾದ ಅಂಶಗಳು:

Exit mobile version