ಜಿಯೋ ಸಿನಿಮಾ ಆಪ್‌ನಲ್ಲಿ ‘ಬಿಗ್ ಬಾಸ್ ಕನ್ನಡ 10’ ಶೋ ಉಚಿತವಾಗಿ ಲೈವ್ ಪ್ರಸಾರ ಆಗುತ್ತಿರುತ್ತದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ನಿತ್ಯ 1.5 ಗಂಟೆಗಳ ಎಪಿಸೋಡ್ ಪ್ರಸಾರ ಆಗುವುದು. ಕಿಚ್ಚ ಸುದೀಪ್ ಅನುಪಸ್ಥಿತಿಯಲ್ಲಿ ಎಲಿಮಿನೇಶನ್ ನಡೆಯಲಿದೆ ಎನ್ನಲಾಗಿದೆ.
ನಟಿ ಶ್ರುತಿ ಅವರು ಬಿಗ್ ಬಾಸ್ ಮನೆಯೊಳಗಡೆ ಹೋಗಿರುವ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ರಿಲೀಸ್ ಮಾಡಿದೆ. ಕಿಚ್ಚ ಸುದೀಪ್ ಅವರಿಲ್ಲದೆ ಈ ವೀಕೆಂಡ್ ಕಳೆಯಬೇಕು. ಹಾಗಾಗಿ ಈ ಶೋಗೆ ಇಬ್ಬರು ಅತಿಥಿಗಳು ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ಆದ್ದರಿಂದ ಭಾನುವಾರ ಇನ್ನೊಬ್ಬ ಅತಿಥಿ ಯಾರು ಬರ್ತಾರೆ..?
‘ವಿನಯ್ ಅವರು ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ಅವರ ಎದುರಿಗೇ ಒಂದು ರೀತಿ ಇರುತ್ತಾರೆ, ವಾರವಿಡೀ ಮನೆಯ ಸದಸ್ಯರ ಜೊತೆಗೇ ಇನ್ನೊಂದು ರೀತಿ ಇರುತ್ತಾರೆ?’ ಎಂದು ಶ್ರುತಿ ಪ್ರಶ್ನೆ ಮಾಡಿದ್ದಾರೆ. ಅಂದರೆ ಶ್ರುತಿವರಿಗೆ ವಿನಯ್ ಮೇಲೆ ಈ ರೀತಿಯ ಅಭಿಪ್ರಾಯವಿದಿಯ
ಇನ್ನು ಇಂದು ರಿಲೀಸ್ ಆಗಿರುವ ಪ್ರೋಮೋದಲ್ಲಿ ಶ್ರುತಿ ಅವರು ಸ್ಪರ್ಧಿಗಳ ಜೊತೆ ಚಟುವಟಿಕೆಯೊಂದರಲ್ಲಿ ಭಾಗಿಯಾಗಿದ್ದಾರೆ. ಶ್ರುತಿ ಅವರು ನ್ಯಾಯಾಧೀಶ ಕುರ್ಚಿಯಲ್ಲಿ ಕೂತು, ಎಲ್ಲ ಸ್ಪರ್ಧಿಗಳನ್ನು ಒಬ್ಬೊಬ್ಬರಂತೆ ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆ ಮಾಡಿದ್ದಾರೆ.
ಸಂಗೀತಾ ನಮ್ರತಾ ಸಹ ವಿನಯ್ ವಿರುದ್ಧ ವಾಗಿ ಮಾತನಾಡಿದ್ದಾರೆ. ಶ್ರುತಿ ಪ್ರಶ್ನೆಗೆ ಸಂಗೀತಾ ಶೃಂಗೇರಿ ಅವರು ತುಂಬ ಪ್ರಬಲವಾಗಿ ಹೌದು ಎಂದಿದ್ದಾರೆ. ಅಷ್ಟೇ ಅಲ್ಲ ಇಷ್ಟು ದಿನಗಳ ಕಾಲ ವಿನಯ್ ಗೌಡ ಆಪ್ತಬಳಗದಲ್ಲಿ ಗುರುತಿಸಿಕೊಂಡಿದ್ದ ನಮ್ರತಾ ಕೂಡ, ‘ನನಗೂ ಹಾಗೇ ಅನಿಸುತ್ತದೆ. ಸುದೀಪ್ ಸರ್ ಎದುರಿಗೆ ಅವರು ಧ್ವನಿತಗ್ಗಿಸಿ ಮಾತಾಡುತ್ತಾರೆ’ ಎಂದು ಹೇಳಿದ್ದಾರೆ. ಈ ಮಾತು ಕೇಳಿ ಸ್ಪರ್ಧಿಗಳು ಅಚ್ಚರಿಗೊಂಡಿದ್ದಾರೆ.
ಈ ಎಲ್ಲರ ಆರೋಪಕ್ಕೆ ವಿನಯ್ ಪ್ರತಿಕ್ರಿಯಿಸಿದ್ದಾರೆ. ಇವ್ರತ್ರೆಲ್ಲ ನಾಟಕ ಮಾಡ್ಕೊಂಡು ನನಗೆ ಏನೂ ಆಗ್ಬೇಕಾಗಿಲ್ಲ ಎಂದಿದ್ದಾರೆ. ನನ್ನ ಬಳಿ ಅಂದರೆ ಶ್ರುತಿ ಅವರು ನ್ಯಾಯಾಧೀಶರ ಬಳಿಯೇ ಧ್ವನಿ ಎತ್ತರಿಸಿ ಮಾತಾಡ್ತೀರಾ?’ ಎಂದು ಪ್ರಶ್ನಿಸುವುದರ ಜೊತೆಗೆ ಅಸಮಧಾನ ಹೊರಹಾಕಿದ್ದಾರೆ. ಇದರಲ್ಲೇ ವಿನಯ್ ಎಂತ ವ್ಯಕ್ತಿತ್ವವನ್ನು ಹೊಂದಿದ್ದಾರೆ.