Revenue Facts

ಮನೆಯ ಫ್ರಂಟ್ ಎಲಿಗೇಷನ್ ಡಿಸೈನ್ ಮಾಡಲು ವಾಸ್ತುವಿನಲ್ಲಿ ನಿರ್ಬಂಧವಿದೆಯಾ..?

ಮನೆಯ ಫ್ರಂಟ್ ಎಲಿಗೇಷನ್ ಡಿಸೈನ್ ಮಾಡಲು ವಾಸ್ತುವಿನಲ್ಲಿ ನಿರ್ಬಂಧವಿದೆಯಾ..?

ಬೆಂಗಳೂರು, ಏ. 03 : ಮನೆಯ ಫೇಸ್ ಲುಕ್ ಎನ್ನುವುದೇ ಎಲಿವೇಷನ್. ಹಾಗಾಗಿ ಎಲಿವೇಷನ್ ಪ್ರಕಾರ ವಾಸ್ತು ಪ್ರಕಾರವೇ ಡಿಸೈನ್ ಗಳನ್ನು ಮಾಡಬೇಖಾಗುತ್ತದೆ. ಇಷ್ಟ ಬಂದಂತೆ ಎಲಿವೇಷನ್ ಅನ್ನು ಡಿಸೈನ್ ಮಾಡುವುದು ಶುಭವಲ್ಲ. ಈಗ ಹಲವು ಬಗೆ ಬಗೆಯ ಎಲಿವೇಷನ್ ಡಿಸೈನ್ ಗಳು ಲಭ್ಯವಿದೆ. ಸ್ವಸ್ತಿಕ್, ಓಂ ಎಂಬ ಡಿಸೈನ್ ಗಳು ಶುಭ ಸೂಚಕವಅಗಿದ್ದು, ವಾಸ್ತು ಪ್ರಕಾರ ಯಾವ ರೀತಿಯ ಎಲಿವೇಷನ್ ಇದ್ದರೆ, ಸೂಕ್ತ ಎಂಬುದನ್ನು ಮೊದಲು ನೋಡೋಣ ಬನ್ನಿ.

ಇನ್ನು ಓಂ ಹಾಗೂ ಸ್ವಸ್ತಿಕ್ ಅಲ್ಲದೇ, ಸರ್ಕಲ್, ಸ್ಕ್ವಯರ್ ಸೇರಿದಂತೆ ಹಲವು ಬಗೆಯ ಶೇಪ್ ಗಳಲ್ಲಿ ಮನೆಯ ಎಲಿವೇಷನ್ ಡಿಸೈನ್ ಅನ್ನು ಮಾಡಲಾಗುತ್ತದೆ. ಇವುಗಳಲ್ಲಿ ಹೆಚ್ಚಿನದಾಗಿ ಎಲ್ಲರೂ ಶುಭ ಸಂಕೇತದ ಎಲಿವೇಷನ್ ಗಳನ್ನು ಮಾಡುತ್ತಾರೆ. ಓಂ, ಸ್ವಸ್ತಿಕ್ ಡಿಸೈನ್ ಅಥವಾ ಕೆಲವರು ದೇವರ ರೂಪಗಳು, ಗಣೇಷ, ತಿಮ್ಮಪ್ಪ, ಈಶ್ವರ ಸೇರಿದಮತೆ ಹಲವು ಎಲಿವೇಷನ್ ಗಳನ್ನು ಮಾಡಿಸುತ್ತಾರೆ. ಇವೆಲ್ಲವೂ ಕೂಡ ಶುಭ ಸೂಚಕದ ಎಲಿವೇಷನ್ ಗಳಾಗಿವೆ.

ಇನ್ನು ಎರಡನೇಯದಾಗಿ, ಸುಮಾರು ಜನ ಎಲಿವೇಷನ್ ಅನ್ನು ಕಟ್ ಮಾಡುತ್ತಾರೆ, ಇಲ್ಲವೇ ಕಟ್ ಮಾಡುತ್ತಾರೆ. ಎಲಿವೇಷನ್ ಅನ್ನು ಒಂದು ಮೂಲೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇಲ್ಲವೇ ಮಧ್ಯಭಾಗದಲ್ಲಿ ಎಲಿವೇಷನ್ ಅನ್ನು ತೋರಿಸುತ್ತಾರೆ. ಇದೆಲ್ಲವೂ ಏನಾಗುತ್ತದೆ ಎಂದರೆ ಮಿಸ್ ಮ್ಯಾಚ್ ಆಗುತ್ತದೆ. ಒಂದು ಕಡೆ ಎಕ್ಸ್ ಟೆಂಷನ್, ಒಂದು ಕಡೆ ಕಟ್ ಆಗಿರುತ್ತದೆ. ಇದೆಲ್ಲಾ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಎಲಿವೇಷನ್ ಅನ್ನು ಹಅಕುವಾಗ ಬಹಳ ಗಮನವಿಡಬೇಕಾಗುತ್ತದೆ.

ಇನ್ನು ಮೂರನೇಯದಾಗಿ ಎಲಿವೇಷನ್ ಗೂ ಮನೆಗೂ ನಿಕಟ ಸಂಬಂಧ ಇರುತ್ತದೆ. ಮನೆಯ ಎದುರು ಬಂದು ನಿಂತಾಗ ಆ ಎಲಿವೇಷನ್ ಅನ್ನು ನೋಡಿದಾಗ ಅದಕ್ಕೆ ಎಷ್ಟು ಪೇಸ್ ಲಿಫ್ಟ್ ಅನ್ನು ಕೊಡುತ್ತದೆ ಎಂಬುದನ್ನು ತಿಳಿದುಕೊಂಡೇ ಮಾಡಬೇಕಾಗುತ್ತದೆ. ಕೆಲವರು ಬಬಲ್ಸ್ ಡಿಸೈನ್ ಅನ್ನು ಮಾಡಿರುತ್ತಾರೆ. ತಪ್ಪೇನಲ್ಲ. ಅದರಲ್ಲಿ ಕಲರ್ ಅನ್ನು ತುಂಬಿರಲಾಗುತ್ತದೆ. ಇದು ಶುಭ ಸಂಕೇತವನ್ನೇ ಕೊಡುತ್ತದೆ. ಇನ್ನು ಕೆಲವರು ಆರ್ಕಿಟೆಕ್ಚರ್ ಮಾಡುವಾಗ ಪರೊಜೆಕ್ಷನ್ಸ್, ಕಟ್ ಮಾಡುವುದನ್ನೆಲ್ಲಾ ಮಾಡುತ್ತಾರೆ. ಹಾಗಾಗಿ ಎಚ್ಚರ ವಹಿಸಿ ಮಾಡಿಕೊಳ್ಳುವುದರಿಂದ ಶುಭವಾಗುತ್ತದೆ.

ಇನ್ನು ಕೆಲವು ಕಡೆ ಪೊರ್ಟಿಕೋ ಮಾಡುವಾಗ ಕಟ್ ಮಾಡಿರುತ್ತೇವೆ. ಆಗ ಎಲಿವೇಷನ್ ಅನ್ನು ಈ ಕಟ್ ಎಫೆಕ್ಟ್ ಅನ್ನು ಫುಲ್ ಮಾಡಿಕೊಳ್ಳಬಹುದು. ಆಗ ಮನೆಗೆ ಪಾಸಿಟಿವ್ ಎನರ್ಜಿ ಅನ್ನು ಕೊಡುತ್ತದೆ. ವಾಸ್ತು ಪ್ರಕಾರ ಎಲಿವೇಷನ್ ಮಾಡಿಕೊಳ್ಳುವುದು ಅಗತ್ಯವಾಗಿದ್ದು, ಇದು ಶುಭವನ್ನು ಮನೆಗೆ ತಂದು ಕೊಡುತ್ತದೆ.

Exit mobile version