Revenue Facts

ಕೆಇಆರ್‌ಸಿ’ ಯಿಂದ ರಾಜ್ಯದಲ್ಲಿ ವಿದ್ಯುತ್‌ ದರ ಇಳಿಕೆ;51 ಪೈಸೆ ಕಡಿತ

ಬೆಂಗಳೂರು;ನವೆಂಬರ್(November) ತಿಂಗಳಲ್ಲಿ ಇಂಧನ ಮತ್ತು ವಿದ್ಯುತ್ ಖರೀದಿ ಹೊಂದಾಣಿಕೆ ವೆಚ್ಚ(Electricity purchase adjustment cost) ಇಳಿಕೆ ಆಗಿರುವ ಕಾರಣ ರಾಜ್ಯದ ಎಲ್ಲ ಎಸ್ಕಾಂಗಳು(Electricity Supply Company) ಗ್ರಾಹಕರಿಗೆ ಜನವರಿ ತಿಂಗಳಲ್ಲಿ ನೀಡುವ ವಿದ್ಯುತ್ ಬಿಲ್‌ನಲ್ಲಿ ಪ್ರತಿ ಯೂನಿಟ್ ಗೆ 3 ಪೈಸೆಯಿಂದ 51 ಪೈಸೆವರೆಗೂ ಕಡಿತಗೊಳಿಸಲು ನಿರ್ಧರಿಸಿವೆ.ಇಂಧನ ಮತ್ತು ವಿದ್ಯುತ್‌ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕೆಇಆರ್‌ಸಿ ವಿದ್ಯುತ್‌ ದರ ಇಳಿಸಿದ್ದು, ಪ್ರಸಕ್ತ ಜನವರಿ ತಿಂಗಳಲ್ಲಿ ವಿದ್ಯುತ್‌ ಬಿಲ್‌ ಕಡಿಮೆಯಾಗಲಿದೆ.ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(Bescom) ಪ್ರತಿ ಯೂನಿಟ್‌ಗೆ 37 ಪೈಸೆಯನ್ನು ಕಡಿತಗೊಳಿಸುವುದಾಗಿ ತಿಳಿಸಿದೆ. ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ (Jescom), ಪ್ರತಿ ಯೂನಿಟ್‌ ಗೆ 51 ಪೈಸೆ, ಹೆಸ್ಕಾಂ(Hescom) ವ್ಯಾಪ್ತಿಯಲ್ಲಿ 3 ಪೈಸೆ, ಸೆಸ್ಕ್ ವ್ಯಾಪ್ತಿಯಲ್ಲಿ 39 ಪೈಸೆ ಮತ್ತು ಮೆಸ್ಕಾಂ ವ್ಯಾಪ್ತಿಯಲ್ಲಿ 31 ಪೈಸೆ ಕಡಿತಗೊಳಿಸುವುದಾಗಿ ಆಯಾ ಕಂಪನಿಗಳು ತಿಳಿಸಿವೆ.ಡಿಸೆಂಬರ್ ತಿಂಗಳಲ್ಲಿ ಗ್ರಾಹಕರು ಬಳಸಿದ ಗೃಹ ಬಳಕೆ, ವಾಣಿಜ್ಯ ಸೇರಿದಂತೆ ಎಲ್ಲ ವಿಧದ ವಿದ್ಯುತ್ ಶುಲ್ಕದ ಮೇಲೆ ಪ್ರತಿ ಯೂನಿಟ್‌ಗೆ ಮೇಲೆ ತಿಳಿಸಿರುವಷ್ಟು ಹಣವನ್ನು ಆಯಾ ಕಂಪನಿಗಳು ಕಡಿತಗೊಳಿಸುತ್ತವೆ.ರಾಜ್ಯ ಸರಕಾರದ ಗೃಹ ಜ್ಯೋತಿಯೋಜನೆಯಡಿ ಉಚಿತವಾಗಿ 200 ಯೂನಿಟ್ ವಿದ್ಯುತ್ ಬಳಸುವ ಗ್ರಾಹಕರಿಗೆ ಇದರಿಂದ ಪ್ರಯೋಜನವಾಗುವುದಿಲ್ಲ. 200 ಯೂನಿಟ್ಠಿಂತ ಹೆಚ್ಚು ವಿದ್ಯುತ್ ಬಳಸುವ ಗೃಹಬಳಕೆ ಹಾಗೂ ವಾಣಿಜ್ಯ ಬಳಕೆದಾರರಿಗೆ ಸ್ವಲ್ಪ ಮಟ್ಟಿಗೆ ಅನುಕೂಲವಾಗಲಿದೆ.

Exit mobile version