Revenue Facts

ರಾಜ್ಯಸಭೆಯ 56 ಸ್ಥಾನಗಳಿಗೆ ಚುನಾವಣೆ ಘೋಷಣೆ!

ರಾಜ್ಯಸಭೆಯ 56 ಸ್ಥಾನಗಳಿಗೆ ಚುನಾವಣೆ ಘೋಷಣೆ!

#Election #announcement # 56 R#ajya Sabha seats

ನವದೆಹಲಿ;15 ರಾಜ್ಯಗಳ ರಾಜ್ಯಸಭೆಯ 56 ಸ್ಥಾನಗಳಿಗೆ ಫೆಬ್ರವರಿ 27 ರಂದು ಚುನಾವಣೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ಪ್ರಕಟಿಸಿದೆ. 56 ಸದಸ್ಯರ ಏಪ್ರಿಲ್ ನಲ್ಲಿ ಮುಕ್ತಾಯಗೊಳ್ಳಲಿದ್ದು, ಕರ್ನಾಟಕದಲ್ಲಿ 4 ಸ್ಥಾನ ಸೇರಿದಂತೆ ಒಟ್ಟು 15 ರಾಜ್ಯಗಳಲ್ಲಿ ಈ ಚುನಾವಣೆ ನಡೆಯಲಿದೆ ಎಂದು ಅದು ತಿಳಿಸಿದೆ.ಫೆಬ್ರವರಿ 27ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮತದಾನ (Voting) ನಡೆಯಲಿದೆ ಎಂದು ಚುನಾವಣೆ ಆಯೋಗವು ಮಾಹಿತಿ ನೀಡಿದೆ.ಉಮೇದುವಾರಿಕೆ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನವಾಗಿದೆ ಎಂದು ಚುನಾವಣೆ ಆಯೋಗ ತಿಳಿಸಿದೆ. ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿ ಒಟ್ಟು 15 ರಾಜ್ಯಗಳ 56 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಫೆಬ್ರವರಿ 16ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಫೆಬ್ರವರಿ 20 ನಾಮಪತ್ರ ವಾಪಸ್‌ ಪಡೆಯಲು ಕೊನೆಯ ದಿನವಾಗಿದೆ. ಮತದಾನ ನಡೆಯುವ ಫೆಬ್ರವರಿ 27ರಂದೇ ಫಲಿತಾಂಶ ಲಭ್ಯವಾಗಲಿದೆ.

ಯಾವ ರಾಜ್ಯಗಳಲ್ಲಿ ಎಷ್ಟು ಸ್ಥಾನಗಳಿಗೆ ಚುನಾವಣೆ?
ರಾಜ್ಯ ಸ್ಥಾನ
ಕರ್ನಾಟಕ – 4 ಸ್ಥಾನ
ಆಂಧ್ರಪ್ರದೇಶ – 3 ಸ್ಥಾನ
ಬಿಹಾರ – 6 ಸ್ಥಾನ
ಛತ್ತೀಸ್‌ಗಢ – 1 ಸ್ಥಾನ
ಗುಜರಾತ್ – ‌4 ಸ್ಥಾನ
ಹರಿಯಾಣ – 1 ಸ್ಥಾನ
ಹಿಮಾಚಲ ಪ್ರದೇಶ – 1 ಸ್ಥಾನ
ಮಧ್ಯಪ್ರದೇಶ – 5 ಸ್ಥಾನ
ಮಹಾರಾಷ್ಟ್ರ – 6 ಸ್ಥಾನ
ತೆಲಂಗಾಣ -3 ಸ್ಥಾನ
ಉತ್ತರ ಪ್ರದೇಶ – 10 ಸ್ಥಾನ
ಉತ್ತರಾಖಂಡ – 1 ಸ್ಥಾನ
ಪಶ್ಚಿಮ ಬಂಗಾಳ – 5 ಸ್ಥಾನ
ಒಡಿಶಾ – 3 ಸ್ಥಾನ
ರಾಜಸ್ಥಾನ -3 ಸ್ಥಾನ
ಒಟ್ಟು 56

Exit mobile version