Revenue Facts

ಗೃಹಲಕ್ಷ್ಮಿ ಹಣ ಪಡೆಯಲು Ekyc ಮತ್ತು NPCI ಕಡ್ಡಾಯ

ಗೃಹಲಕ್ಷ್ಮಿ  ಹಣ ಪಡೆಯಲು Ekyc ಮತ್ತು NPCI ಕಡ್ಡಾಯ

#Ekyc # NPCI # mandatory # Grilahakshmi #money

ಬೆಂಗಳೂರು;ಗೃಹಲಕ್ಷ್ಮಿ(Gruhalakshmi) ಹಣ ಪಡೆಯಲು ಸರ್ಕಾರ ಹೊಸ ರೂಲ್ಸ್ ತಂದಿದೆ ಎನ್ನಲಾಗುತ್ತಿದೆ. ಇಕೆವೈಸಿ(EKYC), ಆಧಾರ್ ಸೀಡಿಂಗ್(Aadhar seeding) ಮಾಡಿದ್ದರೂ ಕೂಡ ಇನ್ಮುಂದೆ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಡೆಯಬೇಕಾದ್ರೆ ಕಡ್ಡಾಯವಾಗಿ ಎನ್‌ಪಿಸಿಐ(NPCI) ಮಾಡಿಸಲೇ ಬೇಕಾಗಿದೆ. ಎನ್‌ಪಿಸಿಐ ಮಾಡಿಸದೇ ಇದ್ದರೆ ನಿಮ್ಮ ಖಾತೆಗೆ ಗೃಹಲಕ್ಷ್ಮೀ ಯೋಜನೆಯ ಹಣ ಜಮೆ ಆಗುವುದಿಲ್ಲ. ನಿಮ್ಮ ಸಮೀಪದ ಬ್ಯಾಂಕ್‌ಗೆ ತೆರಳಿ ಆಧಾರ್ ಕಾರ್ಡ್, ರೇಷನ್ ಕಾರ್ಡ್ ದಾಖಲಾತಿಯ ಜೊತೆಗೆ ಬ್ಯಾಂಕ್ ವಿವರವನ್ನು ನೀಡಿದ್ರೆ, ಎನ್‌ಪಿಸಿಐ ಮಾಡಿಕೊಡುತ್ತಾರೆ.ಈಗಾಗಲೇ ಐದು ಕಂತುಗಳ ಹಣವನ್ನು ಸ್ವೀಕಾರ ಮಾಡಿದ್ದಾರೆ. 6ನೇ ಕಂತಿನ ಹಣಕ್ಕಾಗಿ ಕಾದು ಕುಳಿತಿದ್ದಾರೆ. ಈ ನಡುವಲ್ಲೇ ಸರಕಾರ ಗೃಹಲಕ್ಷ್ಮೀ ಯೋಜನೆಯ ಹಣ ಪಡೆಯಲು ಹೊಸ ರೂಲ್ಸ್‌ ಜಾರಿ ಮಾಡಿದ್ದು, ಎನ್‌ಪಿಸಿಐ (NPCI) ಕಡ್ಡಾಯ ಗೊಳಿಸಿದೆ.ನ್ಯಾಷನಲ್‌ ಪೇಮೆಂಟ್‌ ಕಾರ್ಪೋರೇಷನ್‌ ಆಫ್‌ ಇಂಡಿಯಾ (National Payment Corporation of India- NPCI) ಪ್ರತಿಯೊಬ್ಬರೂ ಕೂಡ ಇನ್ಮುಂದೆ ಎನ್‌ಪಿಸಿಐ ಮಾಡಿಸಲೇ ಬೇಕಾಗಿದೆ. ಎನ್‌ಪಿಸಿಐಯನ್ನು ನಿಮ್ಮ ಸಮೀಪದ ಬ್ಯಾಂಕ್‌ಗೆ ತೆರಳಿ ಮಾಡಿಸಿಕೊಳ್ಳಬಹುದಾಗಿದೆ. ಆಧಾರ್‌ ಕಾರ್ಡ್‌ (Aadhaar Card) , ರೇಷನ್‌ ಕಾರ್ಡ್‌ (Ration Card) ದಾಖಲಾತಿಯ ಜೊತೆಗೆ ಬ್ಯಾಂಕ್‌ ವಿವರವನ್ನು ನೀಡಿದ್ರೆ, ಎನ್‌ಪಿಸಿಐ ಮಾಡಿಸಿಕೊಡುತ್ತಾರೆ.ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಐದು ಕಂತುಗಳ ಹಣ ಲಭಿಸಿಲ್ಲ. ಹೀಗಾಗಿ ಈಗಾಗಲೇ ಮೂರು, ನಾಲ್ಕು ಕಂತುಗಳ ಹಣ ಪಾವತಿಯಾಗಿ ಉಳಿದ ಹಣ ಪಾವತಿ ಆಗದೇ ಇದ್ದರೆ, ಅಂತಹವರ ಖಾತೆಗೆ ಹಣ ಜಮೆ ಮಾಡಲು ರಾಜ್ಯ ಸರಕಾರ ನಿರ್ಧಾರ ಮಾಡಿದೆ. ಹೀಗಾಗಿ 6ನೇ ಕಂತು ಪಾವತಿಯ ವೇಳೆಯಲ್ಲಿ ಬಾಕಿ ಇರುವ ಹಣವೂ ಕೂಡ ಜಮೆ ಆಗಲಿದೆ.

Exit mobile version