Revenue Facts

140.22 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡ ಇಡಿ

140.22 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡ ಇಡಿ

ಬೆಂಗಳೂರು, ಜು. 31 : ವಂಚನೆ ಪ್ರಕರಣವೊಂದನ್ನು ಬೇಧಿಸಿದ ಇಡಿ ಅಧಿಕಾರಿಗಳು ಕೋಟಿಗಟ್ಟಲೆ ಬೆಲೆ ಬಾಳುವ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಹುಬ್ಬಳ್ಳಿಯ ಉದ್ಯಮಿ ಸಂಜಯ್ ಧನಚಂದ್ ಘೋಡಾವತ್ ಎಂಬುವರಿಗೆ ಶೀತಲ್ ಕುಮಾರ್ ಮಾನೆರೆ ಹಾಗೂ ಸಹೋದ್ಯೋಗಿಗಳು ವಂಚನೆ ಮಾಡಿದ್ದಾರೆ ಎಂಸು ಆರೋಪಿಸಲಾಗಿದೆ. ಈ ಹಿನ್ನೆಲೆ ಇವರಿಗೆ ಸಂಬಂಧಿಸಿದ 140.22 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ಆರೋಪಿ ಶೀತಲ್ ಕುಮಾರ್ ಮಾನೆರೆ ಹಾಗೂ ಸಹಚರರು ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ಹೂಡಿಕೆ ಮಾಡಲು ಸಂಜಯ್ ಘೋಡಾವತ್ ಅವರ ಮೂಲಕ 7525 ಕೋಟಿ ಹೂಡಿಕೆ ಮಾಡಿಸಿದ್ದರು. ತದ ನಂತರದಲ್ಲಿ ಅವರಿಗೆ ಮಾಹಿತಿಯನ್ನೇ ನೀಡದೇ ಶೀತಲ್ ಅವರು ಹಣವನ್ನು ಮಂಗಮಾಯ ಮಾಡಿದ್ದರು. ಇದರಿಂದ ವಂಚೆನೆಗೆ ಒಳಗಾದ ಸಂಜಯ್ ಅವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಹುಬ್ಬಳ್ಳಿಯ ಅಶೋಕನಗರ ಠಾಣೆಗೆ ತೆರಳಿ ಎಫ್ಐಆರ್ ದಾಖಲಿಸಲಾಯ್ತು.

ಈ ಬಗ್ಗೆ ತನಿಖೆಯನ್ನು ಕೂಡ ನಡೆಸಲಾಗಿತ್ತು. ಆಗ ತನಿಖೆಯಲ್ಲಿ ಶೀತಲ್ ಕುಮಾರ್ ಅವರು ಮಾಡಿರುವ ವಂಚನೆ ಮಾಡಲಾಗಿದೆ. ಹುಬ್ಬಳ್ಳಿಯ ಅಶೋಕನಗರ ಠಾಣೆಯಲ್ಲಿ ದಾಖಲಾದ ಪ್ರಕರಣ ಆಧರಿಸಿ ಇ.ಡಿ ಅಧಿಕಾರಿಗಳು ಪ್ರತ್ಯೇಕ ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದರು. ಶೀತಲ್ ಕುಮಾರ್ ಮತ್ತು ಸಹಚರರು ಸಂಜಯ್ ಅವರಿಂದ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಪಡೆದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದ್ದರು. ಶೀತಲ್, ಅವರ ಕುಟುಂಬದ ಸದಸ್ಯರು ಮತ್ತು ಜಿನೇಂದ್ರ ಮಗ್ಗುಮ್ ಎಂಬವರ ಖಾತೆಗಳಿಗೆ ಆ ಹಣವನ್ನು ವರ್ಗಾಯಿಸಿರುವುದು ಪತ್ತೆಯಾಗಿತ್ತು.

ಹೀಗಾಗಿ ಆರೋಪಿಗಳು ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಸ್ಥಿರಾಸ್ಥಿಗಳನ್ನು ಹೊಂಣದಿದ್ದಾರೆ. ಒಟ್ಟು 12 ಸ್ಥಿರಾಸ್ತಿಗಳನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಜಮೀನು, ವಾಣಿಜ್ಯ ಕಟ್ಟಡ, ಪವನ ವಿದ್ಯುತ್ ಘಟಕ, ಅಪಾರ್ಟ್ಮೆಂಟ್ ಮತ್ತು ಮನೆಗಳು ಈ ಆಸ್ತಿಗಳಲ್ಲಿ ಸೇರಿವೆ ಎಂದು ಮಾಹಿತಿ ನೀಡಿದ್ದಾರೆ. ಇವೆಲ್ಲಾ ಒಟ್ಟು 140.22 ಕೋಟಿ ಮೌಲ್ಯದ್ದಾಗಿದೆ.

Exit mobile version