Revenue Facts

ಶಿವಮೊಗ್ಗ DCC ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡರ ನಿವಾಸದ ಮೇಲೆ ED ದಾಳಿ

ಶಿವಮೊಗ್ಗ DCC ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡರ ನಿವಾಸದ ಮೇಲೆ ED ದಾಳಿ

#ED raid # Shimoga #DCC Bank #Chairman #Manjunath Gowda# residence

ಶಿವಮೊಗ್ಗ: ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ R M ಮಂಜುನಾಥ್ ಗೌಡ ಮೂರು ನಿವಾಸಗಳ ಮೇಲೆ ಇಡಿ((ED Raid) ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಬೆಂಗಳೂರು ನಿವಾಸ ಸೇರಿದಂತೆ ತೀರ್ಥಹಳ್ಳಿ , ಬೆಟ್ಟಮಕ್ಕಿ ಕರಕುಚ್ಚಿ ನಿವಾಸಗಳ ಮೇಲೆ ದಾಳಿ ನಡೆದಿದೆ.ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿರುವ ಮನೆಗಳ ಮೇಲೆ ಬೆಳ್ಳಂಬೆಳಗ್ಗೆ ಇಡಿ(ED) ಅಧಿಕಾರಿಗಳು (ಜಾರಿ ನಿರ್ದೇಶನಾಲಯ) ದಾಳಿ ಮಾಡಿ, ತನಿಖೆ ನಡೆಸುತ್ತಿದ್ದಾರೆ. ಸರ್ಕಾರಿ ಕಾರುಗಳಲ್ಲಿ ಆಗಮಿಸಿರುವ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನೆ ಸುತ್ತಲು ಶಸ್ತ್ರಾಸ್ತ್ರ ಸಜ್ಜಿತವಾಗಿ ಪೊಲೀಸರನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ. ಆರ್.ಎಂ. ಮಂಜುನಾಥಗೌಡ ಸ್ವಲ್ಪದಿನಗಳ ಹಿಂದೆ ಅಷ್ಟೇ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು,ಇದರ ಬೆನ್ನಲ್ಲೇ ಇಡಿ ದಾಳಿ ನಡೆದಿದೆ.

Exit mobile version