Revenue Facts

ED Raids; ಕೇಜ್ರಿವಾಲ್ ಗೆ ಸಮನ್ಸ್‌ ಬೆನ್ನಲ್ಲೇ ದೆಹಲಿ ಸಚಿವ ಮನೆ ಮೇಲೆ ED ದಾಳಿ

ED Raids; ಕೇಜ್ರಿವಾಲ್ ಗೆ ಸಮನ್ಸ್‌ ಬೆನ್ನಲ್ಲೇ  ದೆಹಲಿ ಸಚಿವ  ಮನೆ ಮೇಲೆ ED ದಾಳಿ

#ED attacks #summoning #Kejriwal #Delhi minister’s #house # attacked # ED

ನವದೆಹಲಿ: ಅಕ್ರಮ ಹಣ ವರ್ಗಾವಣೆ(Illegal money transfer)ಪ್ರಕರಣದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ(ED) ಗುರುವಾರ ದಾಳಿ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ದೆಹಲಿ ಸರ್ಕಾರದ ಮತ್ತೊಬ್ಬ ಸಚಿವರಿಗೆ ಇಡಿ ಶಾಕ್ ಕೊಟ್ಟಿದೆ. ಸಮಾಜ ಕಲ್ಯಾಣ ಸಚಿವ ರಾಜಕುಮಾರ್ ಆನಂದ್ ಮನೆ ಮೇಲೆ ಇಡಿ(ED) ದಾಳಿ ನಡೆಸಿದ್ದು, 9 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಯಾವ ಪ್ರಕರಣದಲ್ಲಿ ಈ ದಾಳಿ ನಡೆಸಲಾಗುತ್ತಿದೆ ಎಂಬುದು ಸ್ಪಷ್ಟವಾಗಿಲ್ಲ. ಇಂದು ಸಿಎಂ ಕೇಜಿವಾಲ್ ಕೂಡ ಇಡಿ(ED) ಕಚೇರಿಗೆ ತೆರಳಲಿದ್ದಾರೆ. ಮದ್ಯ ಹಗರಣ(Alchohal scam)ಪ್ರಕರಣದಲ್ಲಿ ಅವರನ್ನು ವಿಚಾರಣೆ ನಡೆಸಲಾಗುತ್ತದೆ. ಈ ಪ್ರಕರಣದಲ್ಲಿ ಎಎಪಿಯ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಕೂಡ ಜೈಲಿನಲ್ಲಿದ್ದಾರೆ.ಸಿವಿಲ್ ಲೈನ್ಸ್(Civil Lines) ಪ್ರದೇಶದಲ್ಲಿರುವ ಸಚಿವರ ನಿವೇಶನ ಮತ್ತು ಇತರ ಕೆಲವು ಸ್ಥಳಗಳಲ್ಲಿ ಇಡಿ ಅಧಿಕಾರಿಗಳು ಶೋಧ ನಡೆಸತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

57 ವರ್ಷದ ಆನಂದ್ ಅವರು ಅರವಿಂದ್ ಕೇಜ್ರಿವಾಲ್(Arvindakrejiwal) ನೇತೃತ್ವದ ಸರ್ಕಾರದಲ್ಲಿ ಸಮಾಜ ಕಲ್ಯಾಣ ಮತ್ತು SC/ST ಕಲ್ಯಾಣ ಸಚಿವರಾಗಿದ್ದಾರೆ. ಅವರು ಪಟೇಲ್ ನಗರದ ಶಾಸಕರಾಗಿದ್ದಾರೆ.ಇಂದು ED ಮುಂದೆ ಸಿಎಂ ಅರವಿಂದ್ ಕೇಜಿವಾಲ್ ಹಾಜರಾಗುತ್ತಿಲ್ಲ ಎಂದು ವರದಿಯಾಗಿದ. ಅವರು ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗಾಗಿ ಸಿಂಗ್ರೆಲಿಗೆ ಹೋಗಲಿದ್ದು, ಅಲ್ಲಿ ರೋಡ್ ಶೋ & ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹಾಗಾಗಿ ವಿಚಾರಣೆಗೆ ಹೋಗುತ್ತಿಲ್ಲ ಎನ್ನಲಾಗಿದೆ. ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ED ಸಿಎಂ ಕೇಜಿವಾಲ್‌ಗೆ ಸಮನ್ಸ್ ನೀಡಿತ್ತು. ಅದಕ್ಕಾಗಿ ಅವರು ಇಂದು ವಿಚಾರಣೆಗೆ ಹಾಜರಾಗಬೇಕಿತ್ತು,ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಬರುವಂತೆ ದೆಹಲಿ ಸಿಎಂ ಕೇಜ್ರವಾಲ್‌ಗೆ ಇಡಿ(ED) ಸಮನ್ಸ್ ಜಾರಿ ಮಾಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸಿಎಂ, ಈ ನೋಟಿಸ್ ಕಾನೂನು ಬಾಹಿರ ಮತ್ತು ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ. 5 ರಾಜ್ಯಗಳ ವಿಧಾನಸಭಾ ಚುನಾವಣೆಯ ಹಿನ್ನಲೆ ಈ ಷಡ್ಯಂತ್ರವನ್ನು ಮಾಡಲಾಗಿದೆ. ಬಿಜೆಪಿಯ ಒತ್ತಾಯದ ಮೇರೆಗೆ ನೋಟಿಸ್ ನೀಡಲಾಗಿದೆ. ಇಡಿ (ED)ಈ ನೋಟಿಸ್ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

Exit mobile version