Revenue Facts

ಹೀರೋ ಮೋಟೋಕಾರ್ಪ್ ಅಧ್ಯಕ್ಷರ ಮನೆ ಮೇಲೆ ಇಡಿ ದಾಳಿ

ಹೀರೋ ಮೋಟೋಕಾರ್ಪ್ ಅಧ್ಯಕ್ಷರ ಮನೆ ಮೇಲೆ ಇಡಿ ದಾಳಿ

ಬೆಂಗಳೂರು, ಆ. 01 :ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೀರೋ ಮೋಟೋಕಾರ್ಪ್ ಕಾರ್ಯನಿರ್ವಾಹಕ ಅಧ್ಯಕ್ಷ ಪವನ್ ಮುಂಜಾಲ್ ಮತ್ತು ಇತರ ಕೆಲವರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಇಡಿ ಅಧಿಕಾರಿಗಳು ದೆಹಲಿಯಲ್ಲಿರುವ ಪವನ್ ಮುಂಜಾಲ್ ಅವರ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.ಅಘೋಷಿತ ವಿದೇಶಿ ಕರೆನ್ಸಿಯನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ಮುಂಜಾಲ್‌ ನಿಕವರ್ತಿಯೊಬ್ಬರ ವಿರುದ್ಧ ವಿರುದ್ಧ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ತನಿಖೆ ನಡೆಸುತ್ತಿದ್ದು, ಡಿಆರ್‌ಐ ದೂರಿನ ಮೇರೆಗೆ ಈ ದಾಳಿ ನಡೆದಿದೆ.ಈ ಬೆಳವಣಿಗೆ ಬೆನ್ನಲ್ಲೇ ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಕಂಪನಿಯ ಷೇರುಗಳು ಶೇ. 4.4ರಷ್ಟು ಭಾರೀ ಇಳಿಕೆ ಕಂಡಿದ್ದು, ಷೇರಿನ ದರ ದಿನದ ಕನಿಷ್ಠ ಮಟ್ಟ 3,063 ರೂ.ಗೆ ಇಳಿಕೆ ಕಂಡಿತ್ತು.

Exit mobile version